Monday, November 16, 2015




               ಸಂಸ್ಕೃತ ಶಿಬಿರ ಚೈತನ್ಯಮ್  
ಕುಂಬಳೆ ಉಪ ಜಿಲ್ಲಾ ಮಟ್ಟದ ಒಂದು ದಿನದ ಸಹವಾಸ ಶಿಬಿರ ನಮ್ಮ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ರಕ್ಷಕ ಶಿಕ್ಷಕ ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎನ್.ಎಚ್‌ಎಸ್ ಪೆರಡಾಲದ ನಿವೃತ್ತ ಸಂಸ್ಕ್ರತ ಶಿಕ್ಷಕರಾದ ಸದಾಶಿವ ಭಟ್‌ರವರು ಮುಖ್ಯ ಅಥಿತಿಯಾಗಿ ಶಿಬಿರದ ಮಹತ್ವವನ್ನು ತಿಳಿಸಿದರು. 
ಶುಭಾಶಂಸನೆಗಾಗಿ ಆಗಮಿಸಿದ ಮೊನ್ನೆ ತಾನೆ ಜರುಗಿದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜಯಗಳಿಸಿದ ನಮ್ಮ ವಾರ್ಡ್ ಸದಸ್ಯೆ ಅಂಗನವಾಡಿ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಕುಮಾರಿ ಚಂದ್ರಾವತಿ.ಎಮ್ ಹಾಗೂ ಬ್ಲಾಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡ  ಶ್ರೀಮತಿ ಸವಿತ ನಾಗರಾಜ್ ಇವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಶಿವರಾಮ್ ಭಟ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ನಮ್ಮ ಶಾಲಾವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಇವರು ಉಪಸ್ಥಿತರಿದ್ದರು. ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯ ಸಂಸ್ಕ್ರತ ಶಿಕ್ಷಕರಾದ ಶ್ರೀ.ರಂಜಿತ್(ಕಾಸರಗೋಡು ಸಂಸ್ಕ್ರತ ಟೀಚರ್ಸ್  ಫೆಡರೇಷನ್) ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಇದೇ ಶಾಲೆಯ ಸಂಸ್ಕ್ರತ ಅಧ್ಯಾಪಕರಾದ ಶ್ರೀ.ಕೆ ಶಿವರಾಮ್ ಭಟ್ ರವರು ಸ್ವಾಗತಿಸಿ, ಕುಂಬಳೆ ಉಪ ಜಿಲ್ಲೆಯ ಸಂಸ್ಕ್ರತ ಕೌನ್ಸಿಲ್‌ನ ಕಾರ್ಯದರ್ಶಿ ಶ್ರೀ ನಂದಕುಮಾರ್ ಇವರು ವಂದಿಸಿ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಂಬಳೆ ಉಪ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ೧೪೭ ಮಂದಿ ಶಿಬಿರಾರ್ಥಿಗಳು, ಸಂಸ್ಕ್ರತ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಹೆತ್ತವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



















ಸಂಸ್ಕೃತ ಶಿಬಿರ ಚೈತನ್ಯಮ್ ಸಮಾರೋಪ ಸಮಾರಂಭ 

ಕುಂಬಳೆ ಉಪ ಜಿಲ್ಲಾ ಮಟ್ಟದ ಒಂದು ದಿನದ ಸಹವಾಸ ಶಿಬಿರ ನಮ್ಮ ಶಾಲೆಯಲ್ಲಿ ಸಮಾರೋಪ ಸಮಾರಂಭಗೊಂಡಿತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ಕೈಲಾಸ ಮೂರ್ತಿಯವರು ಮುಖ್ಯ ಅತಿಥಿಯಾಗಿ ಮಕ್ಕಳಿಗೆ ಶಿಬಿರದ ಮಹತ್ವ ಹಾಗೂ ಸಂಸ್ಕ್ರತ ಭಾಷೆ ದೇವಭಾಷೆ ಈ ಭಾಷೆ ಎಲ್ಲಾ ಮಕ್ಕಳಲ್ಲಿಯೂ ಅಭಿರುಚಿಯನ್ನು ಮೂಡಿಸಲಿ ಎಂದು ಶುಭಹಾರೈಸಿದರು. ಹಾಗೆಯೇ ಶುಭಾಶಂಸನೆಗಾಗಿ ಆಗಮಿಸಿದ ಎಸ್.ವಿ.ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ವೈ ಸುಬ್ರಹ್ಮಣ್ಯ ಭಟ್ ಇವರು ಶಾಲೆಯ ಉನ್ನತಿಯ ಬಗ್ಗೆ ತಿಳಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಬಿ.ಆರ್.ಸಿ ತರಬೇತಿದಾರ ಶ್ರೀ ಲಕ್ಷ್ಮೀಪ್ರಿಯ ಸರಳಾಯರವರು ಸಂಸ್ಕ್ರತ ಭಾಷೆ ಮಕ್ಕಳ ಭವಿಷ್ಯದ ಹೆಬ್ಬಾಗಿಲು ಆಗಲಿ ಎಂದು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ನೀಡಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ಕೈಲಾಸಮೂರ್ತಿಯವರು ಭಾಗವಹಿಸಿದ ಎಲ್ಲ ಸಂಸ್ಕ್ರತ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಸಮಾರೋಪ ಸಮಾರಂಭದ ಕೊನೆಯಲ್ಲಿ ಶ್ರೀ ವಿಘ್ನೇಶ್ವರ ಭಟ್ ಇವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಶ್ರೀ ಎಸ್.ಎನ್ ವೆಂಕಟ ವಿದ್ಯಾಸಾರರು ಎಲ್ಲರನ್ನು ಸ್ವಾಗತಿಸಿ, ಶಿಕ್ಷಕ ಶ್ರೀ ಪದ್ಮನಾಭ .ಆರ್ ಇವರು ನಿರೂಪಿಸಿದರು. ಲಘು ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.





Thursday, November 5, 2015



                   ವೃತ್ತಿ ಪರಿಚಯ ಮೇಳ

        ಅಡೂರಿನ ಜಿ.ಎಚ್.ಎಸ್ ನಲ್ಲಿ ನಡೆದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನಾ ಹೃಷಿಕೇಶ್-ವೇಸ್ಟ್ ಮೆಟಿರಿಯಲ್, ದಯಾನಂದ-ಬೀಡ್ಸ್ ವರ್ಕ್‌ನಲ್ಲಿ ಎ ಗ್ರೇಡ್ ಪಡೆದುಕೊಂಡಿದ್ದಾರೆ.