Tuesday, September 8, 2015

 ಶಿಕ್ಷಕರ  ದಿನಾಚರಣೆ
ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ರಕ್ಷಕ ಶಿಕ್ಷಕ ಸಂಘ, ಮಾತೃ ಮಂಡಳಿ, ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನೊಳಗೊಂಡು ಈ ಪ್ರದೇಶದ ಹಿರಿಯ ಶಿಕ್ಷಕರಾದ ಖ್ಯಾತ ಶಿಶು ಸಾಹಿತಿ ವಿ.ಮ ಭಟ್ ಅಡ್ಯನಡ್ಕ ಇವರ ಸ್ವಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ’ಜಗದ್ಗುರುವಾಗಿರುವ ಶ್ರೀಕೃಷ್ಣನ ಜನ್ಮ ದಿನಾಚರಣೆಯಂದೇ ಶಿಕ್ಷಕರ ದಿನಾಚರಣೆಯು ಮೇಳೈಸಿದುದು ನಮ್ಮೆಲ್ಲರ ಯೋಗವಾಗಿದೆ’. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮನುಷ್ಯ ಜೀವನದ ನಾನಾ ಮಜಲುಗಳಲ್ಲಿರಬೇಕಾದ ಸ್ಥಿತಿಗತಿಗಳನ್ನು ವಿವರಿಸಿದರೆ, ಶ್ರೀ ರಾಮನು ಸ್ವತಃ ಜೀವನಕ್ಕೆ ಅನುಸರಿಸಲು ಯೋಗ್ಯವಾದುದು. ಯಾರು ಸಮಾಜದಲ್ಲಿ ತನ್ನನ್ನು ಪರರಿಗೊಸ್ಕರವಾಗಿ ಸಮರ್ಪಿಸಿಕೊಳ್ಳುತ್ತಾರೋ ಅವರಲ್ಲಿ ನನ್ನ ಅಂಕ ಅಧಿಕವಾಗಿದೆ ಎಂಬುದಾಗಿ ಶ್ರೀಕೃಷ್ಣನು ವಿಭೂತಿ ಯೋಗ ದಲ್ಲಿ ಉಲ್ಲೇಖಿಸುತ್ತಾನೆ. ಅಂತಹ ವಿಭೂತಿ ಪುರುಷರಾದ ಡಾ|ಎಸ್ ರಾಧಾಕೃಷ್ಣನ್ ರವರ ಬದುಕು ನಮಗೆಲ್ಲರಿಗೂ ಅನುಸರನೀಯವಾಗಲಿ, ಶಿಕ್ಷಕರನ್ನು ಗೌರವಿಸುವುದು ಮುಂದಿನ ತಲೆಮಾರಿಗೆ ನೀಡುವ ಸಂದರ್ಭವಾಗಿದೆ. ಇಬ್ಬರು ರಾಷ್ಟ್ರಾಧ್ಯಾಕ್ಷರುಗಳಾದ ಡಾ|ಎಸ್ ರಾಧಾಕೃಷ್ಣನ್ ಮತ್ತು ಡಾ| ಎ.ಪಿ.ಜೆ ಅಬ್ದುಲ್ ಕಲಾಂರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂತಹ ಕೆಲಸಗಳು ನಿಮ್ಮ ಸಂಸ್ಥೆಯಿಂದ ನಿರಂತರ ನಡೆಯಲಿ, ನಿಮ್ಮೆಲ್ಲರ ಒಗ್ಗಟ್ಟಿನ ಫಲವೇ ಈ ರೀತಿಯ ಕಾರ್ಯಕ್ರಮಗಳ ಯಶಸ್ಸು ಎಂದು ಸಂತಸದಿಂದ ಹಾರೈಸಿದರು. ಹಾಗೆಯೇ ಇನ್ನೋರ್ವ ಹಿರಿಯ ಶಿಕ್ಷಕಿ ಶ್ರೀಮತಿ ಸೀತು ಟೀಚರ್ ಬಜಕೂಡ್ಲು ಇವರ ನಿವಾಸಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ೮೩ ರ ತನ್ನ ಇಳಿವಯಸ್ಸಿನಲ್ಲಿ ಈ ಗೌರವಾರ್ಪಣೆ ಸಮಾಜದ ಮುಖಿ ಚಿಂತನೆಯ ಫಲವಾಗಿ ಎಂದು ಸಂತಸಪಟ್ಟರು. ತಾನು ಸುದೀರ್ಘ ೩೮ ವರುಷಗಳ ಅಧ್ಯಾಪನ ವೃತ್ತಿಯಿಂದ ಬಹಳ ನೆಮ್ಮದಿ ಪಡೆದಿದೆ, ನನ್ನಿಂದ ವಿದ್ಯಾರ್ಜನೆಗೈದ ಸುಶಿಕ್ಷಿತ ಸಮಾಜದ ಕಾರಣ ಕರ್ತರಾದ ಶಿಷ್ಯರು ನನ್ನ ಜೀವನದ ಆಸ್ತಿ ಎಂಬುದಾಗಿ ತನ್ನ ಮನದಾಳದ ಮಾತುಗಳಿಂದ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್, ಪಿ.ಟಿ.ಎ. ಅಧ್ಯಕ್ಷ ಲಕ್ಷ್ಮೀಪ್ರಿಯ ಸರಳಾಯ, ಶಿಕ್ಷಕರಾದ ಕೆ.ಶಿವರಾಮ್ ಭಟ್, ಶ್ರೀಮತಿ ಗೀತಾಕುಮಾರಿ, ಶ್ರೀಮತಿ ಗೀತಾಂಜಲಿ, ಕು|ಜಯಲಕ್ಷ್ಮಿ.ಕೆ, ಶ್ರೀ ಪದ್ಮನಾಭ ಆರ್, ಶ್ರೀ ಮಿಥುನ್ ವಿ.ಆರ್, ಎಸ್.ಎನ್ ವೆಂಕಟ ವಿದ್ಯಾಸಾಗರ, ಶ್ರೀ ಸಚ್ಚಿದಾನಂದ ಎಸ್ ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು. 





  ಸಂಸ್ಕ್ರತ ದಿನಾಚರಣೆ 
     ಸಂಸ್ಕ್ರತದ ಪಿತ ಪಾನಿಣಿಯವರ ಜನ್ಮದಿನವಾದ ನೂಲ ಹುಣ್ಣಿಮೆಯಂದು ಎಲ್ಲೆಡೆ ಸಂಸ್ಕ್ರತ ದಿನಾಚರಣೆಯನ್ನು ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 
ಸಂಸ್ಕ್ರತ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಸ್ತು ಪ್ರದರ್ಶನವನ್ನು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ದೀಪ ಬೆಳಗಿಸಿ ಉಧ್ಘಾಟಿಸಿದರು. ನಮ್ಮ ದಿನ ನಿತ್ಯದ ಬಳಕೆಯ ನಿತ್ಯೋಪಯೋಗಿ ಹಲವಾರು ವಸ್ತುಗಳನ್ನು ಸಂಸ್ಕ್ರತ ನಾಮಧ್ಯೇಯಯೊಂದಿಗೆ ಪ್ರದರ್ಶಿಸಲಾಯಿತು. ಈ ಸಂದರ್ಭ ಗ್ರಂಥಾಲಯದಲ್ಲಿರುವ ಹಲವಾರು ಸಂಸ್ಕ್ರತ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ನಂತರ ೧ ರಿಂದ ೭ ನೇ ತರಗತಿಯ ಎಲ್ಲಾ ಸಂಸ್ಕ್ರತ ಮಕ್ಕಳನ್ನು ಸೇರಿಕೊಂಡು ಅಭಿನಯ ಗೀತೆ, ಸಮೂಹಗಾನ, ನೃತ್ಯ ಮೊದಲಾದ ಮನರಂಜನಾ ಕಾರ್ಯಕ್ರಮ ಜರಗಿತು. ಸಂಸ್ಕ್ರತ ಶಿಕ್ಷಕರಾದ ಕೆ.ಶಿವರಾಮ್  ಭಟ್‌ರವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದು, ಈ ಸಂದರ್ಭದಲ್ಲಿ ಎಲ್ಲರು ಸಂಸ್ಕ್ರತವನ್ನು ಅರಿತು ಭವಿಷ್ಯದಲ್ಲಿ ಉತ್ತಮ ಸಂಸ್ಕ್ರತ ಪಾಂಡಿತ್ಯವನ್ನು ಗಳಿಸಿರೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಅಕ್ಷಯ್ ವೈ, ರಂಜನ್ ಎಸ್ ಹಾಗೂ ಗಿರೀಶ ಕಾರ್ಯಕ್ರಮ ನಿರೂಪಿಸಿದರು.








 ಉಚಿತ ಸಮವಸ್ತ್ರ ವಿತರಣೆ
           ನಮ್ಮ ಶಾಲೆಯಲ್ಲಿ ಸರಕಾರದ ವತಿಯಿಂದ ದೊರೆತ ಉಚಿತ ಸಮವಸ್ತ್ರವನ್ನು ವಾರ್ಡ್ ಸದಸ್ಯ ಶ್ರೀ ರವಿ.ಕೆ ಯವರು ಮಕ್ಕಳಿಗೆ ವಿತರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರಿಯ ಸರಳಾಯ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ಉಪಸ್ಥಿತರಿದ್ದರು.



Thursday, September 3, 2015



         ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆ

ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲಾ ಮಾತೃ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಶಾಲಾ ಪರಿಸರದಲ್ಲಿ ಜರಗಿತು. ಪುರೋಹಿತರಾದ ಸಜಂಗದ್ದೆ ಶ್ರೀಧರ ಭಟ್ ಮತ್ತು ಬಳಗದವರ ನೇತೃತ್ವದಲ್ಲಿ ಹಿರಿಯ ಮುತ್ತೈದೆ ಶ್ರೀಮತಿ ಸುಗುಣಾ ಬರೆಕರೆಯವರು ಪೂಜೆ ನೆರೆವೇರಿಸಿದರು. ಮಾತೆಯರಿಂದ ಲಲಿತಾಸಹಸ್ರನಾಮ ಪಾರಾಯಣ ನಡೆಯಿತು. ಶಾಲಾ ಸಂಸ್ಕ್ರತ ಶಿಕ್ಷಕ ಶ್ರೀ ಶಿವರಾಮ ಭಟ್ .ಕೆ ಯವರು ವರಮಹಾಲಕ್ಷ್ಮೀ ವ್ರತಾಚರಣೆಯ ಮಹತ್ವವನ್ನು ನೆರೆದವರಿಗೆಲ್ಲ ಮನದಟ್ಟಾಗುವಂತೆ ತಿಳಿಸಿದರು. 
ಈ ಸಂದರ್ಭದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡುತ್ತಿರುವ ಮಾತೃ ಸಂಘದ ಸದಸ್ಯರಾದ ಶ್ರೀಮತಿ ಅನುರೂಪ ಕೆದಂಬಾಯಿ ಮೂಲೆ ಹಾಗೂ ಶ್ರೀಮತಿ ನಯನಾ ಬಳಕ್ಕ ಇವರನ್ನು ಗೌರವಿಸಲಾಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಶಾಲಾ ಮಕ್ಕಳಿಗೆ ವೃತ್ತಿ ಪರಿಚಯ ತರಬೇತಿಯನ್ನು ಉಚಿತವಾಗಿ ನೀಡುತ್ತಿರುವುದರಿಂದ ಅವರನ್ನು ಗೌರವಿಸಲಾಯಿತು. 
ಸುಮಾರು ೩೦೦ ಕ್ಕೂ ಅಧಿಕ ಮುತ್ತೈದೆಯರು ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ಆಗಮಿಸಿದವರಿಗೆಲ್ಲಾ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.






Tuesday, September 1, 2015

                           
                     ನಾಡ ಹಬ್ಬ ಓಣಂ ಆಚರಣೆ