Friday, February 20, 2015


ಣಿತ ಮೆಟ್ರಿಕ್ ಶಿಬಿರ - ಎಲ್.ಪಿ ತರಗತಿ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ3ಮತ್ತು 4ನೇ ತರಗತಿಯ ಮಕ್ಕಳಿಗಾಗಿ ಎರಡು ದಿನ ಗಣಿತ ಮೆಟ್ರಿಕ್ ಶಿಬಿರ ಫೆಬ್ರವರಿ 18,19 ರಂದು ಶಾಲಾ ಮಟ್ಟದಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಟೀಚರ್‌ರವರು ಮಕ್ಕಳು ತಯಾರಿಸಿದ ಬ್ಯಾಡ್ಜ್‌ನ್ನು ಮಕ್ಕಳಿಗೆ ವಿತರಿಸಿದರು.ಶಿಬಿರದಲ್ಲಿ





ಭಾರ,ಉದ್ದ,ಲೀಟರ್ ಗಳಿಗೆ ಸಂಬಂಧಿಸಿ ಪ್ರಾತ್ಯಕ್ಷಿಕ ಅನುಭವ ನೀಡುವ ಚಟುವಟಿಕೆಗಳು,ಗಣಿತ ಆಟಗಳು,ನಿರ್ಮಾಣ ಚಟುವಟಿಕೆಗಳಿದ್ದುವು.ಶಿಕ್ಷಕಿಯರಾದ ಶ್ರೀಮತಿ ಗೀತಾಂಜಲಿ ಹಾಗೂ ಶ್ರೀಮತಿ ಕಲಾವತಿ ಟೀಚರ್ ರವರು ಶಿಬಿರ ಚಟುವಟಿಕೆಗಳನ್ನು ನಡೆಸಿಕೊಟ್ಟರ

Tuesday, February 10, 2015




                       ಮಕ್ಕಳ ಪ್ರತಿಭಾ ಪುರಸ್ಕಾರ 

ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಕೇರಳ ಗ್ರಾಮೀಣ ಬ್ಯಾಂಕ್ ಪ್ರಬಂಧಕರು (ವಾಣೀನಗರ ಶಾಖೆ) ಶ್ರೀ ಶಿವರಾಮ.ಬಿ ಯವರು ಧ್ವಜಾರೋಹಣ ಗೈಯುವ ಮೂಲಕ ಚಾಲನೆಯಿತ್ತರು. ಬಳಿಕ ನಡೆದ ಸಭಾಕಾರ್ಯಕ್ರಮದ  ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀ ಸತ್ಯನಾರಾಯಣ ಭಟ್ ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ಕೇರಳ ರಾಜ್ಯ ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಶಂಕರ್ ಸಾರಡ್ಕರವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದವತಿಯಿಂದ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು  ಹೊಂದಾಣಿಕೆ ಬೇಕು, ಮತ್ಸರ ಬಿಡಬೇಕು, ತಾಳ್ಮೆ ಬೆಳೆಸಿ, ಸಿಟ್ಟು ಬಿಡಿಸಿ, ಜ್ಞಾನದಾಹವ ಪ್ರೀತಿಸಬೇಕು, ಸಫಲತೆಯನ್ನು ಪಡೆಯಲು ನಿರಾಸೆಯನ್ನು ಬಿಡಬೇಕು  ಎಂಬ ಸಂದೇಶವನ್ನಿತ್ತರು. ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದ ಹಳೆವಿದ್ಯಾರ್ಥಿನಿ ಕುಮಾರಿ ಸ್ನೇಹ ವಾಲ್ತಾಜೆ (ಪ್ರಾಧ್ಯಾಪಿಕೆ ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು) ತನ್ನ ಪ್ರಾಥಮಿಕ ವಿದ್ಯಾಭ್ಯಾಸದ ಅನುಭವವನ್ನು ಮೆಲುಕು ಹಾಕುತ್ತಾ  ಜೀವನದಲ್ಲಿ ಗುರಿಯಿಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು. ವಾರ್ಡ್ ಸದಸ್ಯ ಶ್ರೀ ರವಿ.ಕೆ, ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಷ ವಿ.ಎಸ್ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ಈ ಶೈಕ್ಷಣಿಕ ವರ್ಷದ ವರದಿಯನ್ನು ಮಂಡಿಸಿದರು. ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ, ಹೆತ್ತವರಿಗೆ, ಅಂಗನವಾಡಿ ಮಕ್ಕಳಿಗೆ ಏರ್ಪಡಿಸಿದ ವಿವಿಧ ಬೌದ್ಧಿಕ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಶರಳಾಯರು ಸ್ವಾಗತಿಸಿ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿನವೀನ್ ವಂದನಾರ್ಪಣೆ ಗೈದರು. ಕುಮಾರಿ ಲಿಖಿತಾ ಹಾಗೂ ಮಾಸ್ಟರ್ ಪ್ರದ್ಯೋತ್ ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರಗಿತು. ನಮ್ಮಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀ ರಾಮಚಂದ್ರ ಮಣಿಯಾಣಿಯವರ ನೇತೃತ್ವದಲ್ಲಿ  ರಕ್ಷಕರು, ಶಿಕ್ಷಕರು ಸೇರಿಕೊಂಡು 'ವಾಲಿ ವಧೆ' ಯಕ್ಷಗಾನ ತಾಳ ಮದ್ದಳೆಯನ್ನು ಪ್ರಸ್ತುತ ಪಡಿಸಿದರು.














Friday, February 6, 2015



ಪ್ರತಿಭಾ ಪುರಸ್ಕಾರ 2015-ಹೆತ್ತವರಿಗೆ ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ ರಕ್ಷಕರು.

 





ಮೆಟ್ರಿಕ್ ಡೇ-ಭಾರಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಲ್ಗೊಂಡ ಮಕ್ಕಳು.