Wednesday, August 22, 2012

          ವಾಯನ ವಾರಾಚರಣೆ  ಜೂನ್ 19

              ಒಬ್ಬ ವ್ಯಕ್ತಿಯಿಂದ ಚುಟುಕು ರಚನೆಯಾಗಬೇಕಾದರೆ ಆತ ಹಲವು ಗ್ರಂಥಗಳನ್ನು ಓದಿ ಮಾಹಿತಿ ಸಂಗ್ರಹ ಮಾಡಬೇಕು.ಇದಕ್ಕಾಗಿ ನಾವು ಬಹಳಷ್ಟು ಓದಬೇಕು,ಎಂಬ ಹಿತವಚನದೊಂದಿಗೆ ಚುಟುಕು ಮತ್ತು ಹಾಸ್ಯ ಕಥೆಗಾರ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ರವರು ನಮ್ಮ ಶಾಲೆಯಲ್ಲಿ ವಾಯನ ವಾರವನ್ನು ಉದ್ಘಾಟಿಸಿದರು.

         ಈ ಸಂದರ್ಭದಲ್ಲಿ ಅಭಿನಯ ಗೀತೆಗಳನ್ನು ಭಾವನಾತ್ಮಕವಾಗಿ ಹಾಡಿ ಮಕ್ಕಳನ್ನು ಸಾಹಿತ್ಯ ಲೋಕದಲ್ಲಿ ತೇಲಾಡಿಸಿದರು. ಚುಟುಕು ಪೂರ್ತಿಗೊಳಿಸುವುದು, ಜಾಣ್ಮೆ ಲೆಕ್ಕ,ಪೌರಾಣಿಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಉಷಾ,ಸುಕೇಶ್,ಅನೂಪ್, ಸುಬ್ರಹ್ಮಣ್ಯ ಮತ್ತು ರಶ್ಮಿಸಾಹಿತಿಯಿಂದ ಬಹುಮಾನಗಳನ್ನುಗಳಿಸಿದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ,ಪಿ.ಟಿ.ಎ ಅಧ್ಯಕ್ಷ ವಿವೇಕಾನಂದ ಬಿ.ಕೆ ಲೇಖಕರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
                  ಸಮಾರೋಪ ಸಮಾರಂಭ
       ಶಾಲಾ ಅಧ್ಯಾಪಕರು ಅಸೆಂಬ್ಲಿಯಲ್ಲಿ ನಡೆಸಿದ ಪುಸ್ತಕ ವಿಮರ್ಶೆಯಿಂದ ಪ್ರೇರಿತರಾದ ಮಕ್ಕಳುತಾವು ಓದಿದ ಪುಸ್ತಕಗಳ ಟಿಪ್ಪಣಿ ಬರೆದು ಹೌಸ್ ಗಳಲ್ಲಿ ತಯಾರಾದ ಸಂಚಿಕೆಯನ್ನುಸಮಾರೋಪ ಸಮಾರಂಭದ ಅತಿಥಿಗಳಾದ ನೆರೆಯ ಪಡ್ರೆ ಶಾಲೆಯ ಅಧ್ಯಾಪಕ ಹವ್ಯಾಸಿ ಯಕ್ಷ ಗಾನ ಕಲಾವಿದ ,ಸಾಹಿತಿ ಶ್ರೀ ಬಟ್ಯ ಮಾಸ್ತರ್ ರವರು ಬಿಡುಗಡೆಗೊಳಿಸಿದರು. ಮಕ್ಕಳು ತಮ್ಮ ರಚನೆಗಳನ್ನು ಪ್ರಸ್ತುತಪಡಿಸಿದಾಗ,ಓದು ನಿರಂತರವಾಗಿದ್ದು ಜೀವನದಲ್ಲಿ ಅಳವಡಿಸುವಂತಿರಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
         ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಮಾಸ್ತರ್ ಚೇತನ್ ಪುಸ್ತಕವನ್ನಿತ್ತು ಸ್ವಾಗತಿಸಿದರು.ಮಾಸ್ತರ್ ಸುಬ್ರಹ್ಮಣ್ಯ ವಂದಿಸಿ, ಕು.ರಶ್ಮಿ ಕಾರ್ಯಕ್ರಮ ನಿರೂಪಣೆಗೈದರು.









       ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜೂನ್ 26
      ಈ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ತಾರೀಕು 26 -06-2012 ನೇ ಮಂಗಳವಾರ  ಅಪರಾಹ್ಣ  ಗಂಟೆ    3-00ರಿಂದ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಗತ ವರ್ಷದ ವರದಿಯನ್ನು ಮಂಡಿಸಿದರು. ಶಿಕ್ಷಕ ಪದ್ಮನಾಭರು ಲೆಕ್ಕಪತ್ರ ಮಂಡಿಸಿದರು.ಹೊಸದಾಗಿ ಸ್ಕೂಲ್ ಮೇನೇಜ್ ಮೆಂಟ್ ಕಮಿಟಿಯ ರೂಪೀಕರಣವಾಯಿತು.ಈ ಶೈಕ್ಷಣಿಕ ವರ್ಷದಲ್ಲಿ ನಾವು ಹಮ್ಮಿಕೊಳ್ಳುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ.ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯ ಶ್ರೀ ರವಿ.ಕೆ. ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆ ಉಪಸ್ಥಿತರಿದ್ದರು.ಶಿಕ್ಷಕ ಪಿ.ಶಿವರಾಮ ಭಟ್ಟರು ಸ್ವಾಗತಿಸಿ ಕೆ.ಶಿವರಾಮ ಭಟ್ಟರು ವಂದನಾರ್ಪಣೆಗೈದರು. ಸುಮಾರು100ಕ್ಕೂ ಅಧಿಕ ಹೆತ್ತವರು ಸಭೆಯಲ್ಲಿ ಭಾಗವಹಿಸಿದರು.

               ಮಾದಕವಸ್ತು ವಿರೋಧಿ ದಿನ
                          ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಯು.ಪಿ ತರಗತಿಯ ಮಕ್ಕಳು ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮವನ್ನು ವಿವಿಧ ಪ್ರಹಸನಗಳ ಮೂಲಕ ಪ್ರಸ್ತುತಪಡಿಸಿದರು. ಸ್ವರಚಿತ ಕವನಗಳನ್ನು ವಾಚಿಸಿದರು.ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಉಂಟಾಗುವಂತೆ ಮಾಡಿದರು.

                          ಜೂನ್ -5 ವಿಶ್ವ ಪರಿಸರ ದಿನ.
         ನಮ್ಮ ಪರಿಸರವು ಎಷ್ಟು ಸುಂದರ! ಭೂಮಿ ತಾಯಿಯ ಒಡಲಲ್ಲಿ ಹುಟ್ಟಿ ಬೆಳೆದ ಗುಡ್ಡ, ಬೆಟ್ಟ, ನದಿ, ಸಾಗರಗಳು ನೋಡಲೆಷ್ಟು ಚೆಂದ. ಫಲ,ಪುಷ್ಪ, ಹಚ್ಚಹಸಿರಿನ ಎಲೆಗಳಿಂದ ಕಂಗೊಳಿಸುತ್ತಿದ್ದ ತಾಯಿ ಇದೀಗ ಹರಿದ ಸೀರೆ ಮುರಿದ ಕಿರೀಟ ತೊಟ್ಟಿದ್ದಾಳೆ, ಇದನ್ನಾರು ಗಮನಿಸುತ್ತಿಲ್ಲ.ಭೂಮಿ ತಾಯ ಒಡಲಲ್ಲಿ ಹುಟ್ಟಿ ಬೆಳೆದ ಮಕ್ಕಳು ನಾವು. ಅವಳ ಬಗ್ಗೆ ಸ್ವಲ್ಪವಾದರೂ ಚಿಂತಿಸ ಬೇಡವೇ?. ಜೂನ್ ೫ ವಿಶ್ವ ಪರಿಸರ ದಿನ. ಇಂದು ಭೂ ತಾಯಿಯನ್ನು  ನೆನಪಿಸುವ ದಿನ. ಇದು ಆ ದಿನಕ್ಕೆ ಮಾತ್ರ ಸೀಮಿತವಾಗಿರದೆ ಜೀವನ  ಪರ್ಯಾಂತ ಶೋಧಿಸುವ ಕಾರ್ಯವಾಗಬೇಕು.
ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ 

ಸಂರಕ್ಷಣೆಯ ಕುರಿತಾಗಿ ಹಾಡು, ಅಣಕು ಪ್ರದರ್ಶನ ಪ್ರಬಂಧ ಮಂಡನೆ ಮೊದಲಾದವುಗಳನ್ನು ತರಗತಿ ವಾರಾಗಿ ಮಕ್ಕಳು ಪ್ರದರ್ಶನ ನೀಡಿದರು. 

ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್ ರವರು ಮಕ್ಕಳಿಗೆ ಗಿಡಗಳನ್ನು ವಿತರಿಸಿ, ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. 
                               ಪ್ರವೇಶೋತ್ಸವ 2012-2013
         ನೂತನ ಶೈಕ್ಷಣಿಕ ವರ್ಶದಲ್ಲಿ  ಪ್ರವೇಶೋತ್ಸವವು ವಿಘ್ನ ನಿವಾರಕನಾದ ಗಣಪತಿ ಹವನದೊಂದಿಗೆ ವಿಜ್ರುಂಭಣೆಯಿಂದ ಜರಗಿತು. ಸ್ವಾಮಿ ವಿವೇಕಾನಂದರ ವೇಷಧಾರಿಯ ನೇತೃತ್ವದಲ್ಲಿ ಬೊಂಬೆ ಕುಣಿತ,ಜೋಕರ್ ಹಾಗೂ ಇನ್ನಿತರ ವೇಷಗಳ ಭವ್ಯ ಮೆರವಣಿಗೆಯಲ್ಲಿ ನವಾಗತರನ್ನು ಶಾಲೆಗೆ ಕರೆತರಲಾಯಿತು.ಬಳಿಕ ಶಿಕ್ಷಕಿಯರಾದ ಶ್ರೀಮತಿ ಗೀತಾ ಮತ್ತು ಗೀತಾಂಜಲಿಯವರು ಆರತಿ ಬೆಳಗಿ ಪುಟಾಣಿ ಮಕ್ಕಳನ್ನು ಸ್ವಾಗತಿಸಲಾಯಿತು.








ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿ ಕ್ಷಕ ಸಂಘದ ಅಧ್ಯಕ್ಷ ಶ್ರೀವಿವೇಕಾನಂದ ಬಿ.ಕೆ.ಯವರು ವಹಿಸಿದ್ದರು.ವಾರ್ಡ್ ಸದಸ್ಯ ಶ್ರೀ ರವಿ.ಕೆ.ಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು.ಶಾಲಾ ವ್ಯವಸ್ಥಾಪಕ ಶ್ರೀಹೃಷಿಕೇಶ ವಿ.ಎಸ್.ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂತನ ಮಕ್ಕಳಿಗೆ ಬ್ಯಾಡ್ಜ್ ,ಬ್ಯಾಗ್,ಪುಸ್ತಕ, ಹಾಗೂ ವಿದ್ಯಾಭಿಮಾನಿ ಶಿರಂತಡ್ಕ ಗಣಪತಿ ಭಟ್ ರವರ ವತಿಯಿಂದ ಸ್ಲೇಟು ಮತ್ತು ಬಳಪ ವಿತರಿಸಲಾಯಿತು.ಪಿ.ಟಿ.ಎ.ಅಧ್ಯ ಕ್ಷರ ವತಿಯಿಂದ ಸಿಹಿ ತಿಂಡಿ ವಿತರಣೆಯಾಯಿತು.ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ವಂದಿಸಿದರು.ಹೆತ್ತವರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂತು.
   

 

SCHOOL ACTIVITIES 2012 - 13

 ಹಿರಿಮೆ 2011-2012
              ತಾರೀಕು 24-03-2012ನೇ ಶನಿವಾರದಂದು ಎಸ್.ಎನ್.ಎಲ್.ಪಿ. ಪೆರ್ಲದಲ್ಲಿ ಜರಗಿದಎಣ್ಮಕಜೆ ಪಂಚಾಯತು ವ್ಯಾಪ್ತಿಯ 17 ಶಾಲೆಗಳ ಹಿರಿಮೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ "ಸ್ತ್ರೀಸಬಲೀಕರಣ" ಎಂಬ ಮಂಡಲಕ್ಕೆ ಸಂಬಂಧಿಸಿ ಈ ಶೈ ಕ್ಷಣಿಕ ವ ರ್ಷದಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ಉತ್ತಮ ಪ್ರಬಂಧವನ್ನು ಮಂಡಿಸಿದ್ದು ,ಪಂಚಾಯತು ಮಟ್ಟದಲ್ಲಿ ಅತ್ತ್ಯುತ್ತಮ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ.ಶಾಲೆಯ ಎಲ್ಲಾ ಅಧ್ಯಾಪಕರು ಮತ್ತು 11 ಮಂದಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಮಂಡಲಕ್ಕೆ ಸಂಬಂಧಿಸಿ ಮಾಡಿದ ಚಟುವಟಿಕೆಗಳ ಸ್ಲೈಡ್ ಶೋ,ಸಾಬೂನು ತಯಾರಿ,ಮುತ್ತು ಮಾಲೆ,ಹೊಲಿಗೆ ತರಬೇತಿಯ ಉತ್ಪನ್ನಗಳು,ಶಾಲಾ ತರಕಾರಿ ತೋಟದಲ್ಲಿ ಬೆಳೆದ ಬದನೆ,ತೊಂಡೆ,ಬಸಳೆ,ಪಡುವಲಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಯಿತು.ತೀರ್ಪುಗಾರರಾಗಿ ಸಹಕರಿಸಿದ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಆಯಿಶಾ ಪೆರ್ಲ,ಪಂಚಾಯತು ಸದಸ್ಯೆ ಶ್ರೀಮತಿ ಶಾರದಾ ಮೇಡಂ ಮತ್ತು ಸಿ.ಆರ್.ಸಿ.ಸೆಕ್ರೆಟರಿ ಶ್ರೀದೇವದಾಸ್ ಕಜಂಪಾಡಿ ಅವರು ಸ್ಪರ್ಧಾತ್ಮಕವಾಗಿ ಜರಗಿದ ಹಿರಿಮೆ ಬಗ್ಗೆ ಅಭಿಪ್ರಾಯಗಳನ್ನು ಪ್ರಕಟಿಸಿದರು.
                    ಶಾಲಾ ಶೈ ಕ್ಷಣಿಕ ಪ್ರವಾಸ ಮಾರ್ಚ್ 09
ತಾರೀಕು 09-03-2012ನೇ ಶುಕ್ರವಾರ ಬೆಳಗ್ಗೆ ನಮ್ಮ ಶಾಲೆಯಿಂದ ನಿಗದಿ ಪಡಿಸಿದ "ಮಹಾಲಕ್ಷ್ಮೀ" ಬಸ್ಸಿನಲ್ಲಿ ಅಧ್ಯಾಪಕರು, ವಿಧ್ಯಾರ್ಥಿಗಳು ಮತ್ತು ಹೆತ್ತವರು ಒಟ್ಟು 98 ಮಂದಿ ಒಂದು ದಿನದ ಶೈ ಕ್ಷಣಿಕ ಪ್ರವಾಸ ಹೊರಟೆವು. 
ಶಾಲಾ ಮುಖ್ಯೋಪಾಧ್ಯಾಯರು ತೆಂಗಿನಕಾಯಿ ಒಡೆಯುವ ಮೂಲಕ ಕಣ್ಣೂರಿನ "ವಿಸ್ಮಯ ಪಾರ್ಕ್"ಪ್ರವಾಸಕ್ಕೆ ಚಾಲನೆಯಿತ್ತರು.
             ಬಸ್ಸಿನಲ್ಲಿ ಹಾಡು,ಕುಣಿತಗಳೊಂದಿಗೆ ಮಜಾ ಮಾಡಿದ ಮಕ್ಕಳು ೮-೩೦ಕ್ಕೆ ನೀಲೇಶ್ವರದಲ್ಲಿ ಬೆಳಗಿನ ಉಪಾಹಾರ ಸ್ವೀಕರಿಸಿದೆವು.10-30ಕ್ಕೆ ಸರಿಯಾಗಿ ನಾವು ಪರಶಿನಕಡವು ಉರಗೋದ್ಯಾನವನ್ನು ಸಂದರ್ಶಿಸಿದೆವು.ಅಲ್ಲಿ ವಿವಿಧ ತರದ ಪ್ರಾಣಿಗಳು,ಪ ಕ್ಷಿಗಳು,ಮತ್ತು ನಾನಾ ವಿಧದ ಉರಗಗಳನ್ನು ನೋಡಿ ಸಂತಸಪಟ್ಟೆವು.
         11-15ರಿಂದ ಸಾಯಂ ಗಂಟೆ 5-೦೦ರ ತನಕ ವಿಸ್ಮಯ ಪಾರ್ಕ್ ನಲ್ಲಿರುವ ಜಾರುಬಂಡಿಗಳು. ಟೂಬುಗಳು,ಮ್ಯೂಸಿಕಲ್ ಫಾಲ್ಸ್,ಫಿಶ್,ಟ್ರೈನ್,ಕಾರ್,ಭೂತ ಬಂಗಲೆ,4ಡಿ ಸಿನೆಮಾ ಇತ್ಯಾದಿ ಸಾಹಸಮಯವಾದ ಆಟಗಳಲ್ಲಿ ಭಾಗವಹಿಸಿ ಖುಷಿಪಟ್ಟೆವು.ಅಧ್ಯಾಪಕರು,ಹೆತ್ತವರು ಮಕ್ಕಳಾಗಿ ಆಡಿದ ಆಕ್ಷಣ ಎಂದಿಗೂ ಮರೆಯಲು ಸಾಧ್ಯವಿಲ್ಲ.

                     ಶಾಲಾ ಮಟ್ಟದ ಸಹವಾಸ ಶಿಬಿರ 'ಸಂಭ್ರಮ' 
   
         ಸರ್ವಶಿಕ್ಷಾ ಅಭಿಯಾನದ ಆಶ್ರಯದಲ್ಲಿ ಶಾಲಾ ಮಟ್ಟದ ದ್ವಿದಿನ ವಾಸ್ಥವ್ಯ ಶಿಬಿರವು ಸ್ವರ್ಗದ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಮಾರ್ಚ್ 2 ಮತ್ತು 3 ರಂದು ಉತ್ತಮವಾಗಿ ಜರಗಿತು.ಎಣ್ಮಕಜೆ ಗ್ರಾಮ ಪಂಚಾಯತಿನ ಸ್ಥಾಯೀ ಸಮಿತಿ ಸದಸ್ಯರಾದ ಶ್ರೀಯುತ ಬಿ.ಎಸ್.ಗಾಂಬೀರ್ ರವರು ದೀಪ ಜ್ವಾಲನೆಯೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಶೀಲ ಸ್ವರ್ಗ ಅಧ್ಯಕ್ಷತೆ ವಹಿಸಿದ್ದರು.ಸ್ಥಳೀಯ ವಾರ್ಡ್ ಸದಸ್ಯ ರವಿ ಕೆ ಅವರು ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ಟರು ಸ್ವಾಗತಿಸಿ,ಶಿಕ್ಷಕ ಸಚ್ಚಿದಾನಂದರು ವಂದಿಸಿದರು.ವಿದ್ಯಾರ್ಥಿನಿ ಕು/ರಶ್ಮಿ ಎಸ್.ಜಿ.ಕಾರ್ಯಕ್ರಮ ನಿರೂಪಿಸಿದಳು.  
       ಸಂದರ್ಶನ-ವಿವರಸಂಗ್ರಹ-ವರದಿ ತಯಾರಿ-ಎಂಬ ಮುಖ್ಯ ಉದ್ದೇಶವನ್ನಿರಿಸಿ ನಡೆಸಿದ ಈ  ಶಿಬಿರದಲ್ಲಿ ಪೆರ್ಲದ ಅನುಪಮ ಗಂಗಾ ಫಾರ್ಮ್ಸ್ ಎಂಬ ಹೈನುಗಾರಿಕಾ ಘಟಕಕ್ಕೆ ಭೇಟಿ ನೀಡಲು ಅಗತ್ಯವಾದ ಪ್ರಶ್ನೆಗಳನ್ನು ಮಕ್ಕಳು ಗುಂಪಿನಲ್ಲಿ ತಯಾರಿಸಿದರು.ಅಲ್ಲಿನ ಹೈಟೆಕ್ ಹಟ್ಟಿಯಲ್ಲಿರುವ 25 ರಾಸುಗಳು,ನೀರು ಕುಡಿಯುವ ವ್ಯವಸ್ಥೆ,ಹಾಲು ಕರೆಯುವ ಮಿಶನುಗಳನ್ನು ಪ್ರತ್ಯಕ್ಷ ನೋಡಿ ಮಾಹಿತಿ ಸಂಗ್ರಹಿಸಿ,ಪ್ರತಿಯೊಂದು ಗುಂಪಿನಿಂದಲೂ ವರದಿ ಮಂಡಿಸಲಾಯಿತು.
ಶಿಕ್ಷಕ ಪದ್ಮನಾಭರ ನೇತೃತ್ವದಲ್ಲಿ ನಿರ್ಮಾಣಗೊಂಡ ಗಾಳಿಪಟವನ್ನು ಸಮೀಪದ ತೂಂಬಡ್ಕ ದಲ್ಲಿ ಎತ್ತರೆತ್ತರಕ್ಕೆ ಹಾರಿಸಿ  ಮಕ್ಕಳು ಸಂಭ್ರಮಿಸಿದರು.

               ತೆಂಗಿನ ಮರ ಹತ್ತುವುದು,ತಲೆ ಕೆಳಗೆ ಮಾಡಿ ನಿಲ್ಲುವುದು,ಹಗ್ಗದಲ್ಲಿ ಮರ ಏರುವುದು,ಏಣಿ ಏರುವುದು ಮುಂತಾದ ಸಾಹಸ ಪ್ರದರ್ಶನಗಳು ಮಕ್ಕಳಲ್ಲಿ  ಸಾಧಿಸಿದರೆ ಸಬಳವನ್ನೂ ನುಂಗಬಹುದುಎಂಬ ಭಾವನೆಯನ್ನು ಮೂಡಿಸಿದವ .
             ರಾತ್ರಿ ನಡೆದ ಶಿಬಿರಾಗ್ನಿಯ  ಎಂ.ಪಿ.ಟಿ.ಎ. ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆ ಅವರು ಉದ್ಘಾಟಿಸಿದರು.ಅಧ್ಯಾಪಕ ಶ್ರೀ ಸಚ್ಚಿದಾನಂದರು ಶಿಬಿರದ ನೇತೃತ್ವ ವಹಿಸಿದ್ದರು.ಯು.ಪಿ. ವಿಭಾಗದ 66 ಮಂದಿ ಮಕ್ಕಳು ಭಾಗವಹಿಸಿದ ಈ ಶಿಬಿರದಲ್ಲಿ ನಡೆದ ಕ್ರೀಡಾ ಚಟುವಟಿಕೆಗಳು ಮಕ್ಕಳ ಬೌದ್ಧಿಕ ವಿಕಾಸಕ್ಕೆ ಕಾರಣವಾಯಿತು.