Thursday, November 24, 2011



ಮಾಹಿತಿ ಹಕ್ಕು ಕಾಯಿದೆ -2005 
ವಿಶೇಷ ತಿಳುವಳಿಕಾ ಶಿಬಿರ ಮತ್ತು ಜನಪ್ರತಿನಿಧಿಗಳೊಂದಿಗೆ ಮುಕ್ತ ಸಂವಾದ.

       ನಮ್ಮೀ ಶಾಲೆಯಲ್ಲಿ ಸಾರ್ವಜನಿಕ ಅಗತ್ಯವನ್ನು ಮನಗಂಡು ಮಾಹಿತಿ ಹಕ್ಕು ಕಾಯಿದೆ ೨೦೦೫, ವಿಶೇಷ ತಿಳುವಳಿಕಾ ಶಿಬಿರವು ತಾರೀಕು ೧೬.೧೦.೨೦೧೧ನೇ ಆದಿತ್ಯವಾರ ಜರಗಿತು. ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ, ವಾರ್ಡು ಮೆಂಬರು ಶ್ರೀ ರವಿ.ಕೆ.ಯವರುಅಧ್ಯಕ್ಷ ಸ್ಥಾನವಹಿಸಿದ್ದರು.ಜಿಲ್ಲಾ ಪಂಚಾಯತು ಸದಸ್ಯ ಶ್ರೀ ಶಂಕರ ರೈ ಮಾಸ್ತರ್ ರವರು ಉದ್ಘಾಟಿಸಿದರು.
       ದಿನನಿತ್ಯ ನಡೆಯುವ ಸಾಮೂಹಿಕ ಗೊಂದಲಗಳು,ಭ್ರಷ್ಟಾಚಾರ ಸಂಬಂಧಿ ಕೆಲಸಗಳು, ಮಾಹಿತಿ ಹಕ್ಕು ಕಾಯಿದೆ ತಿಳುವಳಿಕೆಯಿಂದ, ಸಾಮೂಹಿಕ ಹೋರಾಟದ ಮೂಲಕ ತಡೆಯಲು ಸಾಧ್ಯ.ಈ ಔಚಿತ್ಯವನ್ನು ಮನಗಂಡು ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬ ಪ್ರಾಸ್ತಾವಿಕ ನುಡಿಗಳೊಂದಿಗೆ ಶಾಲ ಮುಖ್ಯೋಪಾಧ್ಯಾಯ, ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ಟರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಸಾರ್ವಜನಿಕ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಫಲಾನುಭವಿಗಳು ಅದರ ಕಡೆ ನಿಗಾ ವಹಿಸಿದಲ್ಲಿ Sಂಡಿತವಾಗಿಯೂ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಎಂಬ ಮಾಹಿತಿಯನ್ನು ಉದ್ಘಾಟಕ
ಶ್ರೀ ಶಂಕರ ರೈ ಮಾಸ್ತರರು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಆಯಿಷಾರವರು ಮಾಹಿತಿಹಕ್ಕು ಕಾಯಿದೆಯು ನಮಗೆ ಕೊಟ್ಟ ವಿಶೇಷ ಅವಕಾಶದ ಅಡಿಯಲ್ಲಿ ವಿವರಗಳನ್ನು ತಿಳಿದುಕೊಂಡು ಸ್ಪಂದಿಸಿದಲ್ಲಿ ನಿರೀಕ್ಷಿತ ಗುಣಮಟ್ಟದ ಕೆಲಸಕಾರ್ಯಗಳು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗೋಣ ಎಂಬ ಆಶಯ ವ್ಯಕ್ತಪಡಿಸಿದರು. ಇರ್ನ್ನೋವ ಮುಖ್ಯ ಅತಿಥಿ ಬ್ಲೋಕ್ ಪಂಚಾಯತು ಸದಸ್ಯ ಶ್ರೀ ರಾಮಕೃಷ್ಣ ರೈ ಕುದ್ವರವರು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯ ವಿವರವನ್ನು ತಿಳಿಸಿದರು. 










 ಅಧ್ಯಕ್ಷ ಶ್ರೀ ರವಿ.ಕೆ.ಯವರು ಸಾಂದರ್ಭಿಕವಾಗಿ ಮಾತುಗಳನ್ನಾಡಿದರು.ಕುಮಾರಿ ಮಾಲವಿಕಾ ಸಜಂಗದ್ದೆ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ಅಧ್ಯಾಪಕ ಶ್ರೀ ಶಿವರಾಮ ಭಟ್ಟರು ನುಡಿನಮನಗಳನ್ನು ಸಲ್ಲಿಸಿದರು.
ಎರಡನೇ ಅವಧಿಯಲ್ಲಿ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಯಿತು. ಇದಕ್ಕೆ ಪೂರಕವಾಗಿ ಜಿಲ್ಲಾ ಕುಟುಂಬಶ್ರೀ ಘಟಕಗಳ ಕೋರ್ಡಿನೇಟರ್ ಶ್ರೀ ಸಿ. ರಾಜಾರಾಮ್ ಅವರು ಮಾಹಿತಿ ಹಕ್ಕು ೨೦೦೫ ರ ಸವಿಸ್ತಾರ ವಿವರಗಳನ್ನು ನೀಡಿದರು. ನೋಸರ್ ಇಂಡಿಯಾ ಅಧ್ಯಕ್ಷ ಶ್ರೀ ಮ್ಯಾಥ್ಯೂ ರವರು ವಿವಿಧ ದೃಷ್ಟಾಂತಗಳೊಂದಿಗೆ ವಿಷಯವನ್ನು ಪುಷ್ಟೀಕರಿಸಿದರು.  ಜಿಲ್ಲಾ ಸಣ್ಣ ಕೈಗಾರಿಕಾ ಘಟಕದ ಕಾಂiiದರ್ಶಿ ಶ್ರೀರಾಜಾರಾಮ್ ಪೆರ್ಲ ರವರು ಮೋಡರೇಟರ್ ಆಗಿ ಸಹಕರಿಸಿದರು. ಸಾರ್ವಜನಿಕರ ಕುಂದು ಕೊರತೆ ಸಂಶಯಗಳನ್ನು ಚುನಾಯಿತ ಪ್ರತಿನಿಧಿಗಳು ನಿವಾರಿಸುವಲ್ಲಿ ಯಶಸ್ವಿಯಾದರು. ಬಹುಸಂಖ್ಯೆಯಲ್ಲಿ ಂದಿದ್ದ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಪಂಚಾಯತು ಅಧ್ಯಕ್ಷ ಶ್ರೀ ಸೋಮಶೇಖರ.ಜೆ.ಎಸ್. ಸಹಿತ ಎಲ್ಲಾ ಜನಪ್ರತಿನಿಧಿಗಳು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬದ್ಧ ಎಂಬ ಪ್ರತಿಜ್ಞೆಯನ್ನು ಕೈಗೊಂಡಿದುದು ಕಾರ್ಯಕ್ರಮದ ಒಟ್ಟು ಯಶಸ್ವಿಗೆ ಹಿಡಿದ ಕೈಗನ್ನಡಿಯಾಗಿದೆ.