Friday, April 6, 2012

              ತಿಲಕ -2012(ಫೆ.24 ಮತ್ತು 25)
                             ದ್ವಿದಿನ ಸಹವಾಸ ಶಿಬಿರ
        ತಾವು ಗಂಡು ಮಕ್ಕಳಿಗಿಂತ ಭಿನ್ನವಲ್ಲ ಯಾವುದೇ ಸಂದರ್ಭದಲ್ಲೂ ಏನು ಕಷ್ಟ ಬಂದರೂ ಧೈರ್ಯ ದಿಂದ ಎದುರಿಸುವೆವು ಎಂಬ ಆತ್ಮ ವಿಶ್ವಾಸವನ್ನು ನಮ್ಮ ಶಾಲೆಯಲ್ಲಿ ಜರಗಿದ ಪಂಚಾಯತು ಮಟ್ಟದ ಹೆಣ್ಣು ಮಕ್ಕಳ ಸಹವಾಸ ಶಿಬಿರದಲ್ಲಿ ಮಕ್ಕಳು ಗಳಿಸಿದರು.  ಮರವನ್ನು ಏರುವುದು, ಹಗ್ಗದಲ್ಲಿ ನೇತಾಡಿ ಮೇಲಕ್ಕೇರುವುದು, ಗೋಡೆ ಹಾರುವುದು, ಏಣಿ ಹತ್ತುವುದು, ಫುಟ್ ಬಾಲ್, ಸೈಕ್ಲಿಂಗ್ ಮುಂತಾದ ಸಾಹಸಮಯ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಮಿತಿಗಳ ವಲಯದಿಂದ ಹೊರ ಜಿಗಿದರು.                                                                                                                                                  
 




 

           ಸರ್ವಶಿಕ್ಷಾ ಅಭಿಯಾನದ ಆಶ್ರಯದಲ್ಲಿ ನಡೆದ ಪಂಚಾಯತು ಮಟ್ಟದ ಹೆಣ್ಣು ಮಕ್ಕಳ ದ್ವಿದಿನ ಸಹವಾಸ ಶಿಬಿರವನ್ನು ವಾರ್ಡು ಸದಸ್ಯ ಶ್ರೀ ರವಿ.ಕೆ.ಯವರ ಅಧ್ಯಕ್ಷತೆಯಲ್ಲಿ ಪಂಚಾಯತು ಅಧ್ಯಕ್ಷರಾದ ಶ್ರೀ ಸೋಮಶೇಖರ್.ಜೆ.ಎಸ್.ರವರು ದೀಪ ಜ್ವಾಲನೆಯ ಮೂಲಕ ಉದ್ಘಾಟಿಸಿದರು. ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಆಯಿಷಾ.ಎ.ಎ. ಹಾಗೂ ಕುಂಬಳೆ ಬಿ.ಪಿ.ಓ ಶ್ರೀ ರವೀಂದ್ರ  ಮಾಸ್ತರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಿ.ಆರ್.ಸಿ. ತರಬೇತುದಾರ ಶ್ರೀ ಶ್ರೀಹರ್ಷರು ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು. ಶಾಲಾ ವ್ಯವಸ್ಥಾಪಕ ಹೃಷಿಕೇಶ.ವಿ.ಎಸ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ವಿವೇಕಾನಂದ.ಬಿ.ಕೆ., ಮಾತೃ ಸಂಗಮದ ಅಧ್ಯಕ್ಷೆ ರಾಧಿಕಾ ಎಡಮಲೆ ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್ ಅವರು ಸ್ವಾಗತಿಸಿ, ಪಿ.ಇ.ಸಿ.ಕಾರ್ಯದರ್ಶಿ ದೇವದಾಸ್ ಕಜಂಪಾಡಿ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರುತಿ ಹಾಗು ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.
      ಡಾ.ಸಪ್ನ ಜಯಗೋವಿಂದ ಉಕ್ಕಿನಡ್ಕ ಅವರಿಂದ ಹೆಣ್ಣು ಮಕ್ಕಳ ಆರೋಗ್ಯ, ಆಹಾರ ಕ್ರಮಗಳ ಬಗ್ಗೆ ತರಗತಿ ನಡೆಯಿತು.ಇದಕ್ಕೆ ಪೂರಕವಾದ ಮಾಹಿತಿಯನ್ನು ಎಲ್.ಸಿ.ಡಿ. ಪ್ರೊಜೆಕ್ಟರ್‌ನಲ್ಲಿ ಪ್ರದರ್ಶಿಸಲಾಯಿತು.
        
       ಶಾಲಾ ಹಳೆ ವಿದ್ಯಾರ್ಥಿನಿ ಕುಮಾರಿ ಮೋಹಿನಿ.ಎಸ್.ಕೆ.ಯವರಿಂದ ರಚನಾತ್ಮಕ ಚಟುವಟಿಕೆಗಳು ಹಾಗೂ ಶ್ರೀಮತಿ ಹೇಮಾವಾಣಿ.ಎಸ್.ಭಟ್. ಪೆರ್ಲ ಇವರೊಂದಿಗೆ ಯಶಸ್ವೀ ಮಹಿಳೆಯೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.ರಾತ್ರಿ ನಡೆದ ಶಿಬಿರಾಗ್ನಿಯನ್ನು ಬಾಲ ಕಲಾವಿದೆ ಕುಮಾರಿ ಸನ್ನಿಧಿ ಪೆರ್ಲ ಅವರು ಉದ್ಘಾಟಿಸಿದರು.

 


        ಎಣ್ಮಕಜೆ ಪಂಚಾಯತಿನ ಎಲ್ಲಾ  ಶಾಲೆಗಳ ಯು.ಪಿ ವಿಭಾಗದ 40 ಮಂದಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಂಡರು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಆಯೋಜಿಸಿದ ಈ ವಾಸ್ತವ್ಯ ಶಿಬಿರವು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದುದಲ್ಲದೆ,ಜೀವನ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು, ತರಗತಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಲು ಉತ್ತೇಜನವನ್ನಿತ್ತಿತು.
ಎರಡು ದಿನಗಳು ನಿರಂತರ ವ್ಯತ್ಯಸ್ತ ಚಟುವಟಿಕೆಗಳನೊಳಗೊಂಡಿದ್ದು, ಮಕ್ಕಳ ಶಿಬಿರಾವಲೋಕನದೊಂದಿಗೆ
ಮುಕ್ತಾಯಗೊಂಡಿತು.ಶಾಲಾ ಅಧ್ಯಾಪಕ ವೃಂದದವರ ನೆರವಿನೊಂದಿಗೆ ಅಧ್ಯಾಪಿಕೆ ಶ್ರೀಮತಿ ಗೀತಾ ಕುಮಾರಿಯವರು ಶಿಬಿರ ನೇತೃತ್ವ ವಹಿಸಿದ್ದರು.