Monday, June 29, 2015

ರಕ್ಷಕ ಶಿಕ್ಷಕ ಸಂಘದ ಮಹಾಸಭೆ
  ನಮ್ಮ  ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜರುಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್‌ರವರು 2014-15 ನೇ ವರ್ಷದ ವರದಿಯನ್ನು ವಾಚಿಸಿದರು. ಕಳೆದ ವರ್ಷದ ಆಯವ್ಯಯ ಲೆಕ್ಕಪತ್ರಗಳನ್ನು ಶಿಕ್ಷಕ ಪದ್ಮನಾಭ.ಆರ್ ರವರು ಮಂಡಿಸಿದರು. ನಂತರ ಶಾಲೆಯಲ್ಲಿರುವ ವಿವಿಧ ವ್ಯವಸ್ಥೆಗಳ ಸ್ಥಿತಿಗತಿಗಳ ಕುರಿತು ಸಂಬಂಧಪಟ್ಟ ಸಂಚಾಲಕ ಶಿಕ್ಷಕರು ಮಾಹಿತಿಯನ್ನಿತ್ತರು.2015-16 ನೇ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳುವ ವಿದ್ಯಾಭ್ಯಾಸ ಪರ ಯೋಜನೆಗಳು ಹಾಗೂ ಕಾಮಗಾರಿಯ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ವರ್ಗ ಅಂಗನವಾಡಿ ವತಿಯಿಂದ 1 ನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಗ್ಲಾಸನ್ನು ಅಂಗನವಾಡಿ ಶಿಕ್ಷಕಿ ಚಂದ್ರಾವತಿಯವರು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. 

           ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರೀಯ ಶರಳಾಯರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಬಳಗವು ನೆರೆದಿತ್ತು. ಶಿಕ್ಷಕ ಕೆ.ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ವೆಂಕಟ ವಿದ್ಯಾಸಾಗರರು ವಂದನಾರ್ಪಣೆ ಗೈದರು. ಶಿಕ್ಷಕಿ ಶ್ರೀಮತಿ ಗೀತಾಂಜಲಿ ಪ್ರಾರ್ಥಿಸಿ, ಶಿಕ್ಷಕ ಸಚ್ಚಿದಾನಂದ.ಎಸ್ ಕಾರ್ಯಕ್ರಮ ನಿರೂಪಿಸಿದರು. 

ವಿಶ್ವ ಯೋಗ ದಿನ
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರವು ಪ್ರಧಾನವಾಗಿದೆ. ವಿಶ್ವ ಯೋಗ ದಿನದ ಅಂಗವಾಗಿ ನಮ್ಮ  ಶಾಲೆಯಲ್ಲಿ ಕಾರ್ಯಕ್ರಮ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ  ಲಕ್ಷ್ಮೀಪ್ರಿಯ ಶರಳಾಯರು ದೀಪ ಬೆಳಗಿಸಿ ಉದ್ಘಾಟಿಸಿದರು.  ಶಿಕ್ಷಕ ವಿದ್ಯಾಸಾಗರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಿ.ಟಿ.ಎ ಅಧ್ಯಕ್ಷರು ಕೆಲವು ಸರಳ ಯೋಗಾಸನಗಳನ್ನು ಮತ್ತು ಪ್ರಾಣಾಯಾಮಗಳನ್ನು ಮಕ್ಕಳಿಗೆ ಹಾಗೂ ರಕ್ಷಕರಿಗೆ ತಿಳಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.  ಶಿವರಾಮ ಭಟ್‌ರವರು ಸ್ವಾಗತಿಸಿ ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಧನ್ಯವಾದ ಗೈದರು.

ವಾಚನ ಸಪ್ತಾಹದ ಉದ್ಘಾಟನೆ
   ಕೇರಳದಾದ್ಯಂತ 6೦೦೦, ಗ್ರಂಥಾಲಯವನ್ನು ಸ್ಥಾಪಿಸುವುದರ ಮೂಲಕ ಓದುವ ಹವ್ಯಾಸವನ್ನು ಪ್ರಚಾರಗೊಳಿಸಿದ ಅಗಾಧ ಸಾಹಿತ್ಯಾಭಿರುಚಿಯುಳ್ಳ ಪಿ.ಎನ್ ಪಣಿಕ್ಕರ್‌ರವರ ಚರಮ ದಿನ ಜೂನ್ 19 ನ್ನು ಓದುವ ದಿನವನ್ನಾಗಿ ಆಚರಿಸಲಾಗುತ್ತದೆ, ಹಾಗೂ ಒಂದು ವಾರಗಳ ಕಾಲ ವಾಚನಾ ಸಪ್ತಾಹವನ್ನು ಆಚರಿಸುವ ಮೂಲಕ ಓದುವ ಅಭ್ಯಾಸವನ್ನು ಬಲಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ವಾಚನ ಸಪ್ತಾಹದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಹಾಗೂ ಬಿ.ಆರ್.ಸಿ ತರಬೇತುದಾರ ಶ್ರೀ ರಾಮಚಂದ್ರ ನಾಯಕ್‌ರವರು ದೀಪ ಜ್ವಾಲನೆಯೊಂದಿಗೆ ನೆರವೇರಿಸಿದರು. ಓದು, ಸೃಜನಶೀಲತೆ, ನೆನಪು ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿಯನ್ನು ಸದಾ ಆನಂದದಾಯಕವಾಗಿರುವಂತೆ ಮಾಡುತ್ತದೆ ಎಂದು ಓದಿನ ಮಹತ್ವ ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರೀಯ ಶರಳಾಯರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮಕ್ಕಳಿಂದ ಹಾಗೂ  ಶಿಕ್ಷಕರಿಂದ ಪುಸ್ತಕ ವಿಮರ್ಶೆ ನಡೆಯಿತು. ಈ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಾಸ, ಜೀವನಾಡಿ, ಸಂಗಾತಿ, ವರ್ಷಿಣಿ, ಬುತ್ತಿ, ಚುಟುಕು, ಬಾಲಮಿತ್ರ, ಗೃಹಶೋಭ, ಸುಧಾ, ವಿವೇಕ ಸಂಪದ, ತರಂಗ, ಮಂಗಳ, ಹೀಗೆ ಸುಮಾರು 75 ಸಂಚಿಕೆಗಳ ಪ್ರದರ್ಶನ ನಡೆಯಿತು. ಪ್ರಾಸ್ತಾವಿಕದೊಂದಿಗೆ ಶಾಲಾ ಮುಖ್ಯೋಪಾಧ್ಯಾಯ ಶ್ರೀ.ಪಿ ಶಿವರಾಮ ಭಟ್ ರವರು ಎಲ್ಲರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಅಭಯ್.ವೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕೆ. ಶಿವರಾಮ್ ಭಟ್‌ರವರು ವಂದನಾರ್ಪಣೆಗೈದರು.

Wednesday, June 10, 2015

ಜೂನ್. 5. ವಿಶ್ವ ಪರಿಸರ ದಿನ
ಆಧುನಿಕ ಯುಗದ ಅಭಿವೃದ್ಧಿ ಪಥದ ಬೆಳವಣಿಗೆಯು ಪರಿಸರಕ್ಕೆ ಪೂರಕವಾಗುವಂತಿದ್ದು, ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 5 ರಂದು ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲೂ ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಲು ಹಾಗೂ ಮಕ್ಕಳನ್ನೂ ಪರಿಸರ ಸ್ನೇಹಿಯನ್ನಾಗಿಸಲು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.  ಮಕ್ಕಳು ಇದಕ್ಕೆ ಪೂರಕವಾಗಿ ಪ್ರಬಂಧ  ಮಂಡನೆ ಹಾಗೂ ಹಾಡುಗಳನ್ನು ಪ್ರಸ್ತುತ ಪಡಿಸಿದರು. ನಂತರ ಪ್ರತಿ ತರಗತಿಯಲ್ಲೂ ಮಕ್ಕಳ ಮಟ್ಟಕ್ಕನುಗುಣವಾಗಿ ಪರಿಸರ ನಿರೀಕ್ಷಣೆ, ಚಿತ್ರ ರಚನೆ, ಭಿತ್ತಿಪತ್ರ ತಯಾರಿ, ಘೋಷಣಾ ಫಲಕ ತಯಾರಿ, ಪರಿಸರ ಸಂಚಿಕೆಯನ್ನು ತಯಾರಿಸಲಾಯಿತು. ಅರಣ್ಯ ಇಲಾಖೆಯ ವತಿಯಿಂದ ದೊರೆತ, ಬೇವು, ಅಶ್ವತ್ಥ, ನೆಲ್ಲಿ, ನೇರಳೆ, ಇತ್ಯಾದಿ ನಾನಾ  ಜಾತಿಯ ಮರಗಳ ಸಸಿಯನ್ನು ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಅವರು ’ಈ ಗಿಡವನ್ನು ನೀವು ಹಿರಿಯರ ಸಹಾಯದಿಂದ ನೀವೇ ಸ್ವತಃ ನೆಟ್ಟು ಬೆಳಿಸಿ, ಪೋಷಿಸಬೇಕು’ ಎಂಬ ಸಂದೇಶವನ್ನಿತ್ತರು.   

Wednesday, June 3, 2015

ಸಂತಸದ ಆಗಮನ; ಸಂಭ್ರಮದ ಪ್ರವೇಶೋತ್ಸವ

ನಮ್ಮಶಾಲೆಯಲ್ಲಿ ಬೇಸಗೆಯ ರಜೆಯ ಮಜಾ ಸವಿದು ಶಾಲಾ ಗೋಜಿಗೆ ಹೊಸ ಬಟ್ಟೆ ಬ್ಯಾಗ್, ಬಣ್ಣದ ಕೊಡೆ ಹಿಡಿದು ಮರಳಿ ಆಗಮಿಸುತ್ತಿರುವ ದೊಡ್ಡ ಮಕ್ಕಳ ಸಂಭ್ರಮ ಒಂದೆಡೆಯಾದರೆ, ಹೊಸ ವಾತಾವರಣಕ್ಕೆ ನೂತನವಾಗಿ ಪುಟ್ಟ ಹೆಜ್ಜೆಯನ್ನಿಟ್ಟು ಅಮ್ಮನ ಕೈ ಹಿಡಿದು ಅಳುಕಿನಿಂದ ಬರುವ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಇನ್ನೊಂದೆಡೆ. ಈ ನೂತನ ಶೈಕ್ಷಣಿಕ ವರ್ಷ 2015 -16 ಮಕ್ಕಳ ಸಂತಸದ ಹಬ್ಬವಾಗಲೆಂದು ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಸಂತಸದ ಆಗಮನ; ಸಂಭ್ರಮದ ಪ್ರವೇಶೋತ್ಸವ
ನಮ್ಮಶಾಲೆಯಲ್ಲಿ ಬೇಸಗೆಯ ರಜೆಯ ಮಜಾ ಸವಿದು ಶಾಲಾ ಗೋಜಿಗೆ ಹೊಸ ಬಟ್ಟೆ ಬ್ಯಾಗ್, ಬಣ್ಣದ ಕೊಡೆ ಹಿಡಿದು ಮರಳಿ ಆಗಮಿಸುತ್ತಿರುವ ದೊಡ್ಡ ಮಕ್ಕಳ ಸಂಭ್ರಮ ಒಂದೆಡೆಯಾದರೆ, ಹೊಸ ವಾತಾವರಣಕ್ಕೆ ನೂತನವಾಗಿ ಪುಟ್ಟ ಹೆಜ್ಜೆಯನ್ನಿಟ್ಟು ಅಮ್ಮನ ಕೈ ಹಿಡಿದು ಅಳುಕಿನಿಂದ ಬರುವ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಇನ್ನೊಂದೆಡೆ. ಈ ನೂತನ ಶೈಕ್ಷಣಿಕ ವರ್ಷ ೨೦೧೫ -೧೬ ಮಕ್ಕಳ ಸಂತಸದ ಹಬ್ಬವಾಗಲೆಂದು ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 
ನವಾಗತ ಮಕ್ಕಳಿಗೆ ಅತಿಥಿವರ್ಯರು ಬಣ್ಣದ ಪುಗ್ಗೆ ನೀಡಿ, ಮಕ್ಕಳೆಲ್ಲಾ ಪುಷ್ಪ ಗುಚ್ಛ ಹಿಡಿದು ಪುಟಾಣಿ ಮಕ್ಕಳನ್ನು ಮೆರವಣಿಗೆಗೆ ಸ್ವಾಗತಿಸಿದರು. ಪ್ರವೇಶೋತ್ಸವ ಗೀತೆಯನ್ನು ಧ್ವನಿವರ್ಧಕದ ಸಹಾಯದಿಂದ ಕೇಳಿಸಿ ಮಕ್ಕಳ ಮನರಂಜಿಸಲಾಯಿತು. ಮೆರವಣಿಗೆ ಮುಗಿಸಿ ಆಗಮಿಸಿದ ಮಕ್ಕಳಿಗೆ ಶಾಲಾ ವ್ಯವಸ್ಥಾಪಕರು ಹೂ ನೀಡಿ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ವಾರ್ಡ್ ಮೆಂಬರ್ ಶ್ರೀ ರವಿ.ಕೆ ಯವರು ಉತ್ತಮ ವಿದ್ಯಾಭ್ಯಾಸವನ್ನು ಪಡೆದ ಈ ಪುಟ್ಟ ಮಕ್ಕಳೇ ಮುಂದೆ ನಮ್ಮ ಸಮಾಜದ ಅಭಿವೃದ್ಧಿಗೆ ಮಾದರಿಯಾಗಿರುವರು ಎಂದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ, ಉಚಿತ ಸಮವಸ್ತ್ರ, ಬ್ಯಾಗ್, ಸ್ಲೇಟ್, ಬಳಪವನ್ನು ಕೊಡುಗೆಯಾಗಿ ನೀಡಿ ದೆಹಲಿಯಲ್ಲಿರುವ ವ್ಯವಸ್ಥಾಪಕರ ಕುಟುಂಬಸ್ಥರಾದ  ಶ್ರೀಮತಿ ಸಾವಿತ್ರಿಯವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು. ಇನ್ನೊರ್ವ ಮುಖ್ಯ ಅತಿಥಿ ಸ್ಥಾನವಹಿಸಿದ ಶ್ರೀ ರಘು ಪುಣೆಯವರು ಸ್ಲೇಟ್, ಬ್ಯಾಗ್ ನ್ನು ವಿತರಿಸಿದರು. ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಿ.ಟಿ.ಎ. ಉಪಾಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಪದ್ಮನಾಭ ಆರ್ ವಂದನರ್ಪಾಣೆಗೈದರು. ಕುಮಾರಿ ಅಂಜನಾ.ಎಸ್ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಸಮೂಹವು ನೆರೆದಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನೆರೆದವರಿಗೆಲ್ಲ ಪಿ.ಟಿ.ಎ. ವತಿಯಿಂದ ಲಘು ಉಪಾಹಾರದ ವ್ಯವಸ್ಥೆ ಹಾಗೂ ಮುಖ್ಯೋಪಾಧ್ಯಾಯರ ವತಿಯಿಂದ ಹೋಳಿಗೆ ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Monday, June 1, 2015

 ಶಾಲಾ ಪ್ರವೇಶೋತ್ಸವ  2015 -16

ನವಾಗತರಿಗೆ ನೂತನ ಅತಿಥಿವರ್ಯರಿಂದ ನವ್ಯ ರೀತಿಯ ಸ್ವಾಗತ ಸುಸ್ವಾಗತ ..... 
             WELCOME TO ALL  2015 -16  -
            OUR  SCHOOL ACTIVITIES