Wednesday, August 22, 2012

          ವಾಯನ ವಾರಾಚರಣೆ  ಜೂನ್ 19

              ಒಬ್ಬ ವ್ಯಕ್ತಿಯಿಂದ ಚುಟುಕು ರಚನೆಯಾಗಬೇಕಾದರೆ ಆತ ಹಲವು ಗ್ರಂಥಗಳನ್ನು ಓದಿ ಮಾಹಿತಿ ಸಂಗ್ರಹ ಮಾಡಬೇಕು.ಇದಕ್ಕಾಗಿ ನಾವು ಬಹಳಷ್ಟು ಓದಬೇಕು,ಎಂಬ ಹಿತವಚನದೊಂದಿಗೆ ಚುಟುಕು ಮತ್ತು ಹಾಸ್ಯ ಕಥೆಗಾರ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ರವರು ನಮ್ಮ ಶಾಲೆಯಲ್ಲಿ ವಾಯನ ವಾರವನ್ನು ಉದ್ಘಾಟಿಸಿದರು.

         ಈ ಸಂದರ್ಭದಲ್ಲಿ ಅಭಿನಯ ಗೀತೆಗಳನ್ನು ಭಾವನಾತ್ಮಕವಾಗಿ ಹಾಡಿ ಮಕ್ಕಳನ್ನು ಸಾಹಿತ್ಯ ಲೋಕದಲ್ಲಿ ತೇಲಾಡಿಸಿದರು. ಚುಟುಕು ಪೂರ್ತಿಗೊಳಿಸುವುದು, ಜಾಣ್ಮೆ ಲೆಕ್ಕ,ಪೌರಾಣಿಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಉಷಾ,ಸುಕೇಶ್,ಅನೂಪ್, ಸುಬ್ರಹ್ಮಣ್ಯ ಮತ್ತು ರಶ್ಮಿಸಾಹಿತಿಯಿಂದ ಬಹುಮಾನಗಳನ್ನುಗಳಿಸಿದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ,ಪಿ.ಟಿ.ಎ ಅಧ್ಯಕ್ಷ ವಿವೇಕಾನಂದ ಬಿ.ಕೆ ಲೇಖಕರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
                  ಸಮಾರೋಪ ಸಮಾರಂಭ
       ಶಾಲಾ ಅಧ್ಯಾಪಕರು ಅಸೆಂಬ್ಲಿಯಲ್ಲಿ ನಡೆಸಿದ ಪುಸ್ತಕ ವಿಮರ್ಶೆಯಿಂದ ಪ್ರೇರಿತರಾದ ಮಕ್ಕಳುತಾವು ಓದಿದ ಪುಸ್ತಕಗಳ ಟಿಪ್ಪಣಿ ಬರೆದು ಹೌಸ್ ಗಳಲ್ಲಿ ತಯಾರಾದ ಸಂಚಿಕೆಯನ್ನುಸಮಾರೋಪ ಸಮಾರಂಭದ ಅತಿಥಿಗಳಾದ ನೆರೆಯ ಪಡ್ರೆ ಶಾಲೆಯ ಅಧ್ಯಾಪಕ ಹವ್ಯಾಸಿ ಯಕ್ಷ ಗಾನ ಕಲಾವಿದ ,ಸಾಹಿತಿ ಶ್ರೀ ಬಟ್ಯ ಮಾಸ್ತರ್ ರವರು ಬಿಡುಗಡೆಗೊಳಿಸಿದರು. ಮಕ್ಕಳು ತಮ್ಮ ರಚನೆಗಳನ್ನು ಪ್ರಸ್ತುತಪಡಿಸಿದಾಗ,ಓದು ನಿರಂತರವಾಗಿದ್ದು ಜೀವನದಲ್ಲಿ ಅಳವಡಿಸುವಂತಿರಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
         ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಮಾಸ್ತರ್ ಚೇತನ್ ಪುಸ್ತಕವನ್ನಿತ್ತು ಸ್ವಾಗತಿಸಿದರು.ಮಾಸ್ತರ್ ಸುಬ್ರಹ್ಮಣ್ಯ ವಂದಿಸಿ, ಕು.ರಶ್ಮಿ ಕಾರ್ಯಕ್ರಮ ನಿರೂಪಣೆಗೈದರು.








1 comment:

  1. ಒಳ್ಳೆ ಕಾರ್ಯಕ್ರಮ,
    ಶುಭಾಶಯಗಳು.
    ವಾಯನ ವಾರಾಚರಣೆಯನ್ನು ವಾಚನ ಸಪ್ತಾಹ ಅಂತ ಮಾಡಬಹುದಿತ್ತೇನೋ..

    ReplyDelete