Friday, September 30, 2011






ನಶಿಸುತ್ತಿರುವ ಬತ್ತದ ಕೃಷಿಗೆ 'ಜೀವ' ಕೊಡುತ್ತಿರುವ ನಮ್ಮ ಎಳೆಯ ರೈತರು   (ವಿದ್ಯಾರ್ಥಿಗಳು ) 

ಬೇಸಾಯದ ಹಲವು ಮಜಲುಗಳ ಒಂದು ಝಲಕ್   




 

Wednesday, September 28, 2011

ನಮ್ಮ ಶಾಲಾ ರಕ್ಷಕ -ಶಿಕ್ಷ ಕ  ಸಂಘದ ಆಶ್ರಯದಲ್ಲಿ ಅಧ್ಯಾಪಕ ದಿನಾಚರಣೆಯಂದು ಸುದೀರ್ಘ ಸೇವೆಯಿಂದ ನಿವೃತ್ತ ರಾದ  ಶ್ರೀಮತಿ ಸರಸ್ವತಿ ಟೀಚರ್ ಅವರಿಗೆ  ಅವರ ಮನೆಯಲ್ಲಿ  ಗುರುವಂದನೆ ಸಲ್ಲಿಸಲಾಯಿತು 

teachers day 2011


Tuesday, September 27, 2011

ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆ,ಸ್ವರ್ಗ
ಅಂಚೆ :ಪಡ್ರೆ -671552,ಕಾಸರಗೋಡು ಜಿಲ್ಲೆ
ದೂರವಾಣಿ ; 04998-266162
  
ಕರ್ನಾಟಕ ಕೇರಳ ಗಡಿನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮವು ಒಂದು ನಿಸರ್ಗ ರಮಣೀಯ ತಾಣವಾಗಿದೆ.ತೆಂಗು,ಕಂಗು,ಗೇರು,ಬಾಳೆಯ ತೋಟಗಳಿಂದಲೂ ಸಸ್ಯಸಮೃದ್ಧ ಬೆಟ್ಟ,ಗುಡ್ಡ,ಕಣಿವೆಗಳಿಂದಲೂ ಶೋಭಿಸುತ್ತಿರುವ ಇದರ ಹೃದಯಭಾಗದಲ್ಲಿದೆ ಈ ಶಾಲೆ.ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವು ದುರ್ಲಭವೆನಿಸಿಕೊಂಡಿದ್ದ ಕಾಲದಲ್ಲಿ 81 ವರ್ಷಗಳ ಹಿಂದೆ 'ಪಡ್ರೆ ತೋಟದಬೈಲು ಶಾಲೆ' ಎಂಬ ಅಭಿಧಾನದೊಂದಿಗೆ ಆರಂಭಗೊಂಡು ಆಗ ಮದ್ರಾಸು ಪ್ರಾಂತ್ಯದಲ್ಲಿದ್ದ ಮತ್ತು ಈಗ ಕೇರಳ ರಾಜ್ಯದಲ್ಲಿರುವ ಈ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯು ವಾಲ್ತಾಜೆ  ದಿ. ಹೃಷೀಕೇಶ ಭಟ್ಟರ ವಿದ್ಯಾಸಕ್ತಿ ಮತ್ತು ಪರಿಶ್ರಮಗಳಿಂದ ಬೆಳೆದು ಬಂದು ಇಂದು ಸುತ್ತುಮುತ್ತಲ ಪ್ರಾಥಮಿಕ ವಿದ್ಯಾಭ್ಯಾಸದ ಆವಶ್ಯಕತೆಗಳನ್ನು ಸಮರ್ಥವಾಗಿ ಪೂರೈಸುತ್ತ ಕೇರಳರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದು ಎಂಬ ಕೀರ್ತಿಗೆ ಭಾಜನವಾಗಿದೆ.
ಇಲ್ಲಿ ಶಿಕ್ಷಣಪಡೆದವರಲ್ಲಿ ಅನೇಕರು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಹೊಂದಿದ್ದಾರೆ.ಇನ್ನು ಕೆಲವರು ಸರಕಾರದ ಉತ್ತಮ ಹುದ್ದೆಗಳಲ್ಲಿದ್ದಾರೆ.ಮತ್ತೆ ಕೆಲವರು ವಿದೇಶಗಳಲ್ಲಿ ಉದ್ಯೋಗ ನಿರತರಾಗಿ ಯಶಸ್ವೀ ಜೀವನ ನಡೆಸುತ್ತಿದ್ದಾರೆ.
ಈ ರೀತಿ ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತ್ತಿಗಾಗಿ ಮತ್ತು ಅವರು ಭಾರತದ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುವ  ನೀತಿಯುತ ಹಾಗೂ ಮೌಲ್ಯಾಧಾರಿತ  ಶಿಕ್ಷಣದೊಂದಿಗೆ     ಆಟೋಟಗಳು,ಸ್ಕೌಟ್ಸ್,ಕಲೆ,ಸಂಗೀತ,ಸಾಹಿತ್ಯ,ಭಾಷಣ ಮುಂತಾದ ಪಠ್ಯೇತರ ಚಟುವಟಿಕೆಗಳಿಗೂ ಇಲ್ಲಿ ನಿರಂತರ ಪ್ರೋತ್ಸಾಹ ದೊರೆಯುತ್ತ ಬಂದಿದೆ.ಮಾತ್ರವಲ್ಲ ಅನ್ಯಾನ್ಯಕ್ಷೇತ್ರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ,ತರಬೇತಿನೀಡಿ,ಅವರನ್ನು ಸಮರ್ಥರನ್ನಾಗಿಸುವ ಕಾರ್ಯವನ್ನು ಇಲ್ಲಿಯ ಉತ್ಸಾಹಭರಿತ ಅಧ್ಯಾಪಕ,ಅಧ್ಯಾಪಿಕೆಯರು ಮಾಡುತ್ತ ಬಂದಿರುವುದು ಊರಿಗೆಲ್ಲ ತಿಳಿದ ಸಂಗತಿಯೇ ಆಗಿದೆ.ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಅನಿರೀಕ್ಷಿತ ಅಡೆತಡೆಗಳು ಬಂದಾಗಲೆಲ್ಲ ಅದು ಸುಸೂತ್ರವಾಗಿ ನಡೆಯುವಂತೆ ಊರವರೆಲ್ಲ ಸಹಕರಿಸುತ್ತಾ ಬಂದಿರುವುದು ಅವರಿಗೆ ಶಾಲೆಯ ಮೇಲಿರುವ ಪ್ರೀತಿ,ಮಮಕಾರಗಳಿಗೆ ಸಾಕ್ಷಿಯಾಗಿ ನಿಂತಿದೆ
 2004 ನಮ್ಮ ಸಂಸ್ಥೆಗೆ_ ಸ್ವಾಮಿ ವಿವೇಕಾನಂದ ಶಾಲೆಗೆ 75 ಸಂವತ್ಸರಗಳು ತುಂಬಿದ ಶುಭ ಸಂದರ್ಭ. ರಕ್ಷಕರ,ಊರವರ ಮಹದಾಶೆಯಂತೆ 'ಅಮೃತ ಮಹೋತ್ಸವ'ಆಚರಣೆ ಈ ಉತ್ಸವವು ಚಿರಸ್ಮರಣೀಯವಾಗಿ ಉಳಿಯುವಂತೆ ರೂ.16 ಲಕ್ಷ ಖರ್ಚಿನ 7 ಪಾಠದ ಕೊಠದಿಗಳು,ಒಂದು 'ತೆರೆದ ರಂಗ ಮಂದಿರ'ವನ್ನೊಳಗೊಂಡ ಎರಡಂತಸ್ತಿನ ಭವ್ಯ ಕಟ್ಟಡದ ನಿರ್ಮಾಣವಾಯಿತು. ದೀರ್ಘಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೄತ್ತರಾಗಿರುವ ಹಿರಿಯ ಗುರುವರ್ಗದ ಮಾರ್ಗದರ್ಶನ, ಸದಾ ಬೆನ್ನುತಟ್ಟಿ ಉತ್ಸಾಹ ತುಂಬುತ್ತಿರುವ ಪಾಲಕರು, ಊರವರು, 'ನಿಮ್ಮೊಂದಿಗೆ ನಾವೂ ಇದ್ದೇವೆ' ಎನ್ನುವ ಶಾಲೆಯ ಹಳೆವಿದ್ಯಾರ್ಥಿಗಳು, ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕವೃಂದದ ಸಹರ್ಷ ಸಹಾಯ ಸಹಕಾರಗಳು , ಪರವೂರಿನ ವಿದ್ಯಾಭಿಮಾನಿಗಳ ಸಕಾಲಿಕ ನೆರವಿನಿಂದ ಈ ಸಾಧನೆ ಸಾಧ್ಯವಾಯಿತೆಂದು ತಿಳಿಸಲು ಸಂತೋಷಪಡುತ್ತೇವೆ.
                   ಯಶಸ್ಸಿನ ಹಲವು ಯಶೋಗಾಥೆಗಳು ಕಾಲಗರ್ಭದಲ್ಲಿ ಮರೆಯಾದಂತೆ ಇನ್ನು ಕೆಲವು ನಿರಂತರತೆಯನ್ನು ಕಾಯ್ದುಕೊಳ್ಳುವುದರೊಂದಿಗೆ ಜನಮಾನಸದಲ್ಲಿ ಸ್ಥಾಯಿಯಾಗಿದೆ. ಸುಸ್ಥಿತಿಯಲ್ಲಿರುವ 10 ಕಂಪ್ಯೂಟರ್ ಗಳು ವೈವಿಧ್ಯತೆಯ ಸರಿಸುಮಾರು ನಾಲ್ಕುಸಾವಿರ ಪುಸ್ತಕಗಳ ಉತ್ತಮ ಗ್ರಂಥ ಭಂಡಾರ, ಓದುವ ಮೂಲೆ,ಮಕ್ಕಳ ಸ್ವಯಂ ನಿರ್ವಹಣೆಯಲ್ಲಿ ಪತ್ರಿಕೆಗಳಲ್ಲೂ ಸ್ಥಾನ ಪಡೆದ  'ಫ್ರೆಂಡ್ಲಿ ಟೊಯ್ಲೆಟ್','ಆತ್ಮೀಯ ' 'ಸಂಗಾತಿ' ಹೆಸರಿನ ಯುರಿನಲ್ಗ್ 'ಸ್ವರ್ಗ ಶಾಲೆ'ಯ ಪ್ರತ್ಯೇಕತೆಗೆ ಹಿಡಿದ ಕೈಗನ್ನಡಿಯಾಗಿದೆ.
                    ಜನರಿಂದ ದೂರವಾಗುತ್ತಿರುವ'ಗದ್ದೆಬೇಸಾಯ'ದ ಕಡೆಗೆ ಮಕ್ಕಳೂ ಊರವರೂ ಆಸಕ್ತರಾಗಬೇಕೆಂಬ ಸದುದ್ದೇಶದಿಂದ ನಡೆಸಿದ 'ಕೆಸರುಗದ್ದೆಯಲ್ಲೊಂದು ದಿನ' ವಿಶಿಷ್ಟ ಆಚರಣೆ,ಮಕ್ಕಳೂ,ರಕ್ಷಕರೂ,ಅಧ್ಯಾಪಕರೂ ಸೇರಿ ನಡೆಸಿದ ಬೇಸಾಯದ ಹಲವು ಮಜಲುಗಳು,ಕೃಷಿ ಸಂವಾದ ಕಾಯಕ್ರಮ, ಅಧ್ಯಾಪಕರ ಮಾರ್ಗದರ್ಶನ ,ಮಕ್ಕಳ ಶ್ರಮದಿಂದ ನಾಲ್ಕೂರುಗಳಲ್ಲಿ ಸುದ್ದಿಮಾಡಿದ ತರಕಾರಿತೋಟ,ಹತ್ತುಹಲವರ 'ದೃಷ್ಟಿ' ಗೆ ಕಾರಣವಾದ ತರಕಾರಿ ಉತ್ಪನ್ನಗಳು ಸುದ್ದಿಮಾಧ್ಯಮಗಳ ಬೆರಗಿಗೆ ಸಾಕ್ಷಿಯಾದುದು ಸುಳ್ಳಲ್ಲ.
                    ಮಕ್ಕಳ ಕಲಿಕಾಮಟ್ಟದ ಪ್ರಗತಿಗಾಗಿ, ಶಾಲೆಯಲ್ಲಿ ಆಗಾಗ ನಡೆಸುತ್ತಿರುವ ರಕ್ಷಕ ಶಿಕ್ಷಕ ಸಮಾವೇಶ,'ಹೆತ್ತವರ ದಿನಾಚರಣೆ'ಮಕ್ಕಳಿಗಾಗಿ ನಡೆಸುವ    ಶೈಕ್ಷಣಿಕ ಪ್ಪ್ರವಾಸಗಳಲ್ಲೂ,ಬಯಲುಪ್ರವಾಸಗಳಲ್ಲೂ,,ರಕ್ಷಕರು   ಪಾಲ್ಗೊಳ್ಳುತ್ತಿರುವುದು ಹೆತ್ತವರ-ರಕ್ಷಕರ ಅನುಭವಗಳಿಗೆ ವೇದಿಕೆಯಾಗಿ ಮೂಡಿಬಂದ ಕಿರುಹೊತ್ತಗೆಗಳು -ಸ್ವರ್ಗ ಶಾಲೆಯ ಸವಿಶೇಷತೆಗಳು  ;  

    ಬಂಧುಗಳೇ ಶಾಲಾಚಟುವಟಿಕೆಗಳ ಒಂದಷ್ಟು ಮಾಹಿತಿಗಳು-ಸಾಕ್ಷ್ಯಗಳೊಂದಿಗೆ ನಿಮ್ಮಮುಂದೆ ತೆರೆದಿಡುತ್ತಿದ್ದೇವೆ.ನಿಮ್ಮ ಯಾವುದೇ ಪ್ರತಿಕ್ರಿಯೆಗೂ ಸ್ವಾಗತ. ನಿಮ್ಮ ಸಲಹೆ ಸೂಚನೆಗಳು ಸಂಸ್ಥೆಯ ಮುನ್ನಡೆಗೆ ಒಂದು'ಟಾನಿಕ್'ಆಗಬಲ್ಲದು ಎಂಬುದರಲ್ಲಿ ಅನುಮಾನವಿಲ್ಲ. ಸ್ಪಂದಿಸುವಿರೆಂಬ ದೄಢ ವಿಶ್ವಾಸದೊಂದಿಗೆ..............."ನಿಮ್ಮವರು"  
ನನ್ನ ಶಾಲೆ

      ಸೌಂದರ್ಯ ಸೊಬಗಿನ ತಾಣದಲಿ
        ಸುಂದರ ಪರಿಸರದ ಮಧ್ಯದಲಿ
          ಸ್ವರ್ಗ ಶಾಲೆ ಎಂಬ ಹೆಸರಿನಲಿ
          ಮಿನುಗುತಿರುವುದು ನಮ್ಮ ಊರಿನಲಿ

Wednesday, September 21, 2011

ಕಥೆ

ಒಂದಾನೊಂದು ಊರು
ಆ ಊರಲಿ ಇಲಿಗಳು ನೂರು

ನಮ್ಮ ಶಾಲೆ

ನಮ್ಮ ಶಾಲೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದಲ್ಲಿದೆ. ಪಕ್ಕದಲ್ಲಿ ಕರ್ನಾಟಕ ರಾಜ್ಯವಿದೆ. ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ನೀಡುತ್ತಿದೆ.  ಇಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಲಾಗುವುದು.