Friday, October 30, 2015


             ಶಾಲಾ ಮಕ್ಕಳಿಗೆ ವಿಶೇಷ ಗಣಿತ ತರಬೇತಿ

ನಮ್ಮ ಶಾಲೆಯಲ್ಲಿ ಯು.ಪಿ ತರಗತಿಯ ಮಕ್ಕಳಿಗೆ ಗಣಿತ ಮೊಡೆಲ್ ತಯಾರಿಯ ಕುರಿತು ಪ್ರಾತ್ಯಕ್ಷಿಕೆ ಹಾಗೂ ಎಲ್.ಪಿ ತರಗತಿಯ ಮಕ್ಕಳಿಗೆ, ಅಕ್ಷರ ಹಾಗೂ ಸಂಖ್ಯೆಗಳನ್ನು ಉಪಯೋಗಿಸಿ ಸುಲಭ ರೀತಿಯಲ್ಲಿ ಚಿತ್ರ ರಚನೆಯ ಕುರಿತು ತರಬೇತಿಯನ್ನು ಪುತ್ತೂರಿನ ಸತ್ಯ ಮೂರ್ತಿ ಹೆಬ್ಬಾರ್‌ರವರು ನೀಡಿದರು. 







Wednesday, October 28, 2015


                         ಶಾರದಾ ಪೂಜೆ

ನಮ್ಮಶಾಲೆಯಲ್ಲಿ ನವರಾತ್ರಿ ವಿಜಯ ದಶಮಿಯ ದಿನದಂದು ಶ್ರೀ ಶಾರಾದಾ ಪೂಜೆಯ ವಿಶಿಷ್ಟವಾಗಿ ಜರಗಿತು. ನೆಲ್ಲಿಕುಂಜೆ ಶ್ರೀನಿವಾಸ ಪ್ರಸಾದರ ಪುರೋಹಿತ್ಯದಲ್ಲಿ ಪೂಜಾ ಕಾರ್ಯವು ಉತ್ತಮವಾಗಿ ನಡೆಯಿತು. ಮಕ್ಕಳೆಲ್ಲರೂ ಭಕ್ತಿ ಶ್ರಧ್ದೆಯಿಂದ ಕುಳಿತು ಭಜನೆ ಮಾಡಿದರು. ಅಧ್ಯಾಪಕರು & ರಕ್ಷಕರ ಸಹಾಯದಿಂದ ಪಂಚಕಜ್ಜಾಯ ತಯಾರಾಯಿತು. ಸಣ್ಣ ಪುಟ್ಟ ಮಕ್ಕಳು ವಿದ್ಯಾದಶಮಿಯ ಅಂಗವಾಗಿ ದೇವಿಯ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಮಾಡಿ ವಿದ್ಯಾಭ್ಯಾಸದ ಪ್ರಥಮ ಹೆಜ್ಜೆಯನ್ನಿತ್ತರು. ನೂರಾರು ಮಂದಿ ಹೆತ್ತವರು, ಮಕ್ಕಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಇವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 






                   ನಾಡ ಹಬ್ಬ ದಸರಾ ಆಚರಣೆ

ನಮ್ಮಶಾಲೆಯಲ್ಲಿ ದಸರಾ ನಾಡಹಬ್ಬವನ್ನು ಆಚರಿಸಲಾಯಿತು. ನೆರೆಯ ಸತ್ಯನಾರಾಯಣ ಹೈಸ್ಕೂಲ್ ಶಿಕ್ಷಕರಾದ ಶ್ರೀ ಉದಯಶಂಕರರವರು ದೀಪ ಜ್ವಾಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಚ್ಚೇವು ಕನ್ನಡದ ದೀಪ ನಾಡಗೀತೆ ಹಾಗೂ ವಿಶೇಷ ವಾದ್ಯ ಘೋಷವು ಉದ್ಘಾಟನೆಗೆ ವಿಶೇಷ ಮೆರುಗು ನೀಡಿತು. ಕನ್ನಡವೆಂಬ ದೀಪ ನಮ್ಮ ಬದುಕಿನ ತಮವನ್ನು ಹೋಗಲಾಡಿಸಿ, ಜೀವನ ಪ್ರಜ್ವಲಿಸುವಂತೆ ಮಾಡಿದೆ, ಮಾತ್ರವಲ್ಲದೇ ಕಾಸರಗೋಡಿನ ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಕಲಿತು, ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು, ಎಂಬ ಸಂದೇಶವನ್ನಿತ್ತರು. ಮಾತೃ ಸಂಘದ ಆಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. eನಪೀಠ ಪ್ರಶಸ್ತಿ ವಿಜೇತ ಕನ್ನಡದ ಕವಿಗಳ ವ್ಯಕ್ತಿ ಪರಿಚಯವನ್ನು ಸ್ಲೈಡ್ ಶೋ ನಲ್ಲಿ ಪ್ರದರ್ಶಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯಗೀತೆ, ನಾಡಗೀತೆ, ಜಾನಪದ ಗೀತೆ, ಹುಲಿವೇಷ ಮೊದಲಾದವುಗಳು ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಪದ್ಮನಾಭ ಆರ್ ಕಾರ್ಯಕ್ರಮ ನಿರೂಪಿಸಿದರು.  







                                          




                  ವೃತ್ತಿ ಪರಿಚಯ ಮೇಳ

ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳ ನಡೆಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಮಕ್ಕಳಿಗೆ ತರಬೇತಿ ನೀಡಿದರು.







        ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಜರಗಿತು. ಗಾಂಧೀಜಿಯವರ ರಘುಪತಿ ರಾಘವ ರಾಜಾರಾಂಪ್ರಾರ್ಥನೆಯನ್ನು ಎಲ್ಲರು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳಾದ ಅಬೂಬಕ್ಕರ್ ಸಿದ್ಧಿಕ್ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ವೈ ಸುಭ್ರಹ್ಮಣ್ಯ ಭಟ್‌ರವರು ಗಾಂಧೀ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳೀ ಕೃಷ್ಣ ಹಾಗೂ ವೈಷ್ಣವ್ ವೈ ರವರು ಈ ಮಹಾನ್ ವ್ಯಕ್ತಿಗಳ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಉತ್ತಮ ಹೈನುಗಾರ, ಕೃಷಿಕ, ಉದ್ಯಮಿಯಾಗಿ ಸವ್ಯಸಾಚಿ ಎನಿಸಿಕೊಂಡಿರುವ ಅಬೂಬಕ್ಕರ್ ಸಿದ್ಧಿಕ್ ಪೆರ್ಲರವರು ನಮ್ಮ ಶಾಲೆಗೆ ಸಿ.ಎಫ್.ಎಲ್ ಬಲ್ಬ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಅವರು ಸಿ.ಎಫ್.ಎಲ್ ಬಲ್ಬ್‌ಗಳನ್ನು ಬಳಸಿ, ವಿದ್ಯುತ್ ಉಳಿಸಿ ಎಂಬ ಸಂದೇಶವನ್ನು ನೀಡಿದರು. ಇದು ಮಕ್ಕಳ ಮೂಲಕ ಪ್ರತಿ ಮನೆಗಳಿಗೂ ತಲುಪುವಂತಾಗಲಿ ಎಂದರು. ಶಾಲಾ ವ್ಯವಸ್ಥಾಪಕರು ಅತಿಥಿಗಳಿಗೆ ಸ್ಮರಣೆಯಿತ್ತು ಗೌರವಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರಿಯ ಸರಳಾಯ, ಮಾತ್ರ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್‌ರವರು ಪ್ರಾಸ್ತಾವಿಕದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎ.ಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಗಾಂಧೀಜಿಯವರ ಕನಸಾದ ಸೇವಾದಿನದ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಲು, ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಶಿಕ್ಷಕರ ನೇತೃತ್ವದಲ್ಲಿ ನಡೆಸಲಾಯಿತು. ಲಘು ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು.