Friday, October 21, 2016



                                              ಗಾಂಧೀ, ಶಾಸ್ತ್ರಿ ಜನ್ಮದಿನಾಚರಣೆ 

ನಮ್ಮ ಶಾಲೆಯಲ್ಲಿ ಸುಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಈ ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈದರು. ಈ ಸಂದರ್ಭದಲ್ಲಿ ಅವರು ಅಹಿಂಸೆ, ಸರಳತೆ, ಶುಚಿತ್ವ ಗಾಂಧೀಜಿಯವರ ವ್ಯಕ್ತಿತ್ವದ ಪ್ರಮುಖ ಗುಣಗಳು ಅದೇ ರೀತಿ ಶಾಸ್ತ್ರಿ ಯವರ ಜೀವನದ ಕೆಲವು ಮುಖ್ಯ ಪ್ರಸಂಗಗಳನ್ನು ನೆನಪಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ರವರು ಗಾಂಧೀಜಿಯವರ ಪ್ರಾರ್ಥನಾ ಶ್ಲೋಕವಾದ ರಘುಪತಿ ರಾಘವ ಎಂಬ ಗೀತೆಯನ್ನು ಹಾಡಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಶ್ರುತಿ ಕೆ ಗಾಂಧೀಜಿಯವರ ಹಾಗೂ ಮಾಸ್ಟರ್ ಆಶ್ರಿತ್ ವೈ ಶಾಸ್ತ್ರಿ ಯವರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಸೇವಾ ದಿನದ ಅಂಗವಾಗಿ ಶಾಲಾ ಪರಿಸರವನ್ನು ಶಿಕ್ಷರು ಮಕ್ಕಳು ಸೇರಿಕೊಂಡು ಸ್ವಚ್ಛಗೊಳಿಸಲಾತು.



Thursday, September 29, 2016

                               
                                       ಓಣಂ ಆಚರಣೆ
ನಮ್ಮಶಾಲೆಯಲ್ಲಿ ಜರಗಿದ ಓಣಂ ಆಚರಣೆಯಲ್ಲಿ ಮಹಾಬಲಿಯಾಗಿ ಪ್ರಥಮ್ ಬಿ.ಕೆ, ಪ್ರತಿ ತರಗತಿಯಲ್ಲೂ ರಂಜಿಸಿದ ಹೂವಿನ ಪೂವಲಿ, ಮಕ್ಕಳ ಹೆತ್ತವರ ರಂಜಿಸಿದ ಓಣಂಕಲಿ, ಹಗ್ಗ ಜಗ್ಗಾಟ, ಭೂರಿ ಭೋಜನದೊಂದಿಗೆ ಓಣ ಸದ್ಯ. 


Friday, September 9, 2016


                                   
                              ಶಿಕ್ಷಕರ ಸ್ವ ಗೃಹದಲ್ಲಿ ಶಿಕ್ಷಕ ದಿನಾಚರಣೆ

ನಮ್ಮಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ, ಶಾಲೆಯಲ್ಲಿ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮ ಟೀಚರ್ ರವರ ಬಗ್ಗೆ ಗುರುವಂದನಂ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇನ್ನೋರ್ವ ಶಿಕ್ಷಕ ಶಾಲಾ ಹಳೇ ವಿದ್ಯಾರ್ಥಿ ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತ ಶಿಕ್ಷಕ ಎಸ್.ಕೆ ಸುಬ್ರಹ್ಮಣ್ಯ ಭಟ್ ಪಾಲ್ತಮೂಲೆ ಇವರ ಸ್ವ ಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲಪುಷ್ಪ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತನ್ನ ಬಾಲ್ಯ ಕಾಲದ ಸವಿ ಅನುಭವವನ್ನು ನೆನಪಿಸುತ್ತಾ ಮಕ್ಕಳಿಗೆ ನೀಡುವ ಪ್ರೋತ್ಸಾಹವೇ ಕಲಿಕೆಯ ಔನತ್ಯಕ್ಕೆ ಮೂಲ ಭಯರಹಿತ ವಾತಾವರಣವನ್ನು ರೂಪಿಸುವುದರಿಂದ ಮಕ್ಕಳಿಗೆ ಕಲಿಕೆ ಆಸಕ್ತಿದಾಯಕವಾಗಲು ಸಾಧ್ಯ ಹಾಗೂ ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್ ರವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಬಿ. ವಂದಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಾಕ್ಷ ಶ್ರೀ ಶ್ರೀಧರ್ ಭಟ್ ಸಜಂಗದ್ದೆ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.







                              ನಮ್ಮ ಶಾಲೆಯಲ್ಲಿ ಶಾಲಾ ತರಕಾರಿ ತೋಟದಲ್ಲಿ ಬೆಳೆದ ಸುಮಾರು ೩೦ ಕೆ.ಜಿ ತೂಕದ ಬೃಹಾದಾಕಾರದಲ್ಲಿ ಬೆಳೆದ ಬಾಳೆಗೊನೆಯೊಂದಿಗೆ ಇಕೋ ಕ್ಲಬಿನ ಸದಸ್ಯರು, ಶಿಕ್ಷಕ ಶ್ರೀ ಪದ್ಮನಾಭ ಆರ್ ಹಾಗೂ ಕೃಷಿ ಚಟುವಟಿಕೆಯಲ್ಲಿ ಮಕ್ಕಳನ್ನು ನಿತ್ಯ ತೊಡಗಿಸಿಕೊಂಡು ಮಾರ್ಗದರ್ಶನ ನೀಡುವ ಶಾಲಾ ಸಿಬ್ಬಂದಿ ರಾಧಾಕೃಷ್ಣ ಎಸ್ ರವರು.






                                  
                          ನಮ್ಮ ಶಾಲೆಯಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳಿಗೆ ಕೃಷ್ಣ ಭಕ್ತಿಗೀತೆ, ಭಗವದ್ಗೀತಾ ಕಂಠಪಾಠ, ಪುರಾಣ ಕ್ವಿಜ್, ಗೋಬಾಲ ರಚನೆ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮಭಟ್ ರವರು ಶಾಲಾ ಎಸೆಂಬ್ಲಿಯಲ್ಲಿ ಬಹುಮಾನವನ್ನು ವಿತರಿಸಿದರು. 



                                          ಸಂಸ್ಕೃತ ದಿನಾಚರಣೆ

ನಮ್ಮಶಾಲೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಸಂಸ್ಕೃತ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ನಿತ್ಯೋಪಯೋಗಿ ಸುಮಾರು ೧೦೦ ವಸ್ತುಗಳನ್ನು ಸಂಸ್ಕೃತ ನಾಮಧ್ಯೇಯದೊಂದಿಗೆ ಪ್ರದರ್ಶಿಸಲಾಗಿತ್ತು. ಈ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ಇವರು ಉಧ್ಘಾಟಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರಗಿತು. ಅಭಿನಯ ಗೀತೆ, ನಾಟಕ, ಸಮೂಹ ಗಾನ, ಸಮೂಹ ನೃತ್ಯಗಳಿಂದ ಮಕ್ಕಳು ಮನರಂಜಿಸಿದರು. ಸಂಸ್ಕೃತ ಶಿಕ್ಷಕ ಶ್ರೀ ಶ್ರೀ ಹರಿ ಶಂಕರ ಶರ್ಮ ರವರ ನೇತೃತ್ವದಲ್ಲಿ ಮಾಸ್ಟರ್ ವೈಷ್ಣವ್ ಕಾರ್ಯಕ್ರಮ ನಿರೂಪಿಸಿದನು. 




                                                       ಕೃಷಿ ದಿನ

ನಮ್ಮ ಶಾಲೆಯಲ್ಲಿ ಕೃಷಿ ದಿನಾಚರಣೆಯ ಅಂಗವಾಗಿ ಎಣ್ಮಕಜೆ ಪಂಚಾಯತ್ ವತಿಯಿಂದ ಲಭಿಸಿದ ತರಕಾರಿ ಬೀಜಗಳನ್ನು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ವಿತರಿಸಿದರು. ಶಿಕ್ಷಕ ವೆಂಕಟವಿದ್ಯಾಸಾಗರ್ ರವರು ಕೃಷಿ ಮಹತ್ವದ ಬಗ್ಗೆ ತಿಳಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಸ್ವಾಗತಿಸಿದರು. 




Wednesday, September 7, 2016


                                         ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ

ನಮ್ಮ ಶಾಲೆಯಲ್ಲಿ ೭೦ ನೇ ಸಂಭ್ರಮದ ಸ್ವತಂತ್ರೋತ್ಸವ ಜರಗಿತು. ಶಾಲಾ ದೈನಂದಿನ ಎಸ್ಸೆಂಬ್ಲಿಯಲ್ಲಿ ನಿವೃತ್ತ ಯೋಧ ಗೋವಿಂದ ನಾಯಕ್ ಮೊಗೇರು ದ್ವಜ ವಂದನೆ ಗೈಯುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮೊದಲು ತಂದೆ ತಾಯಿ, ಗುರುಹಿರಿಯರನ್ನು ಪ್ರೀತಿಸಿ ಮತ್ತೆ ದೇಶವನ್ನು ಪ್ರೀತಿಸಿ ಎನ್ನುವ ಸಂದೇಶವನ್ನಿತ್ತರು. ತಮ್ಮ ವೃತ್ತಿಯ ಅನುಭವವನ್ನು ಕೂಡಾ ಮಕ್ಕಳೊಡನೆ ಹಂಚಿಕೊಂಡರು. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ ವೈ ಸುಬ್ರಹ್ಮಣ್ಯ ಭಟ್ ರವರು ಸೈನಿಕ ಹುದ್ದೆಯನ್ನು ಪ್ರೀತಿಸಬೇಕು, ತಾವು ಮುಂದೆ ಸೈನಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನಿತ್ತರು. ವಾರ್ಡ್ ಮೆಂಬರ್ ಚಂದ್ರಾವತಿ ಟೀಚರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸುಚಿತ್ರ ಮುಂಗ್ಲಿಕಾನ ಉಪಸ್ಥಿತರಿದ್ದರು. ಅತಿಥಿ ಅಬ್ಯಾಗತರು ಸ್ವಾತಂತ್ರೋತ್ಸವದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ನಂತರ ಧ್ವನಿ ವರ್ಧಕದ ದೇಶ ಭಕ್ತಿಗಾನಕ್ಕೆ ಮಕ್ಕಳು ಮೆರವಣಿಗೆಯಲ್ಲಿ ಡಿಸ್ ಪ್ಲೇ ಪ್ರದರ್ಶನ ವಿತ್ತರು. ಭಾರತ ಮಾತೆಯಾಗಿ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಗಾಂಧೀಜಿಯಾಗಿ ಹೇಮಂತ ಕೃಷ್ಣ ಮೆರವಣಿಗೆಯ ಮುಂದಾಳತ್ವ ನೀಡಿದರು.


  

                                     ಶಾಲೆಯಲ್ಲಿ ವರಮಹಾಲಕ್ಷ್ಮೀ ಪೂಜೆ
ನಮ್ಮ ಶಾಲೆ ವಠಾರಲ್ಲಿ ಮಾತೃ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು. ಪುರೋಹಿತ ಶ್ರೀಧರ್ ಭಟ್ ಸಜಂಗದ್ದೆಯವರ ನೇತೃತ್ವದಲ್ಲಿ ವಿನಯ ನಾಗರಾಜ್ ಕೋಟೆ ಇವರು ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರು. ಸುಮಂಗಲೆಯವರು ಲಲಿತಾ ಸಹಸ್ರ ನಾಮವನ್ನು ಪಾರಾಯಣ ಮಾಡಿದರು. ಸತ್ಯ ನಾರಾಯಣ ಪ್ರೌಢ ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಿ ಕೆ.ವೈ ಇವರು ಪೂಜಾ ಮಹತ್ವದ ಬಗ್ಗೆ ತಿಳಿಸಿದರು. ಅವರ ಮಾತಿನ ಶೈಲಿ ಭಕ್ತಾದಿಗಳನ್ನು ವಿಸ್ಮಿತರನ್ನಾಗಿಸಿತು. 
ಈ ಸಂದರ್ಭದಲ್ಲಿ ಶಾಲೆಯಲ್ಲಿ ಉಚಿತವಾಗಿ ಹೊಲಿಗೆ ಹಾಗೂ ತರಬೇತಿ ನೀಡುವ ಶ್ರೀಮತಿ ಅನುರೂಪಾ ಕೆದಂಬಾಯಿಮೂಲೆ ಹಾಗೂ ಶ್ರೀಮತಿ ನಯನ ಬಳಕ್ಕ. ಅದೇ ರೀತಿ ವೃತ್ತಿ ಪರಿಚಯ ತರಗತಿಯನ್ನು ಮಕ್ಕಳಿಗೆ ನಡೆಸುವ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಸ್ವರ್ಗ ಇವರನ್ನು ಮಾತೃ ಸಂಘದ ವತಿಯಿಂದ ಗೌರವಿಸಲಾಯಿತು. ಸುಮಾರು ೭೦೦ ಪೂಜೆಗಳು ನೊಂದಾವಣೆಗೊಂಡಿದ್ದು ೨೦೦ ಮಂದಿ ಭಕ್ತಾದಿಗಳು ಪೂಜೆಯಲ್ಲಿ ಭಾಗಿಗಳಾಗಿದ್ದರು. ಕೊನೆಯಲ್ಲಿ ನೆರೆದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕಿ ಶ್ರೀಮತಿ ಗೀತಾಕುಮಾರಿ .ಬಿ ಯವರು ಕಾರ್ಯಕ್ರಮ ನಿರೂಪಿಸಿದರು.




                                           ಕರಾಟೆ ತರಬೇತಿ-ಉದ್ಘಾಟನೆ
ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯವಂತ ಶರೀರವನ್ನು ಕಾಪಾಡಲು ಹಾಗೂ ಸ್ವಯಂ ರಕ್ಷಣೆಗಾಗಿ ಕರಾಟೆ ತರಗತಿಯನ್ನು ಆರಂಭಿಸಲಾಯಿತು. ಕರಾಟೆ ತರಗತಿಯನ್ನು ಬ್ಲಾಕ್ ಪಂಚಾಯತ್ ಸದಸ್ಯೆ ಸವಿತಾ ಬಾಳಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಶುಭಾಶಂಸನೆ ಗೈದರು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿದರು. ಶ್ರೀಮತಿ ಗೀತಾಂಜಲಿ ಟೀಚರ್ ವಂದನಾರ್ಪಣೆಗೈದರು. ಶಿಕ್ಷಕ ಪದ್ಮನಾಭ ಸರ್ ಕಾರ್ಯಕ್ರಮ ನಿರೂಪಿಸಿದರು. ಫಿಫ್ತ್ ಡಾನ್ ಬ್ಲಾಕ್ ಬೆಲ್ಟ್  ಪಡೆದ ಪಿ.ಕೆ ಆನಂದ್ ರವರು ಮಕ್ಕಳಿಗೆ ಕರಾಟೆ ತರಗತಿಯನ್ನು ಆರಂಭಿಸಿದರು. 




                                         ವೀರ ಸಾವರ್ಕರ್-ಸಿ.ಡಿ ಪ್ರದರ್ಶನ
ನಮ್ಮಶಾಲೆಯಲ್ಲಿ ಸ್ವಾತಂತ್ರ್ಯ ವೀರ  ವೀರ ಸಾವರ್ಕರ್ ಜಯಂತಿ ಹಾಗೂ ಕಾರ್ಗಿಲ್ ವಿಜಯೋತ್ಸವದ ಸಿ.ಡಿ ಪ್ರದರ್ಶನವನ್ನು ಯುವ ಬ್ರಿಗೇಡ್ ಕಾಸರಗೋಡು ಶಾಖೆಯ ವತಿಯಿಂದ ಜರಗಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರಿಂದ ಅನುಭವಿಸಿ ಹಿಂಸೆ, ಶಿಕ್ಷೆಯ ಮೈ ರೋಮಾಂಚನವಾಗುತ್ತದೆ. ಅವರ ಧೈರ್ಯ ಸಾಹಸಕ್ಕೆ ತಲೆಬಾಗಲೇ ಬೇಕು.
         ಯುವ ಬ್ರಿಗೇಡ್ ನ ಸಂಚಾಲಕರಾದ ಕೃಷ್ಣಪ್ರಸಾದ ಇವರು ಸಿ.ಡಿ ಯನ್ನು ಪ್ರದರ್ಶಿಸಿ ಅಗತ್ಯ ಮಾಹಿತಿಯನ್ನಿತ್ತರು. ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಿ ಸ್ನೇಹ ಬಾಳಿಕೆ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಗೀತಾಕುಮಾರಿ.ಬಿ ಎಲ್ಲರನ್ನು ಸ್ವಾಗತಿಸಿದರು. 



                                    ಮಕ್ಕಳಿಗೆ ಗದ್ದೆಯಲ್ಲಿ ಪಾಠ-ಬಯಲು ಪ್ರವಾಸ

ನಮ್ಮ ಶಾಲೆಯ ಮಕ್ಕಳು ಮುಖ್ಯೋಪಾಧ್ಯಾಯರಾದ ಪಿ. ಶಿವರಾಮ್ ಭಟ್ ಇವರ ಗದ್ದೆಗೆ ಬೇಟಿ ಕೊಟ್ಟು ಮಕ್ಕಳಿಗೆ ನೇಜಿ ನೆಡುವ ಕ್ರಮವನ್ನು ತಿಳಿಸಿಕೊಡಲಾಯಿತು. ಮಕ್ಕಳೇ ಸ್ವತಃ ನೇಜಿ ನೆಟ್ಟು ಓ ಬೇಲೆ ಹಾಡನ್ನು ಹಾಡಿ, ಹೊಸ ಅನುಭವವನ್ನು ಪಡೆದರು. ಗದ್ದೆ ಬೇಸಾಯದ ಬಗ್ಗೆ ಅರುಣಾ ಶಿವರಾಮ್ ರವರು ಮಾಹಿತಿಗಳನ್ನು ನೀಡಿದರು. ಶಿಕ್ಷಕರಾದ ಪದ್ಮನಾಭ್ ಆರ್ ಹಾಗೂ ಮಿಥುನ್ ಸರ್ ರವರು ನೇತೃತ್ವ ವಹಿಸಿದರು. 




                                           
                          ಶಾಲೆಯಲ್ಲಿ ಜಾನಪದ ಕಲೆ

                     ನಮ್ಮ ಮಕ್ಕಳಿಗೆ ಜಾನಪದ ಕಲೆ ಆಟಿಕಳಂಜನ ಪ್ರಾತ್ಯಕ್ಷಿಕೆ ನಡೆಯಿತು.




                                                                  ತರಗತಿ  ಪಿಟಿಎ

ನಮ್ಮ ಶಾಲೆಯಲ್ಲಿ ಜುಲೈ ೨೧ ರಂದು ಎಲ್.ಪಿ ಹಾಗೂ ಯು.ಪಿ ತರಗತಿಯಲ್ಲಿ ತರಗತಿ ಪಿ.ಟಿ.ಎ ಜರಗಿತು. ಆಯಾ ತರಗತಿಗಳಲ್ಲಿ ೧ನೇ ಯೂನಿಟ್ ಟೆಸ್ಟ್‌ನ ಮೌಲ್ಯ ಮಾಪನ ವರದಿ, ತರಗತಿ ಚಟುವಟಿಕೆಯಲ್ಲಿ ಮಕ್ಕಳ ಭಾಗವಹಿಸುವಿಕೆ, ರಕ್ಷಕರು ಗಮನಿಸಬೇಕಾದ ವಿಚಾರ, ರಕ್ಷಕರ ಅಭಿಪ್ರಾಯ ಮೊದಲಾದ ಕುರಿತು ಚರ್ಚಿಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಪ್ರತಿ ತರಗತಿಯನ್ನು ಸಂದರ್ಶಿಸಿ ಮೋನಿಟರಿಂಗ್ ನಡೆಸಿದರು. 




                                                         ಚಾಂದ್ರ ದಿನ

ನಮ್ಮ ಶಾಲೆಯಲ್ಲಿ ಚಾಂದ್ರದಿನದ ಬಗ್ಗೆ ಮಾಹಿತಿಯನ್ನು ನೀಡಲು ಸ್ಲೈಡ್ ಶೋ ಪ್ರದರ್ಶನ ನಡೆಯಿತು. ವಿಜ್ಞಾನ ಶಿಕ್ಷಕ ಶ್ರೀ ವೆಂಕಟವಿದ್ಯಾಸಾಗರ್ ರವರು ಸಾಕ್ಷಾ ಚಿತ್ರ ಸಮೇತವಾಗಿ ಚಾಂದ್ರ ದಿನದ ಬಗ್ಗೆ, ಚಾಂದ್ರಾಯಾನದ ಆರಂಭ, ಚಂದ್ರನ ಅಂಗಳದಲ್ಲಿ ನಡೆದ ಅನ್ವೇಷಣೆ, ಸಹಕರಿಸಿದ ವಿಜ್ಞಾನಿ ಬಳಗದ ಕುರಿತು ಕುಲಂಕುಶವಾಗಿ ಎಲ್.ಪಿ ಹಾಗೂ ಯು.ಪಿ ತರಗತಿಗಳಿಗೆ ಪ್ರತ್ಯ ಪ್ರತ್ಯೇಕವಾಗಿ ವಿವರಿಸಿದರು. 




                                    ಶಾಲಾ ಮಕ್ಕಳ ದಂಡು ರಕ್ಷಿತಾರಣ್ಯದಲ್ಲಿ

ನಮ್ಮ ಶಾಲೆಯಲ್ಲಿ ಜುಲೈ ಮೊದಲ ವಾರ ವನಮಹೋತ್ಸವದ ಅಂಗವಾಗಿ ಶಾಲಾ ಸಮೀಪದ ವಾಣೀನಗರದ ರಕ್ಷಿತಾರಣ್ಯಕ್ಕೆ ಬಯಲು ಪ್ರವಾಸವನ್ನು ಕೈಗೊಳ್ಳಲಾಯಿತು. ವನಮಹೋತ್ಸವದ ಆಚರಣೆಯ ಧ್ಯೇಯ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ರವರು ತಿಳಿಸಿದರು. ಕಾಡಿನ ಈ ಯಾನದಿಂದ ಅಲ್ಲಲ್ಲಿ ಹರಿಯುವ ನೀರ ಝರಿಗಳು, ಕಾಡು ಹಣ್ಣುಗಳಾದ ಕುಂಟಲಹಣ್ಣು ಚೂರಿಕಾಯಿ, ಚಾಕಟೆ ಕಾಯಿಗಳ ರುಚಿ, ಆಕಾಶದೆತ್ತರ ಭೀಮಗಾತ್ರದಲ್ಲಿರುವ ಮರಗಳು, ವಿಶೇಷ ರೀತಿಯ ಬಳ್ಳಿ, ನಾನಾ ವರ್ಗ ಮರಗಳ ಪರಿಚಯ, ಔಷದೀಯ ಸಸ್ಯ, ಹಾಸಿಗೆಯಂತೆ ಹಾಸಿರುವ ಗಾಳಿ ಮರದ ಎಲೆಗಳು,ಓಸಿಯಾಗಿ ಸಿಗುವ ಎಸಿ ಅನುಭವ ನೀಡುವ ಹವಾಮಾನದ ಪ್ರತ್ಯಕ್ಷ ಅನುಭವವನ್ನು ಪಡೆಯುವಂತಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ನಮ್ಮ ಶಾಲಾ ರಕ್ಷಕ ಬಳಗದವರಾದ ಶ್ರೀ ಕೃಷ್ಣ ನಾಯ್ಕ ಹಾಗೂ ಶ್ರೀ  ಲಕ್ಷ್ಮಿ ಪ್ರೀಯ ಸರಳಾಯ ಇವರು ನಮಗೆ ಸಾಥ್ ನೀಡಿದರು. ಶಾಲಾ ಎಲ್ಲಾ ಮಕ್ಕಳು ಕಾಡಿನ ಯಾನದ ಸವಿಯನ್ನಿತ್ತರು. 






                                                 ವಿಶ್ವ ಜನಸಂಖ್ಯಾ ದಿನ

ನಮ್ಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಸಮಾಜ ವಿಜ್ಙಾನ ಕ್ಲಬಿನ ವತಿಯಿಂದ ವಿದ್ಯಾರ್ಥಿ ಧನುಷ್ ಕಶ್ಯಪ್ ಶಾಲಾ ಎಸ್ಸೆಂಬ್ಲಿಯಲ್ಲಿ ಪ್ರಬಂಧ ಮಂಡಿಸಿದನು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ದಿನದ ವಿಶೇಷ ಪೂರಕವಾಗಿ ಮಂಡಿಸಿದರು.



          ಇಂಗ್ಲಿಷ್ ಹಾಗೂ ಮಲಯಾಳಂ ಕ್ಲಾಸುಗಳ ಉದ್ಘಾಟನೆ 

ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ವತಿಯಿಂದ ಇಂಗ್ಲಿಷ್ ಹಾಗೂ ಮಲಯಾಳಂ ಕ್ಲಾಸುಗಳ ಉದ್ಘಾಟನಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವೈ ಸುಬ್ರಹ್ಮಣ್ಯ ಭಟ್‌ರವರು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಈ ದೀಪ ಜ್ವಾಲೆ ನಿಮ್ಮ ಬಾಳನ್ನು ಬೆಳಗಲಿ ಎಂದು ಶುಭಹಾರೈಸಿದರು. ಶ್ರೀಮತಿ ನಿಶಿತಾ ಪ್ರಕಾಶ್ ಪೆರ್ಲ ಇವರು ತರಗತಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ರವರು ಉಪಸ್ಥಿತರಿದ್ದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಶಿವರಾಮ್ ಭಟ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಬಿ ಗೀತಾ ಕುಮಾರಿ  ವಂದನಾರ್ಪಣೆ ಗೈದರು.





                                                   ಮಾತೃ ಸಂಗಮದ ವಿಶೇಷ ಸಭೆ
ನಮ್ಮ ಶಾಲೆಯಲ್ಲಿ ಮಾತೃ ಸಂಘದ ವಿಶೇಷ ಸಭೆ ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ  ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಇವರು ವರಮಹಾಲಕ್ಷ್ಮಿ ಪೂಜೆಯ ಕರಪತ್ರವನ್ನು ಬಿಡುಗಡೆಗೊಳಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಯವರು ಪೂಜೆಯ ಸಕಲ ವಿವರವನ್ನು ನೀಡಿದರು. ಶಿಕ್ಷಕಿ ಶ್ರೀಮತಿ ಕಲಾವತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಗೀತಾಂಜಲಿ ಪ್ರಾರ್ಥಿಸಿದರು. 


     

                        ಹಲಸು ದಾಸ್ತಾನು ಕಾರ್ಯಾಗಾರ
ವಿಪರೀತ ಮಳೆ, ಹವಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಮಳೆಗಾಲ ಬಂತೆಂದರೆ ತರಕಾರಿ ಬೆಲೆ ಗಗನಕ್ಕೇರುವುದು ಸರ್ವೇ ಸಾಮಾನ್ಯ ಸಂಗತಿ, ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಹಲಸಿನ ಸೋಳೆ ದಾಸ್ತಾನು ಕಾರ್ಯಾಗಾರ ಜರಗಿತು. ಶಾಲಾ ಪರಿಸರದಲ್ಲಿ ಬೆಳೆದ ತಾಜಾ, ವಿಷಮುಕ್ತ ಆಹಾರ ಬೆಳೆ ಹಲಸು ಮಕ್ಕಳ ಮಧ್ಯಾಹ್ನದೂಟಕ್ಕೆ ಪ್ರಯೋಜನಕಾರಿಯಾಗಲೆಂದು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸಹಿತ ಶಿಕ್ಷಕರು ಹಾಗೂ ರಕ್ಷಕರು ಸೇರಿಕೊಂಡು ಸುಮಾರು ೩೦ ಹಲಸಿನ ಕಾಯಿಯನ್ನು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು. 





















Wednesday, August 31, 2016


                                                     
                                                            ವೈದ್ಯರ ದಿನ 


ಖ್ಯಾತ ವೈದ್ಯ ಮತ್ತು ಅಪ್ರತಿಮ ದೇಶ ಭಕ್ತ ಡಾ ಬಿ.ಸಿ.ರಾಯ್ ಅವರ ಜನ್ಮ ದಿನದ ಸ್ಮರಣೆಯೊಂದಿಗೆ ಅಖಂಡ ವೈದ್ಯ ಲೋಕಕ್ಕೆ ಕೃತಜ್ಞತೆ ಹೇಳುವ ಅಪೂರ್ವ ಕ್ಷಣ. ಬದುಕಿನಲ್ಲಿ ಆರೋಗ್ಯವೇ ಮೂಲ ಮಂತ್ರ. ಪ್ರಸ್ತುತ ಪ್ರಪಂಚದಲ್ಲಿನ ಸ್ಪರ್ಧಾತ್ಮಕ ಬದುಕಿನಲ್ಲಿ ಆರೋಗ್ಯದ ಬಗೆಗಿನ ಕಾಲಜಿ ಕಡಿಮೆಯಾಗಿ ಆರೋಗ್ಯ ಹದಗೆಡುವ ಪ್ರಸಂಗಗಳು ಜಾಸ್ತಿ. ಆ ಕ್ಷಣಕ್ಕೆ ನಮ್ಮ ಜೀವಕ್ಕೆ ಮರುಜೀವ ಕರುಣಿಸುವ ದೇವರು ವೈದ್ಯರು. ವೈದ್ಯರ ಸೇವೆ ಅಪಾರ. ವೈದ್ಯರ ದಿನದಂದು ನಮ್ಮ ಶಾಲೆಯಲ್ಲಿ ವಿಜ್ಞಾನ ಕ್ಲಬಿನ ಸದಸ್ಯರು ಹಾಗೂ ಕ್ಲಬಿನ ಸಂಚಾಲಕ ಶಿಕ್ಷಕರಾದ ಶ್ರೀ ವೆಂಕಟ ವಿದ್ಯಾಸಾಗರ್ ರವರು ಸ್ಥಳೀಯ ವೈದ್ಯರು ಹಾಗೂ ಕೇರಳ ರಾಜ್ಯ ಕೈರಾಲಿ 'ಡಾಕ್ಟರ್ ಎವಾರ್ಡ್' ಪುರಸ್ಕೃತ ಮೋಹನ್ ಕುಮಾರ್ ವೈ.ಎಸ್ ಇವರ ಕ್ಲಿನಿಕ್‌ಗೆ ತೆರಳಿ ಪುಷ್ಪ ಗುಚ್ಛ ನೀಡಿ ಶುಭಾಶಯ ಕೋರಲಾತು.









                        ವಾಚನಾ ಸಪ್ತಾಹದ ಸಮಾರೋಪ ಸಮಾರಂಭ

ನಮ್ಮಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಸಂಸ್ಮರಣಾ ದಿನದ ಅಂಗವಾಗಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ, ಇಂಜಿನಿಯರಿಂಗ್ ಪದವಿದರರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀ  ಶ್ರೀ  ಹರಿ ಭರಣೀಕರ್ ರವರು 'ಓದುವಾಗ ಖುಷಿಯಿಂದ  ಇಷ್ಟಪಟ್ಟು ಓದಬೇಕು. ಶಾಲಾ ಗ್ರಂಥಾಲಯದಲ್ಲಿ ಮಕ್ಕಳಿಗಾಗಿ ಇರುವ ಪುಸ್ತಕವನ್ನು ಓದಿ ಮುಗಿಸುತ್ತೇನೆ ಎಂಬ ಧ್ಯೇಯವನ್ನು ಶಪಥ ಮಾಡಿಕೊಳ್ಳಿ ಜೀವನದ ಗುರಿಯನ್ನು ಇಟ್ಟುಕೊಳ್ಳಿ, ಆ ಗುರಿಯ ಹಿಂದೆ ಗುರುಬೇಕು. ಓದು ವಾಚನಾ ಸಪ್ತಾಹಕ್ಕೆ ಸೀಮಿತವಾಗಿರದೆ ನಿರಂತರವಾಗಿರಬೇಕು. ಎಲ್ಲವನ್ನು ಸಾಧಿಸಲು ಸಕಲ ಸೌಕರ್ಯವು ನಿಮಗೆ ಇಲ್ಲಿ ಲಭಿಸುತ್ತದೆ' ಎಂದು ಈ ಸಂದರ್ಭದಲ್ಲಿ ನುಡಿದರು. ಪ್ರತಿ ತರಗತಿಂದಲೂ ಇಬ್ಬರೂ ಮಕ್ಕಳಿಂದ ಓದು ಟಿಪ್ಪಣಿ ಮಂಡಿಸಲಾತು. ಮಕ್ಕಳು ತಯಾರಿಸಿದ ಸಂಚಿಕೆಯನ್ನು ಈ ಸಂದರ್ಭಲ್ಲಿ ಬಿಡುಗಡೆ ಮಾಡಲಾತು. 
ಪ್ರಾಸ್ತಾವಿಕದೊಂದಿಗೆ ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ವಂದನಾರ್ಪಣೆ ಗೈದರು.
ವಿದ್ಯಾರ್ಥಿನಿಯರಾದ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಶೈಲಿ.ಕೆ ಕಾರ್ಯಕ್ರಮ ನಿರೂಪಿಸಿದರು.


















               ಗ್ರಾಮಾಭಿವೃದ್ಧಿ ಯೋಜನೆ ಮಾಹಿತಿ ಕಾರ್ಯಾಗಾರ


ನಮ್ಮ ಶಾಲೆಯಲ್ಲಿ ಧರ್ಮಸ್ಥಳ ಗ್ರ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ, ಆರೋಗ್ಯ ರಕ್ಷಣೆಯ ಮಾಹಿತಿ ಕಾರ್ಯಾಗಾರ ನಡೆತು. ಎಣ್ಮಕಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾದ ಶ್ರೀಮತಿ ರೂಪವಾಣಿ ಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಶ್ರೀ ಗೋಪಾಲ ಶೆಟ್ಟಿ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯ ಶಿಕ್ಷಕ ಉಮೇಶ್ ಹಾಗೂ ಕುಂಬಳೆ-ಕಾಸರಗೋಡಿನ ಯೋಜನಾಧಿಕಾರಿಯಾದ ಶ್ರೀಮತಿ ಚೇತನ ಇವರು ಸಂಪನ್ನೂಲ ವ್ಯಕ್ತಿಯಾಗಿ ಸಹಕರಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಇವರು ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದರು.ಈ ಸಂದರ್ಭದಲ್ಲಿ ಅರಣ್ಯ ಪ್ರಶಸ್ತಿ ವಿಜೇತ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲಾ ಶಿಕ್ಷಕ ಉಮೇಶ್ ಇವರಿಗೆ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಂದ ಶಿಕ್ಷಕ ಸಚ್ಚಿದಾನಂದ ಎಸ್ ಮತ್ತು ಶಿಕ್ಷಕ ಎಸ್.ಎನ್ ವೆಂಕಟ ವಿದ್ಯಾಸಾಗರ್ ಶಾಲು ಹೊದಿಸಿ ಫಲ ಪುಷ್ಪ ತಂಬೂಲ ನೀಡಿ ಗೌರವಿಸಲಾಯಿತು. 
          ಮೇಲ್ವಿಚಾರಕ ಮೋಹನ್ ಸರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಸುಕನ್ಯಾ ಇವರು ಎಲ್ಲರನ್ನು ಸ್ವಾಗತಿಸಿ, ಒಕ್ಕೂಟ ಕಾರ್ಯದರ್ಶಿ ಕುಮಾರಿ ರೇವತಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಪಹಾರದ ವ್ಯವಸ್ಥೆ ಮಾಡಲಾತು.



Friday, July 1, 2016



                  ವಿಶ್ವ ಯೋಗ ದಿನ

ಓರ್ವ ವ್ಯಕ್ತಿಯು ರೋಗಗಳಿಂದ ಮುಕ್ತವಾಗಿದ್ದರೆ ಮಾತೃ ಆರೋಗ್ಯವಂತ ಎನಿಸಿಕೊಳ್ಳಲು ಸಾಧ್ಯವಿಲ್ಲ. ಆತನ, ಶಾರೀರಿಕ, ಮಾನಸಿಕ ಸದೃಢತೆ ಯೋಗದ ಪಾತ್ರ ಮಹತ್ತರವಾದುದು. ಮಾನಸಿಕ ಗೊಂದಲ, ಗಲಿಬಿಲಿ, ಒತ್ತಡ ಇತ್ಯಾದಿಗಳಿಗೆಲ್ಲಾ ರಾಮಬಾಣದಂತಿರುವ  ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸುವುದರಿಂದ ಮನಸ್ಸಿನ ಏಕಾಗ್ರತೆ, ಮಾನಸಿಕ ಶಾಂತಿ, ನೆಮ್ಮದಿ ಲಭಿಸುವುದು, ಯೋಗಾಭ್ಯಾಸದ ಕೆಲವು ಪ್ರಭೇದವನ್ನು ಮಕ್ಕಳಲ್ಲಿ ಬೆಳೆಸಿರುವುದರಿಂದ ಕಲಿಕೆಯ ಆಶಯ ಗ್ರಹಣಕ್ಕೆ ಹೆಚ್ಚು ಪ್ರಯೋಜನಕಾರಿಯಾಗುವುದು. ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಎಲ್.ಪಿ ಹಾಗೂ ಯು.ಪಿ ವಿಭಾಗದ ಮಕ್ಕಳಿಗೆ ಪ್ರತ್ಯಪ್ರತ್ಯೇಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

                               ಎಲ್.ಪಿ ತರಗತಿಯ ಮಕ್ಕಳಿಗೆ ಶಿಕ್ಷಕ ಶ್ರಿ ಪದ್ಮನಾಭ ಸರ್ ರವರು ಸರಳ ವ್ಯಾಯಾಮ ಹಾಗೂ ಶ್ರೀಮತಿ ಗೀತಾಂಜಲಿ ಟೀಚರ್ ಸೂರ್ಯ ನಮಸ್ಕಾರ ಹಾಗೂ ಶಿಕ್ಷಕ ಸಚ್ಚಿದಾನಂದ ಸರ್ ರವರು ಪ್ರಾಣಾಯಾಮದ ಕೆಲವು ಪ್ರಭೇಧವನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಪರಿಚಯಿಸಿಕೊಟ್ಟರು. ಯು.ಪಿ ತರಗತಿಗಳಲ್ಲಿ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಯೋಗದ ಮಹತ್ವವನ್ನು ತಿಳಿಸುವುದರೊಂದಿಗೆ, ಸೂರ್ಯ ನಮಸ್ಕಾರ, ಪ್ರಾಣಾಯಾಮವನ್ನು ತಿಳಿಸಿಕೊಟ್ಟರು.









                          ಶಾಲಾ ಮಕ್ಕಳಿಗೆ ಕೊಡೆ ವಿತರಣೆ

ನಮ್ಮಶಾಲೆಯಲ್ಲಿ ತಾರೀಕು ೨೦.೦೬.೨೦೧೬ ರಂದು ೧ನೇ ತರಗತಿಯ ಮಕ್ಕಳಿಗೆ ಕೇರಳ ಗ್ರಾಮೀಣ ಬ್ಯಾಂಕಿನ ವತಿಂದ ವ್ಯವಸ್ಥಾಪಕರಾದ ಶಿವರಾಮ್ ಇವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪಿ.ಟಿ.ಎ ಯ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಹಾಗೂ ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಇವರು ಮಕ್ಕಳಿಗೆ ಕೊಡೆಯನ್ನು ವಿತರಿಸಿದರು. ಬ್ಯಾಂಕಿನ ಉದ್ಯೋಗಿ ಅಶ್ವೀನ್ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ ಎಸ್ ಇವರು ವಂದನಾರ್ಪಣೆ ಗೈದರು.