Wednesday, June 29, 2016


             ವಾಚನಾ ಸಪ್ತಾಹ ಉದ್ಘಾಟನೆ

ನಮ್ಮ ಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಸಂಸ್ಕರಣಾ ದಿನ ವಾಚನ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲಾ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಶ್ರೀಧರ ಭಟ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಓದುವಿಕೆ ಪಠ್ಯ ಪುಸ್ತಕಕ್ಕೆ ಸೀಮಿತವಾಗಿರದೇ ಜೀವನಕ್ಕೆ ದಾರಿದೀಪವಾಗುವ ಪತ್ರಿಕೆಗಳನ್ನು ಓದಬೇಕು, ಓದುಗಾರನಿಗೆ ಸಾಕಷ್ಟು ಪುಸ್ತಕ ಆತ್ಮೀಯ ಗೆಳೆಯನಂತಿಹುದು. ಓದು ಎಲ್ಲರ ಬಾಳಲ್ಲೂ ಪ್ರಜ್ವಲಿಸಲಿ ಎಂಬ ಶುಭ ಸಂದೇಶವನ್ನಿತ್ತರು. ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದ ಶಿಕ್ಷಕ ಶ್ರೀ ಕೆ.ಶಿವರಾಮ ಭಟ್ ರವರು ಓದುವಿಕೆಯು ಹೇಗಿರಬೇಕೆಂಬುದನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು ೭೪ ಸಂಚಿಕೆ ಹಾಗೂ ವಿವಿಧ ಪುಸ್ತಕಗಳ ಪ್ರದರ್ಶನ ನಡೆತು. ಶಾಲಾ ಮುಖ್ಯೋಪಾಧ್ಯಾರಾದ ಶ್ರೀ.ಪಿ ಶಿವರಾಮ್ ಭಟ್‌ರವರು ಪ್ರಾಸ್ತಾವಿಕದಲ್ಲಿ ಓದು ಉಸಿರಾಗಿರಬೇಕು,ಓದೋಣ,ಓದಿ ಬೆಳೆಯೋಣ ಎಂಬ ಸಂದೇಶವನ್ನು ನೀಡುವುರೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಶಿಕ್ಷಕ ಶ್ರೀ ಸಚ್ಚಿದಾನಂದ ಎಸ್ ರವರು ವಂದನಾರ್ಪಣೆ ಗೈದರು. ವಿದ್ಯಾರ್ಥಿಗಳಾದ ಮಾಸ್ಟರ್ ಪ್ರಥಮ್ ಹಾಗೂ ವೈಷ್ಣವ್ ವೈ ಕಾರ್ಯಕ್ರಮ ನಿರೂಪಿಸಿದರು.




      ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜೂನ್-೧೯

ನಮ್ಮ  ಶಾಲೆಯಲ್ಲಿ ದಿನಾಂಕ ೧೯.೦೬.೨೦೧೬ ನೇ ಆದಿತ್ಯವಾರದಂದು ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ೨೦೧೫-೧೬ ನೇ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಕಳೆದ ವರ್ಷದ ಆಯವ್ಯಯ ಲೆಕ್ಕ ಪತ್ರಗಳನ್ನು ಹಾಗೂ ಊಟದ ವ್ಯವಸ್ಥೆ, ವಾಹನದ ವ್ಯವಸ್ಥೆ, ಶಿಕ್ಷಕ ಪದ್ಮನಾಭ ಆರ್ ರವರು ಮಂಡಿಸಿದರು. ವಾಚನಾಲಯದ ಸಂಚಿಕೆ ಹಾಗೂ ಗ್ರಂಥಾಲಯದ "ವರವನ್ನು ಶಿಕ್ಷಕ ಕೆ.ಶಿವರಾಮ್ ಭಟ್ ತಿಳಿಸಿದರು. 'ವಿವೇಕ' ಸಂಚಯ ವ್ಯವಸ್ಥೆಯ ಕುರಿತು ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಇವರು ಮಾಹಿತಿ ನೀಡಿದರು. ಕಂಪ್ಯೂಟರಿನ ಸ್ಥಿತಿಗತಿ ಹಾಗೂ ಈಗಿನ ಕಂಪ್ಯೂಟರಿನ ಸೌಕರ್ಯವನ್ನು ಶಿಕ್ಷಕ ಶ್ರೀ.ವೆಂಕಟ ವಿದ್ಯಾಸಾಗರರು ತಿಳಿಸಿಕೊಟ್ಟರು.  
೨೦೧೬-೧೭ ನೇ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳುವ ವಿದ್ಯಾಭ್ಯಾಸ ಪರ ಹಾಗೂ ಪಿ.ಟಿ.ಎ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಪಿ.ಟಿ.ಎ ಬಳಗದೊಂದಿಗೆ ಮುಕ್ತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾತು. 
ಈ ಸಂದರ್ಭದಲ್ಲಿ ಸ್ವರ್ಗ ಅಂಗನವಾಡಿ ವತಿಯಿಂದ ಶಿಕ್ಷಕಿ ಕುಮಾರಿ ಚಂದ್ರಾವತಿ ಇವರು ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಗ್ಲಾಸನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಹಾಗೆಯೇ ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್‌ರವರ ವತಿಂದ ಮಕ್ಕಳಿಗಾಗಿ ತರಿಸಿದ ಆಟೋಪಕರಣಗಳನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ.ಹೃಷಿಕೇಶ್ ವಿ.ಎಸ್ ಇವರು ಉಪಸ್ಥಿತರಿದ್ದರು. ವಾರ್ಡ್ ಸದಸ್ಯೆ ಕುಮಾರಿ ಚಂದ್ರಾವತಿ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಇವರು ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ಇವರು ಎಲ್ಲರನ್ನು ಸ್ವಾಗತಿಸಿ, ಶಿಕ್ಷಕ ವೆಂಕಟ ವಿದ್ಯಾಸಾಗರರು ವಂದನಾರ್ಪಣೆ ಗೈದರು. ಶಿಕ್ಷಕಿ ಶ್ರೀಮತಿ ಗೀತಾಂಜಲಿ ಇವರು ಪ್ರಾರ್ಥಿಸಿ, ಪದ್ಮನಾಭ್ ಆರ್ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಬಳಗವು ನೆರೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಉಪಹಾರವನ್ನು ಸೇವಿಸಿ ಕಾರ್ಯಕ್ರಮ ಕೊನೆಗೊಂಡಿತು. 






                     ವಿಶ್ವ ಪರಿಸರ ದಿನ

ಮಾನವನು ಅಭಿವೃದ್ಧಿ ಪಥದತ್ತ ಭಾವಿಸುತ್ತಿರುವ ಪರಿಸರದ ಮೇಲೆ ಬೀರುವ ಪರಿಣಾಮದಿಂದ ಜಾಗೃತರಾಗಲು ಜೂನ್ ೫ ಪರಿಸರ ದಿನ ಮಹತ್ವದ ಅರಿವು ಮೂಡಿಸಲು ನಮ್ಮ ಶಾಲೆಯಲ್ಲಿ ವಿವಿಧ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ ಪ್ರಬಂಧವನ್ನು ವಿದ್ಯಾರ್ಥಿ ಸಂಜನಾ ಹೃಷಿಕೇಶ್ ಮಂಡಿಸಿದಳು. ಪರಿಸರ ಶುಚಿತ್ವಕ್ಕೆ ಸಂಬಂಧಿಸಿದ ಪ್ರತಿಜ್ಞೆಯನ್ನು ಶಿಕ್ಷಕ ಪದ್ಮನಾಭ ಆರ್ ಇವರು ಮಕ್ಕಳಿಗೆ ತಿಳಿಸಿದರು. ಪ್ರತಿ ತರಗತಿಯಲ್ಲೂ ಭಿತ್ತಿ ಪತ್ರಿಕೆ, ಪತ್ತೆ ಹಚ್ಚುವ ಇತ್ಯಾದಿ ಚಟುವಟಿಕೆಯನ್ನು ಮಾಡಲಾಯಿತು. ಈ ಶೈಕ್ಷಣಿಕ ವರ್ಷ ದ್ವಿದಳ ಧಾನ್ಯ ವರ್ಷ ಇದರ ಅಂಗವಾಗಿ ಮಕ್ಕಳಿಗೆ ಧಾನ್ಯಗಳನ್ನು ಪತ್ತೆ ಹಚ್ಚುವ ಚಟುವಟಿಕೆಯನ್ನು ನಡೆಸಿ ನಂತರ ಶಾಲಾ ಪರಿಸರದಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತುವ ಚಟುವಟಿಕೆಯನ್ನು ಮಾಡಲಾಯಿತು. ನಂತರ ಎಲ್ಲಾ ಮಕ್ಕಳಿಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಮಕ್ಕಳಿಗೆ ಗಿಡವನ್ನು ವಿತರಿಸಿದರು. 




Friday, June 17, 2016


               
                      
                 ಶಾಲಾ ಪ್ರಾರಂಭೋತ್ಸವ

ನಮ್ಮ ಶಾಲೆಯಲ್ಲಿ ಬೇಸಗೆಯ ಸುದೀರ್ಘ ರಜಾ ಅನುಭವ ಬುತ್ತಿಯೊಂದಿಗೆ ನೂತನ ಶೈಕ್ಷಣಿಕ ವರ್ಷ ೨೦೧೬-೧೭ ಕ್ಕೆ ಆಗಮಿಸುವ ಪುಟಾಣಿ ಮಕ್ಕಳನ್ನು ಹಿರಿಯ ಮಕ್ಕಳೂ ಶಿಕ್ಷಕ, ರಕ್ಷಕ ಬಳಗ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳುವಂತೆ ಪ್ರವೇಶೋತ್ಸವವನ್ನು ವೈವಿಧ್ಯಮಯವಾಗಿ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ರೇಡಿಯೋ ಕೇಂದ್ರ ಸ್ವರ್ಗ ತರಂಗದ ಮೂಲಕ ಸುಮಧುರ ಪ್ರವೇಶೋತ್ಸವ ಗೀತೆಯನ್ನು ಕೇಳಿಸಲಾಯಿತು. ನಂತರ ಭವ್ಯ ಮೆರವಣಿಗೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಂಚಾಯತು ಸದಸ್ಯೆ ಕುಮಾರಿ ಚಂದ್ರಾವತಿ ಇವರು ಪ್ರವೇಶೋತ್ಸವ ಬೇನರನ್ನು ಮಕ್ಕಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸ್ಥಳೀಯ ಶಾಸ್ತಾ ಕ್ಲಬಿನ ಸದಸ್ಯರಿಂದ ನಾಸಿಕ್ ಬ್ಯಾಂಡಿನ ತಾಳಕ್ಕೆ ಸರಿಯಾಗಿ ಕುಣಿಯುವ ವಿವಿಧ ರೀತಿಯ ಬೊಂಬೆ ಕುಣಿತ ಮೆರವಣಿಗೆ ವಿಶೇಷ ಮೆರುಗನ್ನು ನೀಡುವುದರ ಜೊತೆಗೆ ಕೇರಳೀಯ ಉಡುಪು ಧರಿಸಿದ ಹೆಣ್ಣು ಮಕ್ಕಳು ಪುಷ್ಪ,ಪುಗ್ಗೆ ಆಕರ್ಷಕ ಮುಖವಾಡ, ಟೋಪಿ, ಡಿಸ್‌ಪ್ಲೇ ಕೋಲುಗಳನ್ನು ಹಿಡಿದ ಮಕ್ಕಳ ದಂಡು ಎಲ್ಲರನ್ನು ಮನರಂಜಿಸಿತು. ನಂತರ ನವಾಗತ ಮಕ್ಕಳಿಗೆ ಶಾಲಾ ಅಧ್ಯಾಪಿಕೆಯರು ಆರತಿ ಬೆಳಗಿದರೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ರವರು ಮಕ್ಕಳ ಹಣೆಗೆ ತಿಲಕವನ್ನು ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಮಕ್ಕಳಿಗೆ ಪುಷ್ಪ ದಳಗಳನ್ನಿತ್ತು ಸ್ವಾಗತಿಸಿದರು. ನಂತರ ಮಕ್ಕಳು ವಿದ್ಯಾಧಿ ದೇವತೆ ಸರಸ್ವತಿಗೆ ಪುಷ್ಪ ದಳಗಳನ್ನು ಸಮರ್ಪಿಸಿ ನಮಸ್ಕರಿಸಿದರು. ಸಭಾ ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಇವರು ದ್ವೀಪ ಜಾಲನೆಯ ಮೂಲಕ ಚಾಲನೆಯಿತ್ತರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನರವರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಮಾಜಿ ಪಂಚಾಯತು ಸದಸ್ಯ ಹಾಗೂ ಉತ್ತಮ ಸಾಹಿತ್ಯಾಸಕ್ತರು ಆದ ಶ್ರೀ ಶ್ರೀನಿವಾಸ ಎಡಮಲೆಯವರು ವಿದ್ಯಾಭ್ಯಾಸದ ಔಚಿತ್ಯವನ್ನು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ಮಗುವನ್ನು ಒಂದು ಉತ್ತಮ ಶಿಲ್ಪಿಯನ್ನಾಗಿಸುವ ಎಲ್ಲಾ ವಿಧದ ಸೌಲಭ್ಯಗಳು ಈ ಶಾಲೆಯಲ್ಲಿ ಲಭಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ೧ನೇ ತರಗತಿಯ ಮಕ್ಕಳಿಗೆ ದಿವಂಗತ ವಾಲ್ತಾಜೆ ಶ್ರೀಪತಿ ಭಟ್ ಹಾಗೂ ದಿವಂಗತ ವಾಲ್ತಾಜೆ ಶ್ರೀಧರ ಭಟ್ ಸ್ಮರನಾರ್ಥ ನೂತನ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಸ್ಲೇಟು, ಬಳಪ, ಬ್ಯಾಗ್ ಹಾಗೂ ಸಮವಸ್ತ್ರವನ್ನು ಅತಿಥಿಗಳು ವಿತರಿಸಿದರು. ಸಂಸ್ಕ್ರತ ಶಿಕ್ಷಕ ಶ್ರೀ ಕೆ ಶಿವರಾಮ್ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದನಾರ್ಪಣೆ ಗೈದರು. ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಉಪಹಾರ ಲಿಂಬೆ ಪಾನೀಯ, ಅವಲಕ್ಕಿ, ಹೋಳಿಗೆ, ವ್ಯವಸ್ಥೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಮಾಡಿದರು. 



















                                                                  ***********


           ಶೈಕ್ಷಣಿಕ   ವರ್ಷ   2016-2017 ಕ್ಕೆ  ಸ್ವಾಗತ