Thursday, December 22, 2011

       ನಮ್ಮ ಶಾಲೆಯಲ್ಲಿ ಇಪ್ಪತ್ತೈದು ವರ್ಷಕ್ಕೂ ಅಧಿಕ ಕಾಲ ಮಧ್ಯಾಹ್ನದ ಬಿಸಿಯೂಟ ತಯಾರಿಯ ಜವಾಬ್ದಾರಿ ಹೊತ್ತಿದ್ದ ಶ್ರೀಯುತ ಅಚ್ಚುತ ಭಟ್ ಸಜಂಗದ್ದೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ನಿಮಿತ್ತವಾಗಿ ತಾರೀಕು 30/11/2011 ರ ಬುಧವಾರ ಶಾಲಾ ಶಿಕ್ಷಕ -ರಕ್ಷಕ ಸಂಘ ಹಾಗೂ ಮಾತೃ ಸಂಗಮಗಳ ವತಿಯಿಂದ ಸಂಗ್ರಹಿಸಿದ ರೂ.20000/- ವನ್ನು ಶಾಲಾ ಮುಖ್ಯೋಪಾಧ್ಯಾಯರು ಅವರ ನಿವಾಸಕ್ಕೆ ತೆರಳಿ ಶ್ರೀಯುತರಿಗೆ ಹಸ್ತಾಂತರಿಸಿದರು. ಶಾಲಾ ಅಧ್ಯಾಪಕರು, ಸಿಬ್ಬಂದಿಯೊಂದಿಗೆ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ವಿವೇಕಾನಂದ ಬಿ.ಕೆ.ಯವರು ಜೊತೆಗಿದ್ದರು.


Thursday, December 15, 2011

      ನಮ್ಮ ಶಾಲೆಯಲ್ಲಿ ಡಿಸೆಂಬರ್ 8 ನೇ ತಾರೀಕಿನಂದು ಸಾಯಂ ಗಂಟೆ 6.30 ರಿಂದ ಕಾಸರಗೋಡಿನ ಕಿರಣ್‌ರಾಜ್ ಹಾಗೂ ರಾಜೇಶ್ (ವಿದ್ಯಾರ್ಥಿಗಳು) ರವರು ನಿರ್ದೇಶಿಸಿ ಅಭಿನಯಿಸಿದ ಕಿರುಚಿತ್ರ ಕಾವಳ ಪ್ರದರ್ಶನಗೊಂಡಿತು. ನಮ್ಮೀ ಸಂಸ್ಥೆ ಹಾಗೂ ನೆರೆಯ ಮಾತೃಭೂಮಿಸಂಘಟನೆಯವರು ಜಂಟಿಯಾಗಿದ್ದು ಕೊಂಡು ಈ ಕಾರ್ಯಕ್ರಮವನ್ನು ಏರ್ಪಾಡಿಸಲಾಯಿತು.
         ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳು, ಮೊಬೈಲ್ ಫೋನಿನ ದುರುಪಯೋಗ, ಜೀವನವನ್ನೇ ಅಂಧಕಾರ ದತ್ತ ಕೊಂಡೊಯ್ಯುವ ವೇಶ್ಯಾವಾಟಿಕೆ, ಪರಿಣಾಮವಾಗಿ ಅನುಭವಿಸ ಬೇಕಾದ ಏಡ್ಸ್ ನಂತಹ ಮಹಾಮಾರಿ ರೋಗಗಳು ವೀಕ್ಷಕರ ಹೃದಯವನ್ನು ತಟ್ಟಿದವು. ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡಿತು. ಬಹುಸಂಖ್ಯೆಯಲ್ಲಿ ಭಾಗವಹಿಸಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
       ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಚಿತ್ರದ ಬಗ್ಗೆ ಪ್ರಾಸ್ತವಿಕ ನುಡಿಗಳನ್ನಾಡಿ ಸಿನೆಮಾಕ್ಕೆ ಚಾಲನೆಯಿತ್ತರು. ನಿರ್ದೇಶಕ ಕಿರಣ್‌ರಾಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಮಾತೃಭೂಮಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಗ್ರಹವಾದ ರೂಪೈ 2000/- ವನ್ನು ದೇಣಿಗೆಯಾಗಿ ನೀಡಲಾಯಿತು.


    ನಮ್ಮೀ ಶಾಲೆಯ ಮಾತೃ ಸಂಗಮದ ಸದಸ್ಯೆರಾದ ಶ್ರೀಮತಿ ಅನುರೂಪಾ ಕೆದಂಬೈಮೂಲೆ ಹಾಗೂ ಶ್ರೀಮತಿ ಅರ್ಚನಾ ಪೆರಿಕ್ಕಾನ ಇವರು ಸ್ವತ: ಆಸಕ್ತಿಯಿಂದ ಏಳನೇ ತರಗತಿಯ ಮಕ್ಕಳಿಗೆ ವೃತ್ತಿ ಪರಿಚಯ ಸಮಯದಲ್ಲಿ ಹೊಲಿಗೆ ತರಗತಿಯನ್ನು ಆರಂಭಿಸಿರುತ್ತಾರೆ.ಪ್ರತಿ ಸೋಮವಾರ ಹಾಗೂ ಮಂಗಳವಾರಗಳಲ್ಲಿ ಒಂದೊಂದು ಪೀರಿಯಡ್‌ನ್ನು ಹೊಲಿಗೆ ತರಬೇತಿಗಾಗಿ ವಿನಿಯೋಗಿಸಲಾಗಿದೆ.ಆಸಕ್ತಿಯಿರುವ ಮಾತೆಯರಿಗೆ ಶನಿವಾರ ಹಾಗೂ ಆದಿತ್ಯವಾರಗಳಲ್ಲಿ ತರಗತಿ ನಡೆಸುತ್ತಿದ್ದಾರೆ.

Tuesday, December 13, 2011

ಕಳೆದ ಶೈಕ್ಷಣಿಕ ವರ್ಷವು ಜೈವ ವೈವಿಧ್ಯ ವರ್ಷವಾಗಿದ್ದು, ನಮ್ಮ ಶಾಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು.
     ಶಾಲಾ ಮಕ್ಕಳೇ ಸ್ವತಃ ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಕೈತೋಟ ನಿರ್ಮಿಸಿ ಅದರಲ್ಲಿ ವಿವಿಧ ತರದ ತರಕಾರಿ ಹಾಗೂ ಹಣ್ಣುಗಳ ಕೃಷಿಯನ್ನು ಬೆಳೆಸಲಾಗಿತ್ತು.ಸಾವಯವ ಗೊಬ್ಬರವನ್ನು ಮಾತ್ರ ಬಳಸಿಕೊಂಡು ಮಾಡಿದ ಈ ಕೃಷಿ ಮಕ್ಕಳ ಕಲಿಕೆಗೂ ಪ್ರೇರಣೆಯಾಗಿತ್ತಲ್ಲದೆ ಜೈವಿಕ ಕೃಷಿಗೂ ಮಾದರಿಯಾಗಿತ್ತು.ಕೇವಲ ಪಠ್ಯಚಟುವಟಿಕೆಗಳಲ್ಲದೆ ಪಠ್ಯೇತರ ವಿಷಯಗಳಿಗೂ ಪೂರಕವಾಗುವ ರೀತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಹಾಗೂ ಇನ್ನಿತರ ಸಹ ಶಿಕ್ಷಕರು ರೂಪಿಸಿದ ಈ ಯೋಜನೆ ಫಸಲು ದೊರೆಯುವಲ್ಲಿ ಸಫಲವಾಗಿದೆ.ಮಾತ್ರವಲ್ಲದೆ ಶಾಲಾ ಆವರಣದಲ್ಲಿ  ನಿರ್ಮಿಸಿದ ಕೈ ತೋಟದ ತರಕಾರಿಯ ರುಚಿ ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಕೆಯೂ ಆಗಿದೆ.


Tuesday, December 6, 2011

ನಮ್ಮಶಾಲಾ 4ನೇ ತರಗತಿಯ ವಿದ್ಯಾರ್ಥಿಗಳು ಸ್ಥಳೀಯ ಜಲಸಂಪನ್ಮೂಲ, ಪೆರಿಕ್ಕಾನದ ಬಳಿಯಿರುವ ನಿಸರ್ಗದತ್ತವಾದ ಝರಿಯನ್ನು ಸಂದರ್ಶಿಸಿದರು. ತರಗತಿಯ ಪಾಠಭಾಗದ ಅಂಗವಾಗಿ ಪ್ರವಾಸ ಕಥನ- ಬರೆಯೋಣ ಚಟುವಟಿಕೆಯ ಪೂರಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೀರಿಗಾಗಿ ಕೊರೆದ ಸುರಂಗಗಳು,ಬೆಟ್ಟ ಪ್ರದೇಶದ ಕಡಿದಾದ ದಾರಿಗಳನ್ನು ಕ್ರಮಿಸಿ, ರಾಮಪತ್ರೆ, ಸಾಗುವಾನಿ,ಮಾವು,ಹಲಸು ಮುಂತಾದ ಕಾಡುಮರಗಳನ್ನು ನೋಡಿ ಮಕ್ಕಳು ಕಥನ ರಚನೆಗೆ ವಸ್ತುವಾಗಿಸಿಕೊಂಡರು. ಶಿಕ್ಷಕರಾದ ಸಚ್ಚಿದಾನಂದ.ಎಸ್ ಮತ್ತು ಮಿಥುನ್.ವಿ.ಆರ್. ನೇತೃತ್ವ ವಹಿಸಿದರು.