Monday, December 22, 2014


ಚಿನ್ಮಯ ವಿದ್ಯಾಲಯ ಕಾಸರಗೋಡುನಲ್ಲಿ ನಡೆದ ಜಿಲ್ಲಾಮಟ್ಟದ ಭಗವದ್ಗೀತಾ ಕಂಠಪಾಠಸ್ಪರ್ಧೆಯಲ್ಲಿ ಎ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಎರ್ನಾಕುಲಂನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲಾ ೧ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರಣೀತಾ ಎಂ.ಎಸ್. 

Thursday, December 18, 2014



ಮೆಟ್ರಿಕ್  ಡೇ -''ಭಾರ ''ಚಟುವಟಿಕೆ 



ಪ್ರಾತ್ಯಕ್ಷಿಕ  ಅನುಭವದೊಂದಿಗೆ ಸ್ವತಹ ಮಾಡಿ ತಿಳಿಯುವ ಮಕ್ಕಳು 

Tuesday, December 16, 2014



ಮುದ ನೀಡಿದ ಶಾಲಾ ಪ್ರವಾಸ



ಸ್ವರ್ಗ:ದ.5.ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ದಶಂಬರ್ 5ರಂದು ಶೈಕ್ಷಣಿಕ ಪ್ರವಾಸ ಕೈಗೊಂಡರು. ಸುಮಾರು76ವಿದ್ಯಾರ್ಥಿಗಳು 40ಜನ ಪೋಷಕರು 10ಮಂದಿ ಶಿಕ್ಷಕರೊಂದಿಗೆ  ಕಲ್ಲಡ್ಕದ ನರಹರಿ ಪರ್ವತ,ಬಜಪೆ ವಿಮಾನ ನಿಲ್ದಾಣ,ಪಿಲಿಕುಳ ನಿಸರ್ಗಧಾಮ ಹಾಗೂ ಸಮುದ್ರ ಕಿನಾರೆಯಲ್ಲಿ ಮನಬಿಚ್ಚಿ ಸಂಭ್ರಮಿಸಿದರು. ದೇಶ ಸುತ್ತು, ಕೋಶ ಓದು ಎಂಬ ಜ್ಞಾನಾರ್ಜನೆಯನ್ನು ಸಾರುವ ಉಕ್ತಿಗೆ ಬೆಂಬಲ ನೀಡಿ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಮಕ್ಕಳ ಪೋಷಕರಲ್ಲಿ ಬಹುಪಾಲು ಮಹಿಳೆಯರೇ ಪಾಲುಗೊಂಡುದರಿಂದ ದೈನಂದಿನ ಗೃಹಕೃತ್ಯಗಳಲ್ಲಿ ತೊಡಗಿದ್ದವರಿಗೆ ಮೈಮನವನ್ನು ಪ್ರಕೃತಿಯಲ್ಲಿ ತೆರೆದಿರಿಸಿ ಸಂತಸ ಪಡಲು ಸಾಧ್ಯವಾಯಿತು. ಪಿ.ಟಿ.ಎ.ಅಧ್ಯಕ್ಷ ಶ್ರೀಲಕ್ಷ್ಮೀಪ್ರಿಯ ಶರಳಾಯ ,ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಹಾಗೂ ಮುಖ್ಯೋಪಾಧ್ಯಾಯ ಪಿ. ಶಿವರಾಮ್ ಭಟ್,ಸಹ ಶಿಕ್ಷಕರಾದ ಕೆ.ಶಿವರಾಮ ಭಟ್,ಬಿ, ಗೀತಾಕುಮಾರಿ,ಎಂ.ಬಿ.ಗೀತಾಂಜಲಿ,ಪದ್ಮನಾಭ.ಆರ್. ,ಸಚ್ಚಿದಾನಂದ.ಎಸ್, ಮಿಥುನ್.ವಿ.ಆರ್.ಮತ್ತು ಧನ್ಯಸುಧೀರ್ ನೇತೃತ್ವ ನೀಡಿದರು.



ಕರ್ಮಣ್ಯೇವಾಧಿ ಕಾರಸ್ತೇ........
ಸ್ವರ್ಗ ಡಿ.೧೫ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆ ಸ್ವರ್ಗದ ಪರಿಸರ  ಕ್ಲಬ್‌ನ ನೇತೃತ್ವದಲ್ಲಿ ಶಾಲಾ ಕೈತೋಟ ಹಾಗೂ ಬಾಳೆತೋಟದ ಬೆಳವಣಿಗೆ ನಡೆಯುತ್ತಿದೆ.ವಿದ್ಯಾರ್ಥಿಗಳಲ್ಲಿ ಕೃಷಿ ಆಭಿರುಚಿಯನ್ನು ಮತ್ತು ಪರಿಸರ ಸ್ನೇಹವನ್ನು ಬೆಳೆಸಲು ಪರಿಸರ ಕ್ಲಬ್‌ನ ಸದಸ್ಯರು ನಿರಂತರ ಕಾರ್ಯವೆಸಗುತ್ತಿರುವುದು ಪ್ರಶಂಸನೀಯ. ತಾವು ತಮ್ಮ ಬಾಳೆತೋಟದಲ್ಲಿ ಬೆಳೆಸಿದ ನೇಂದ್ರ ಬಾಳೆಕಾಯಿಯನ್ನು ನಿರಂತರ ಗಮನಿಸಿ ಅದನ್ನು ಮಾಗುವ ವರೇಗೆ ಕಾದು ಶಾಲಾ ಪೋಷಕಾಂಶ ವಿತರಣಾ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಹಂಚಿತಿನ್ನಲು ಸಾಧ್ಯವಾದುದು ಮಕ್ಕಳ ನಿಸ್ವಾರ್ಥ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.ವಿದ್ಯಾರ್ಥಿಗಳ ಕೃಷಿಕೆಲಸಗಳಿಗೆ ಶಿಕ್ಷಕ ವೆಂಕಟ ವಿದ್ಯಾಸಾಗರ್,ಸಹಾಯಕ ರಾಧಾಕೃಷ್ಣ.ಎಸ್.ಹಾಗೂ ಅಧ್ಯಾಪಕರು ಸಾಂದರ್ಭಿಕ ಸಹಾಯಗಳನ್ನು ನೀಡುತ್ತಿರುವರು.  

Friday, December 12, 2014

ಮನೋಲ್ಲಾಸ ಯಾತ್ರೆ
ಸ್ವರ್ಗ -ನ-22 ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲಾ ಸಾಕ್ಷರ ಯೋಜನೆ ಮತ್ತು ಐ.ಇ.ಡಿ.ಸಿಗೊಳಪಟ್ಟ ವಿದ್ಯಾರ್ಥಿಗಳು ತಮ್ಮನ್ನು ಪ್ರಕೃತಿಯೊಂದಿಗೆ ತೆರೆದುಕೊಳ್ಳುವಂತೆ ಮಾಡಲು ಮನೋಲ್ಲಾಸ ಪ್ರವಾಸ ಮಾಡಿದರು. ಶಾಲೆಯಿಂದ ಈಶ್ವರಮಂಗಲದ ಹನುಮಗಿರಿ,ಅಡೂರು ಬಳವಂತಡ್ಕದ ತೂಗು ಸೇತುವೆ,ಪಯಸ್ವಿನಿ ನದಿ ಹಾಗೂ ಬೇಕಲ ಕೋಟೆ ಮತ್ತು ಸಮುದ್ರ ಕಿನಾರೆಯಲ್ಲಿ ಕುಣಿದು ಕುಪ್ಪಳಿಸಿದರು .ಮಕ್ಕಳೊಂದಿಗೆ ಶಿಕ್ಷಕರಾದ ಪದ್ಮನಾಭ .ಆರ್,ಮಿಥುನ್.ವಿ.ಆರ್,ಶ್ರೀಮತಿ ಗೀತಾಕುಮಾರಿ,ಸಚ್ಚಿದಾನಂದ.ಎಸ್,ಎಸ್.ಎನ್.ವೆಂಕಟವಿದ್ಯಾಸಾಗರ್,ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀಪ್ರಿಯ ಶರಳಾಯರು ನೇತೃತ್ವ ನೀಡಿದ್ದರು.ಇಪ್ಪತೈದು ವಿದ್ಯಾರ್ಥಿಗಳಿದ್ದ ತಂಡ ವಿವಿಧ ರೋಚಕ ಅನುಭವಗಳೊಂದಿಗೆ ತಮ್ಮ ಮನೆಗಳನ್ನು ಸೇರಿದರು.





  


ಬಹುಮುಖ ಪ್ರತಿಭೆ - ಮಂಜರಿ ನವೀನ್,
ಹೆಣ್ಣು ಸಂಸಾರದ ಕಣ್ಣು ಎಂಬಂತೆ ಇಂದು ಹೆಣ್ಣು ಸಮಾಜದ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿರುತ್ತಾಳೆ. ಅಲ್ಲದೆ ಹೆಣ್ಣಿನ ಪ್ರತಿಭೆಯನ್ನು ಇಂದಿನ ಸಮಾಜ ಮುಕ್ತವಾಗಿ ಸ್ವೀಕರಿಸಿದೆ.ಎಲೆ ಮರೆಯ ಕಾಯಿಯಂತೆ ತನ್ನ ಕೌಶಲ್ಯದ ಬಗೆಗೆ ಯಾವುದೇ ಬಿದುವಿನ ವೇಳೆಯಲ್ಲಿ ಹಲವು ರೀತಿಯಕರಕುಶಲ ವಸ್ತುಗಳನ್ನು ಸದ್ದುಗದ್ದಲವಿಲ್ಲದೆ ತಯಾರಿಸುತ್ತಿರುವವರು ಸ್ವರ್ಗದ ಮಂಜರಿನವೀನ್.ಸೌಮ್ಯಸ್ವಭಾವ ಹೊಂದಿದ ಇವರು ಕಸೂತಿ,ಫ್ಯಾಬ್ರಿಕ್ ಪೈಂಟಿಂಗ್, ಕ್ಲೇ ಮಾಡಲಿಂಗ್,ಕಸದಿಂದ ರಸ, ಚಿತ್ರಕಲೆ,ಸಾಹಿತ್ಯಗಳಲ್ಲಿ ತಲ್ಲೀನರು.ನಿರುಪಯುಕ್ತ ವಸ್ತುಗಳಿಂದ ತನ್ನ ಭಾವನೆಗಳನ್ನು ಮೂರ್ತ ರೂಪಕ್ಕೆ ತರುವ ಕಲಾವಿದೆ.ಕವನಗಳ್ನ್ನು ಬರೆಯುವ ಹವ್ಯಾಸ ಹೊಂದಿರುವ ಇಅವರ ಕವನಗಳು ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದಿಂದ ಪ್ರಕಾಶಿಸಿದ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಪ್ರಕಟಗೊಂಡಿವೆ. ಎಸ್.ವಿ.ಎ.ಯು.ಪಿ.ಶಾಲೆ ಸ್ವರ್ಗದ ದಶಮಾನೋತ್ಸವ ಹಾಗೂ ೨೦೧೪ ರಂದು ನವಂಬರ್ ೧೪ ರಂದು ಏರ್ಪಡಿಸಿದ ವಸ್ತು ಪ್ರದರ್ಶನದಲ್ಲಿ ಅವರ ಕೈ ಚಳಕದಿಂದ ಹೊರಬಂದ ವಸ್ತುಗಳನ್ನು ಕಂಡು ಅನೇಕರು ಮೆಚ್ಚಿಕೊಂಡಿದ್ದಾರೆ.
ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಾತೃಸಂಗಮದ ಅಧ್ಯಕ್ಷತೆಯಾಗಿರುವರು ಇವರು ಶಾಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ,ತನ್ನದೇ ಅದ ಸಲಹೆಗಳನ್ನು ಮಕ್ಕಳ ಚಟುವಟಿಕೆಗಳಿಗೆ ನೀಡುತ್ತಾ ಇರುವವರು.ಕಳೆದ ೨-೩ ವರ್ಷಗಳಿಂದ ಶಾಲಾ ವಿಧ್ಯಾರ್ಥಿಗಳಿಗೆ ವೃತಿ ಪರಿಚಯದ ಮೇಳದ ಸ್ವರ್ಧೆಗಳ ವಿವಿಧ ಪ್ರಕಾರಗಳಿಗೆ ನಿರಂತರ ತರಬೇತಿಯನ್ನು ನೀಡುತಿದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉತ್ತಮ ರೀತಿಯಲ್ಲಿ ತರಗತಿಗಳನ್ನು ನಡೆಸಿ ಕೊಡುತ್ತಿದ್ದಾರೆ.ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುವಲ್ ಆರ್ಟ್ಸ್(ಸಿ.ಎ.ವಿ.ಎ)ಕಾಲೇಜಿನಲ್ಲಿ ೨ವರ್ಷಗಳ ಪೌಂಡೇಶನ್ ತರಬೇತಿಯನ್ನು ಮುಗಿಸಿದ್ದು,ಆರ್ಥಿಕ ಅಡಚಣೆಯಿಂದಾಗಿ ಮುಂದಿನ ೩ ವರ್ಷಗಳ ಪದವಿಯನ್ನು ಪೂರೈಸಲು ಸಾಧ್ಯವಾಗದಿದ್ದರೂ ಕಲೆ ಹಾಗೂ ಪುಸ್ತಕಗಳ ಮೇಲಿರುವ ಅವರ ಆಸಕ್ತಿ ಕರಗಲಾರದ್ದು.ಕಲೆಗಳನ್ನು ಕರಗತ ಮಾಡಿಕೊಳ್ಳುವ ಶಕ್ತಿ ಕೆಲವರಿಗಷ್ಟೇ ಬರುತ್ತದೆ. ಆದರೆ ಹಲವು ವಲಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು ಅಪರೂಪಕ್ಕೆ ಒಬ್ಬರು. ಇದಕ್ಕೊಂದು ಸ್ವಷ್ಟ ನಿದರ್ಶನ ಎಂಬಂತೆ ಕರಕುಶಲ ವಸ್ತುಗಳನ್ನು ಹಾಗೂ ಬೀಡ್ಸ್‌ವರ್ಕ್,ಕುಂದನ್‌ವರ್ಕ್,ಫ್ಯಾಬ್ರಿಕ್ ಪೈಂಟ್‌ಗಳನ್ನುಸೀರೆ-ಬ್ಲೌಸ್,ಚೂಡಿದಾರ,ಲಂಗ-ಬ್ಲೌಸ್,ಟೀಶರ್ಟ್,ಬೆಡ್‌ದಿಂಬಿನ ಕವರುಗಳ ಮೇಲೆ ಗ್ರಾಹಕರ ಬೇಡಿಕೆಗನುಸಾರವಾಗಿ ಮಾಡಿಕೊಡುತ್ತಾರೆ. ಆಸಕ್ತರು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ವಿಶೃಂಖಲಾ ಡಿಸೈನರ್ ಫ್ಯಾಬ್ಸ್ -09539200723,08971103498

Wednesday, December 10, 2014

ತರಕಾರಿ ತೋಟದ ಸುಂದರ ಸೊಬಗು 




ಶಾಲಾ ಮಕ್ಕಳ ತರಕಾರಿ ತೋಟ  ಫಸಲು ನಿರೀಕ್ಷೆಯಲ್ಲಿ ನಿತ್ಯ  ತರಕಾರಿ ತೋಟದ ಚಟುವಟಿಕೆಯಲ್ಲಿ ಮಕ್ಕಳು 


                                                         



Tuesday, December 9, 2014


                     I Standard Demonstration Class  by Karmaly
                                         BRC Trainer   Kumbla
            SRG Meeting - Giving suggestion to our staff by Karmaly    
                                  BRC Trainer Kumbla
  Observes class related to OSS on sight support by Carmaly 
                    BRC Trainer Kumbla on 09.12.2012

ಇತ್ತೀಚೆಗೆ ಬೆಳ್ಳೂರಿನ ಜಿ.ಎಚ್.ಎಸ್.ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ- ಸಂಸ್ಕೃತೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಎಗ್ರೇಡುಗಳನ್ನು ಪಡೆದಿರುವ ಪ್ರಣಮ್ಯಾ,ಮಧುರಾ,ಪ್ರದ್ಯೋತ್,ಅನೂಪ್ 




Monday, December 8, 2014


ಇತ್ತೀಚೆಗೆ ಮಾನ್ಯದ ಜೆ.ಎ.ಎಸ್.ಬಿ.ಶಾಲೆಯಲ್ಲಿ ಜರಗಿದ ಉಪ ಜಿಲ್ಲಾ ಮಟ್ಟದ ವಿದ್ಯಾರಂಗ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲಾ ಮಕ್ಕಳಾದ ವರೇಣ್ಯ.ಬಿ ಕನ್ನಡ ಪ್ರಬಂಧ ರಚನೆ- ಪ್ರಥಮ ಸ್ಥಾನ. ಲಿಖಿತಾ-ಕನ್ನಡ ಆಸ್ವಾದನಾ ಟಿಪ್ಪಣಿ-ಪ್ರಥಮ ಸ್ಥಾನ.ಶ್ರುತಿ.ಕೆ ಮತ್ತು ಯಜ್ಞೇಶ. ರೈ.ಆರ್.  ಎಲ್.ಪಿ.ವಿಭಾಗದ ಒಗಟು- ಪ್ರಥಮ ಸ್ಥಾನ. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಹಾಗೂ ವಿದ್ಯಾರಂಗಂ ಸಂಚಾಲಕಿ ಶ್ರೀಮತಿ ಗೀತಾಕುಮಾರಿ ಯರೊಂದಿಗೆ ವಿಜೇತ ಮಕ್ಕಳು.


ಇತೀಚೆಗೆ ಬೆಳ್ಳೂರಿನ ಜಿ.ಎಚ್.ಎಸ್. ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಎಲ್.ಪಿ. ವಿಭಾಗದ ಸಂಘ ಗಾನದಲ್ಲಿ ಪ್ರಥಮ ಸ್ಥಾನಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲೆಯಅನನ್ಯಾ.ಎಸ್, ಯಜ್ಞೇಶ್.  ರೈ, ಶ್ರುತಿ.ಕೆ, ಸಂವೇದ.ಬಿ.ಅಕ್ಷಯ್.ವೈ, ದೀಪ್ತಿ .ಬಿ,ಶ್ರೀಹರ್ಷ ಎನ್.ಎಲ್.  ತಂಡದೂಂದಿಗೆ ಮುಖ್ಯೋಪಾಧ್ಯಾಯ ಶ್ರೀ ಶಿವ್‌ರಾಮ್ ಭಟ್ ಪಿ.ಮತ್ತು ಶ್ರೀಮತಿ ಗೀತಾಕುಮಾರಿ ಯರೊಂದಿಗೆ ವಿಜೇತ ಮಕ್ಕಳು.


.
ಇತ್ತೀಚೆಗೆ ಬೆಳ್ಳೂರಿನ ಜಿ.ಎಚ್.ಎಸ್. ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಯು.ಪಿ.   ಸಂಸ್ಕೃತ ವಿಭಾಗದಲ್ಲಿ 86 ಅಂಕಗಳೂಂದಿಗೆ ಚಾಂಪಿಯನ್ ಶಿಪ್ ಟ್ರೋಫಿಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯ ತಂಡ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಿವರಾಮ ಭಟ್ ಹಾಗೂ ಸಂಸ್ಕೃತ ಶಿಕ್ಷಕ ಶ್ರೀ ಶಿವರಾಮ್ ಭಟ್.ಕೆ ಯವರೊಂದಿಗೆ.









                                                          ರಕ್ಷಕರ ಸಮ್ಮಿಲನ