Friday, July 1, 2016



                  ವಿಶ್ವ ಯೋಗ ದಿನ

ಓರ್ವ ವ್ಯಕ್ತಿಯು ರೋಗಗಳಿಂದ ಮುಕ್ತವಾಗಿದ್ದರೆ ಮಾತೃ ಆರೋಗ್ಯವಂತ ಎನಿಸಿಕೊಳ್ಳಲು ಸಾಧ್ಯವಿಲ್ಲ. ಆತನ, ಶಾರೀರಿಕ, ಮಾನಸಿಕ ಸದೃಢತೆ ಯೋಗದ ಪಾತ್ರ ಮಹತ್ತರವಾದುದು. ಮಾನಸಿಕ ಗೊಂದಲ, ಗಲಿಬಿಲಿ, ಒತ್ತಡ ಇತ್ಯಾದಿಗಳಿಗೆಲ್ಲಾ ರಾಮಬಾಣದಂತಿರುವ  ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸುವುದರಿಂದ ಮನಸ್ಸಿನ ಏಕಾಗ್ರತೆ, ಮಾನಸಿಕ ಶಾಂತಿ, ನೆಮ್ಮದಿ ಲಭಿಸುವುದು, ಯೋಗಾಭ್ಯಾಸದ ಕೆಲವು ಪ್ರಭೇದವನ್ನು ಮಕ್ಕಳಲ್ಲಿ ಬೆಳೆಸಿರುವುದರಿಂದ ಕಲಿಕೆಯ ಆಶಯ ಗ್ರಹಣಕ್ಕೆ ಹೆಚ್ಚು ಪ್ರಯೋಜನಕಾರಿಯಾಗುವುದು. ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಎಲ್.ಪಿ ಹಾಗೂ ಯು.ಪಿ ವಿಭಾಗದ ಮಕ್ಕಳಿಗೆ ಪ್ರತ್ಯಪ್ರತ್ಯೇಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

                               ಎಲ್.ಪಿ ತರಗತಿಯ ಮಕ್ಕಳಿಗೆ ಶಿಕ್ಷಕ ಶ್ರಿ ಪದ್ಮನಾಭ ಸರ್ ರವರು ಸರಳ ವ್ಯಾಯಾಮ ಹಾಗೂ ಶ್ರೀಮತಿ ಗೀತಾಂಜಲಿ ಟೀಚರ್ ಸೂರ್ಯ ನಮಸ್ಕಾರ ಹಾಗೂ ಶಿಕ್ಷಕ ಸಚ್ಚಿದಾನಂದ ಸರ್ ರವರು ಪ್ರಾಣಾಯಾಮದ ಕೆಲವು ಪ್ರಭೇಧವನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಪರಿಚಯಿಸಿಕೊಟ್ಟರು. ಯು.ಪಿ ತರಗತಿಗಳಲ್ಲಿ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಯೋಗದ ಮಹತ್ವವನ್ನು ತಿಳಿಸುವುದರೊಂದಿಗೆ, ಸೂರ್ಯ ನಮಸ್ಕಾರ, ಪ್ರಾಣಾಯಾಮವನ್ನು ತಿಳಿಸಿಕೊಟ್ಟರು.









                          ಶಾಲಾ ಮಕ್ಕಳಿಗೆ ಕೊಡೆ ವಿತರಣೆ

ನಮ್ಮಶಾಲೆಯಲ್ಲಿ ತಾರೀಕು ೨೦.೦೬.೨೦೧೬ ರಂದು ೧ನೇ ತರಗತಿಯ ಮಕ್ಕಳಿಗೆ ಕೇರಳ ಗ್ರಾಮೀಣ ಬ್ಯಾಂಕಿನ ವತಿಂದ ವ್ಯವಸ್ಥಾಪಕರಾದ ಶಿವರಾಮ್ ಇವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪಿ.ಟಿ.ಎ ಯ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಹಾಗೂ ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಇವರು ಮಕ್ಕಳಿಗೆ ಕೊಡೆಯನ್ನು ವಿತರಿಸಿದರು. ಬ್ಯಾಂಕಿನ ಉದ್ಯೋಗಿ ಅಶ್ವೀನ್ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ ಎಸ್ ಇವರು ವಂದನಾರ್ಪಣೆ ಗೈದರು.