Wednesday, August 31, 2016


                                                     
                                                            ವೈದ್ಯರ ದಿನ 


ಖ್ಯಾತ ವೈದ್ಯ ಮತ್ತು ಅಪ್ರತಿಮ ದೇಶ ಭಕ್ತ ಡಾ ಬಿ.ಸಿ.ರಾಯ್ ಅವರ ಜನ್ಮ ದಿನದ ಸ್ಮರಣೆಯೊಂದಿಗೆ ಅಖಂಡ ವೈದ್ಯ ಲೋಕಕ್ಕೆ ಕೃತಜ್ಞತೆ ಹೇಳುವ ಅಪೂರ್ವ ಕ್ಷಣ. ಬದುಕಿನಲ್ಲಿ ಆರೋಗ್ಯವೇ ಮೂಲ ಮಂತ್ರ. ಪ್ರಸ್ತುತ ಪ್ರಪಂಚದಲ್ಲಿನ ಸ್ಪರ್ಧಾತ್ಮಕ ಬದುಕಿನಲ್ಲಿ ಆರೋಗ್ಯದ ಬಗೆಗಿನ ಕಾಲಜಿ ಕಡಿಮೆಯಾಗಿ ಆರೋಗ್ಯ ಹದಗೆಡುವ ಪ್ರಸಂಗಗಳು ಜಾಸ್ತಿ. ಆ ಕ್ಷಣಕ್ಕೆ ನಮ್ಮ ಜೀವಕ್ಕೆ ಮರುಜೀವ ಕರುಣಿಸುವ ದೇವರು ವೈದ್ಯರು. ವೈದ್ಯರ ಸೇವೆ ಅಪಾರ. ವೈದ್ಯರ ದಿನದಂದು ನಮ್ಮ ಶಾಲೆಯಲ್ಲಿ ವಿಜ್ಞಾನ ಕ್ಲಬಿನ ಸದಸ್ಯರು ಹಾಗೂ ಕ್ಲಬಿನ ಸಂಚಾಲಕ ಶಿಕ್ಷಕರಾದ ಶ್ರೀ ವೆಂಕಟ ವಿದ್ಯಾಸಾಗರ್ ರವರು ಸ್ಥಳೀಯ ವೈದ್ಯರು ಹಾಗೂ ಕೇರಳ ರಾಜ್ಯ ಕೈರಾಲಿ 'ಡಾಕ್ಟರ್ ಎವಾರ್ಡ್' ಪುರಸ್ಕೃತ ಮೋಹನ್ ಕುಮಾರ್ ವೈ.ಎಸ್ ಇವರ ಕ್ಲಿನಿಕ್‌ಗೆ ತೆರಳಿ ಪುಷ್ಪ ಗುಚ್ಛ ನೀಡಿ ಶುಭಾಶಯ ಕೋರಲಾತು.









                        ವಾಚನಾ ಸಪ್ತಾಹದ ಸಮಾರೋಪ ಸಮಾರಂಭ

ನಮ್ಮಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಸಂಸ್ಮರಣಾ ದಿನದ ಅಂಗವಾಗಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ, ಇಂಜಿನಿಯರಿಂಗ್ ಪದವಿದರರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀ  ಶ್ರೀ  ಹರಿ ಭರಣೀಕರ್ ರವರು 'ಓದುವಾಗ ಖುಷಿಯಿಂದ  ಇಷ್ಟಪಟ್ಟು ಓದಬೇಕು. ಶಾಲಾ ಗ್ರಂಥಾಲಯದಲ್ಲಿ ಮಕ್ಕಳಿಗಾಗಿ ಇರುವ ಪುಸ್ತಕವನ್ನು ಓದಿ ಮುಗಿಸುತ್ತೇನೆ ಎಂಬ ಧ್ಯೇಯವನ್ನು ಶಪಥ ಮಾಡಿಕೊಳ್ಳಿ ಜೀವನದ ಗುರಿಯನ್ನು ಇಟ್ಟುಕೊಳ್ಳಿ, ಆ ಗುರಿಯ ಹಿಂದೆ ಗುರುಬೇಕು. ಓದು ವಾಚನಾ ಸಪ್ತಾಹಕ್ಕೆ ಸೀಮಿತವಾಗಿರದೆ ನಿರಂತರವಾಗಿರಬೇಕು. ಎಲ್ಲವನ್ನು ಸಾಧಿಸಲು ಸಕಲ ಸೌಕರ್ಯವು ನಿಮಗೆ ಇಲ್ಲಿ ಲಭಿಸುತ್ತದೆ' ಎಂದು ಈ ಸಂದರ್ಭದಲ್ಲಿ ನುಡಿದರು. ಪ್ರತಿ ತರಗತಿಂದಲೂ ಇಬ್ಬರೂ ಮಕ್ಕಳಿಂದ ಓದು ಟಿಪ್ಪಣಿ ಮಂಡಿಸಲಾತು. ಮಕ್ಕಳು ತಯಾರಿಸಿದ ಸಂಚಿಕೆಯನ್ನು ಈ ಸಂದರ್ಭಲ್ಲಿ ಬಿಡುಗಡೆ ಮಾಡಲಾತು. 
ಪ್ರಾಸ್ತಾವಿಕದೊಂದಿಗೆ ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ವಂದನಾರ್ಪಣೆ ಗೈದರು.
ವಿದ್ಯಾರ್ಥಿನಿಯರಾದ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಶೈಲಿ.ಕೆ ಕಾರ್ಯಕ್ರಮ ನಿರೂಪಿಸಿದರು.


















               ಗ್ರಾಮಾಭಿವೃದ್ಧಿ ಯೋಜನೆ ಮಾಹಿತಿ ಕಾರ್ಯಾಗಾರ


ನಮ್ಮ ಶಾಲೆಯಲ್ಲಿ ಧರ್ಮಸ್ಥಳ ಗ್ರ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ, ಆರೋಗ್ಯ ರಕ್ಷಣೆಯ ಮಾಹಿತಿ ಕಾರ್ಯಾಗಾರ ನಡೆತು. ಎಣ್ಮಕಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾದ ಶ್ರೀಮತಿ ರೂಪವಾಣಿ ಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಶ್ರೀ ಗೋಪಾಲ ಶೆಟ್ಟಿ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯ ಶಿಕ್ಷಕ ಉಮೇಶ್ ಹಾಗೂ ಕುಂಬಳೆ-ಕಾಸರಗೋಡಿನ ಯೋಜನಾಧಿಕಾರಿಯಾದ ಶ್ರೀಮತಿ ಚೇತನ ಇವರು ಸಂಪನ್ನೂಲ ವ್ಯಕ್ತಿಯಾಗಿ ಸಹಕರಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಇವರು ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದರು.ಈ ಸಂದರ್ಭದಲ್ಲಿ ಅರಣ್ಯ ಪ್ರಶಸ್ತಿ ವಿಜೇತ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲಾ ಶಿಕ್ಷಕ ಉಮೇಶ್ ಇವರಿಗೆ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಂದ ಶಿಕ್ಷಕ ಸಚ್ಚಿದಾನಂದ ಎಸ್ ಮತ್ತು ಶಿಕ್ಷಕ ಎಸ್.ಎನ್ ವೆಂಕಟ ವಿದ್ಯಾಸಾಗರ್ ಶಾಲು ಹೊದಿಸಿ ಫಲ ಪುಷ್ಪ ತಂಬೂಲ ನೀಡಿ ಗೌರವಿಸಲಾಯಿತು. 
          ಮೇಲ್ವಿಚಾರಕ ಮೋಹನ್ ಸರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಸುಕನ್ಯಾ ಇವರು ಎಲ್ಲರನ್ನು ಸ್ವಾಗತಿಸಿ, ಒಕ್ಕೂಟ ಕಾರ್ಯದರ್ಶಿ ಕುಮಾರಿ ರೇವತಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಪಹಾರದ ವ್ಯವಸ್ಥೆ ಮಾಡಲಾತು.