Wednesday, September 7, 2016


                                    ಶಾಲಾ ಮಕ್ಕಳ ದಂಡು ರಕ್ಷಿತಾರಣ್ಯದಲ್ಲಿ

ನಮ್ಮ ಶಾಲೆಯಲ್ಲಿ ಜುಲೈ ಮೊದಲ ವಾರ ವನಮಹೋತ್ಸವದ ಅಂಗವಾಗಿ ಶಾಲಾ ಸಮೀಪದ ವಾಣೀನಗರದ ರಕ್ಷಿತಾರಣ್ಯಕ್ಕೆ ಬಯಲು ಪ್ರವಾಸವನ್ನು ಕೈಗೊಳ್ಳಲಾಯಿತು. ವನಮಹೋತ್ಸವದ ಆಚರಣೆಯ ಧ್ಯೇಯ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ರವರು ತಿಳಿಸಿದರು. ಕಾಡಿನ ಈ ಯಾನದಿಂದ ಅಲ್ಲಲ್ಲಿ ಹರಿಯುವ ನೀರ ಝರಿಗಳು, ಕಾಡು ಹಣ್ಣುಗಳಾದ ಕುಂಟಲಹಣ್ಣು ಚೂರಿಕಾಯಿ, ಚಾಕಟೆ ಕಾಯಿಗಳ ರುಚಿ, ಆಕಾಶದೆತ್ತರ ಭೀಮಗಾತ್ರದಲ್ಲಿರುವ ಮರಗಳು, ವಿಶೇಷ ರೀತಿಯ ಬಳ್ಳಿ, ನಾನಾ ವರ್ಗ ಮರಗಳ ಪರಿಚಯ, ಔಷದೀಯ ಸಸ್ಯ, ಹಾಸಿಗೆಯಂತೆ ಹಾಸಿರುವ ಗಾಳಿ ಮರದ ಎಲೆಗಳು,ಓಸಿಯಾಗಿ ಸಿಗುವ ಎಸಿ ಅನುಭವ ನೀಡುವ ಹವಾಮಾನದ ಪ್ರತ್ಯಕ್ಷ ಅನುಭವವನ್ನು ಪಡೆಯುವಂತಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ನಮ್ಮ ಶಾಲಾ ರಕ್ಷಕ ಬಳಗದವರಾದ ಶ್ರೀ ಕೃಷ್ಣ ನಾಯ್ಕ ಹಾಗೂ ಶ್ರೀ  ಲಕ್ಷ್ಮಿ ಪ್ರೀಯ ಸರಳಾಯ ಇವರು ನಮಗೆ ಸಾಥ್ ನೀಡಿದರು. ಶಾಲಾ ಎಲ್ಲಾ ಮಕ್ಕಳು ಕಾಡಿನ ಯಾನದ ಸವಿಯನ್ನಿತ್ತರು. 





No comments:

Post a Comment