Wednesday, September 7, 2016


                                     ಶಾಲೆಯಲ್ಲಿ ವರಮಹಾಲಕ್ಷ್ಮೀ ಪೂಜೆ
ನಮ್ಮ ಶಾಲೆ ವಠಾರಲ್ಲಿ ಮಾತೃ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು. ಪುರೋಹಿತ ಶ್ರೀಧರ್ ಭಟ್ ಸಜಂಗದ್ದೆಯವರ ನೇತೃತ್ವದಲ್ಲಿ ವಿನಯ ನಾಗರಾಜ್ ಕೋಟೆ ಇವರು ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರು. ಸುಮಂಗಲೆಯವರು ಲಲಿತಾ ಸಹಸ್ರ ನಾಮವನ್ನು ಪಾರಾಯಣ ಮಾಡಿದರು. ಸತ್ಯ ನಾರಾಯಣ ಪ್ರೌಢ ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಿ ಕೆ.ವೈ ಇವರು ಪೂಜಾ ಮಹತ್ವದ ಬಗ್ಗೆ ತಿಳಿಸಿದರು. ಅವರ ಮಾತಿನ ಶೈಲಿ ಭಕ್ತಾದಿಗಳನ್ನು ವಿಸ್ಮಿತರನ್ನಾಗಿಸಿತು. 
ಈ ಸಂದರ್ಭದಲ್ಲಿ ಶಾಲೆಯಲ್ಲಿ ಉಚಿತವಾಗಿ ಹೊಲಿಗೆ ಹಾಗೂ ತರಬೇತಿ ನೀಡುವ ಶ್ರೀಮತಿ ಅನುರೂಪಾ ಕೆದಂಬಾಯಿಮೂಲೆ ಹಾಗೂ ಶ್ರೀಮತಿ ನಯನ ಬಳಕ್ಕ. ಅದೇ ರೀತಿ ವೃತ್ತಿ ಪರಿಚಯ ತರಗತಿಯನ್ನು ಮಕ್ಕಳಿಗೆ ನಡೆಸುವ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಸ್ವರ್ಗ ಇವರನ್ನು ಮಾತೃ ಸಂಘದ ವತಿಯಿಂದ ಗೌರವಿಸಲಾಯಿತು. ಸುಮಾರು ೭೦೦ ಪೂಜೆಗಳು ನೊಂದಾವಣೆಗೊಂಡಿದ್ದು ೨೦೦ ಮಂದಿ ಭಕ್ತಾದಿಗಳು ಪೂಜೆಯಲ್ಲಿ ಭಾಗಿಗಳಾಗಿದ್ದರು. ಕೊನೆಯಲ್ಲಿ ನೆರೆದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕಿ ಶ್ರೀಮತಿ ಗೀತಾಕುಮಾರಿ .ಬಿ ಯವರು ಕಾರ್ಯಕ್ರಮ ನಿರೂಪಿಸಿದರು.




No comments:

Post a Comment