Tuesday, January 27, 2015

ಗಣರಾಜ್ಯೋತ್ಸವ





           ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಶರಳಾಯರವರು ಧ್ವಜಾರೋಹಣಗೈದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಷ ವಿ.ಎಸ್ ರವರು ಉಪಸ್ಥಿತರಿದ್ದರು.ಕೊನೆಯಲ್ಲಿ ಸಿಹಿತಿಂಡಿ ವಿತರಣೆಯಾಯಿತು.

Thursday, January 22, 2015

                                           ಪ್ರತಿಭಾ ಪುರಸ್ಕಾರ 
                                          ದಿನಾಂಕ : 07 - 02- 2015 ಶನಿವಾರ 
                             ಸಮಯ  : ಪೂರ್ವಾಹ್ನ  ಗಂಟೆ 9 - 30
                             ಸ್ಥಳ        : ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆ ಸ್ವರ್ಗ 

Tuesday, January 20, 2015




ರಾಷ್ಟ್ರೀಯ ಕ್ರೀಡೆಗಳ ಆಯೋಜನೆಯ ಅಂಗವಾಗಿ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ರನ್ ಕೇರಳ ರನ್  ರ‍್ಯಾಲಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ರನ್ ಕೇರಳ ರನ್ ನಾಮ ಫಲಕವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆಯಿತ್ತರು.ಸುಮಾರು ೨೦೦ ಮೀಟರ್ ದೂರ ರಸ್ತೆಯಲ್ಲಿ ಅಧ್ಯಾಪಕರು ಮತ್ತು ಮಕ್ಕಳು ಓಟದಲ್ಲಿ ಭಾಗಿಯಾದರು.


Tuesday, January 13, 2015

152ನೇ ವಿವೇಕಾನಂದ ಜಯಂತಿ ಆಚರಣೆ ;
 152 ಪ್ಲಕಾರ್ಡ್ ಗಳ ನುಡಿಮುತ್ತು








.ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ ಜರಗಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಕುಮಾರಿ ಪ್ರಣಮ್ಯಾ ಎಂ.ಎಸ್ ವಿವೇಕಾನಂದರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ನಂತರ ಮಾಸ್ಟರ್ ಸುಕೇಶ್.ಬಿ. ವಿವೇಕಾನಂದರಾಗಿ ಅಮೇರಿಕಾದ ಚಿಕಾಗೋ ಭಾಷಣವನ್ನು ಪ್ರಸ್ತುತ ಪಡಿಸಿದರು. ಸಂಸ್ಕೃತ ಶಿಕ್ಷಕ ಕೆ.ಶಿವರಾಮ್ ಭಟ್ ರವರು ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವಜನ ದಿನವನ್ನಾಗಿ ಆಚರಿಸಲಾಗುತ್ತದೆ ಹಾಗೂ ಅವರ ಆದರ್ಶಗಳೆಲ್ಲ ಇಂದಿನ ಯುವಜನತೆ ಪಾಲಿಸಲೇಬೇಕು ಎಂಬ ಸಂದೇಶವನ್ನಿತ್ತರು. 152ನೇ ವಿವೇಕಾನಂದ ಜಯಂತಿಯ ಪ್ರಯುಕ್ತ ೧೫೨ ಪ್ಲಕಾರ್ಡ್ ಗಳಲ್ಲಿ ವಿವೇಕಾನಂದರ ನುಡಿ ಮುತ್ತುಗಳನ್ನು ಬರೆದು ಪ್ರದರ್ಶಿಸಲಾಯಿತು. ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಿ ವಿವೇಕಾನಂದರ ನುಡಿಮುತ್ತುಗಳನ್ನು  ಘೋಷಿಸಲಾಯಿತು.





Wednesday, January 7, 2015

ಚೆರುವತ್ತೂರು ಜಿ.ಎಫ್.ವಿ.ಎಚ್.ಎಸ್.ಎಸ್ ಕಾಡಾಂಗೋಡ್ ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕೃತ ಸಮಸ್ಯಾಪೂರಣಂ ಸ್ಪರ್ಧೆಯಲ್ಲಿ ಎಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಪ್ರಣಮ್ಯಾ.ಎಂ.ಎಸ್. ಈಕೆ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲಾ ೭ನೇ ತರಗತಿಯ ವಿದ್ಯಾರ್ಥಿನಿ .ಇವಳು ಶಿಕ್ಷಕ ಸಚ್ಚಿದಾನಂದ ಎಸ್ ಹಾಗೂ ಶಿಕ್ಷಕಿ ಸರಸ್ವತಿ ಕೆ.ಎನ್ ರವರ ಪುತ್ರಿ.

ಫಸಲಿಗೆ ಕಾಯುತ್ತಿರುವ ಮಕ್ಕಳು...................ನಿರೀಕ್ಷೆಯಲ್ಲಿ




 ಹೊಸ  ವರ್ಷಕ್ಕೆ ಮಕ್ಕಳಿಂದ ಶುಭಾಶಯ ಪತ್ರ ತಯಾರಿ

Tuesday, January 6, 2015


                                              ಪ್ರಣೀತಾ ಎಂ.ಎಸ್ 

ಇತ್ತೀಚೆಗೆ ಎರ್ನಾಕುಳಂನ ಚಿನ್ಮಯಾ ಪೀಠ ವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿ ಕು.ಪ್ರಣೀತಾ ಎಂ.ಎಸ್. ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ. ಇವಳು ಶಿಕ್ಷಕ ಸಚ್ಚಿದಾನಂದ ಎಸ್ ಮತ್ತು ಸರಸ್ವತಿ ಕೆ.ಎನ್ ದಂಪತಿ ಪುತ್ರಿಯಾಗಿದ್ದಾಳೆ.

Monday, January 5, 2015

Development work - NSS STUDENTS
ನವಜೀವನ ಆರ್ಟ್ಸ್ & ಸ್ಪೋರ್ಟ್ಸ್  ಕ್ಲಬಿನ ಸದಸ್ಯರಿಂದ  ಶಾಲಾ ಮೈದಾನ ವಿಸ್ತರಣೆ 
ಮಾತೃ ಭೂಮಿ ,ಜನ್ಮಭೂಮಿ ಸ್ಥಳೀಯ ಸಂಘಟನೆ ಸದಸ್ಯರು  ಶಾಲಾ ತರಕಾರಿ ತೋಟದಲ್ಲಿ ಶ್ರಮದಾನ ಚಟುಚಟಿಕೆಯಲ್ಲಿ  ತೊಡಗಿರುವುದು. 

ಧರ್ಮ ಸ್ಥಳ ಸ್ವ ಸಹಾಯ ಸಂಘದ ಮಹಿಳೆಯರು    ಸ್ವರ್ಗ - ಶಾಲೆಯ ತರಕಾರಿ  ತೋಟದ ಶ್ರಮದಾನದ ಕೆಲಸ ದಲ್ಲಿ ನಿರತರಾಗಿರುವುದು 

 GVHSS MULLERIA PLUS ONE STUDENTS NSS CAMP  - INAUGURATION