Friday, August 28, 2015


೬೯ ನೇ ಸಂಭ್ರಮದ ಸ್ವಾತಂತ್ರೋತ್ಸವ

           ನಮ್ಮ ಶಾಲೆಯಲ್ಲಿ ೬೯ ನೇ ಸ್ವಾತಂತ್ರೋತ್ಸವಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ೨೭ ವರ್ಷಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾಟುಕುಕ್ಕೆ ಅಪ್ಪಯ ಮಣಿಯಾಣಿಯವರು ಧ್ವಜಾರೋಹಣ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. 
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವೈ ಸುಬ್ರಹ್ಮಣ್ಯ ಭಟ್‌ರವರು ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ನೂತನವಾಗಿ ವ್ಯವಸ್ಥೆಗೊಳಿಸಿದ ಧ್ವನಿವರ್ಧಕವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ನಿವೃತ್ತ ಯೋಧ ಅಪ್ಪಯ ಮಣಿಯಾಣಿಯವರು ಭಾರತದ ಇಂದಿನ ರಾಜಕೀಯ ವ್ಯವಸ್ಥೆ, ಕಾನೂನು ವ್ಯವಸ್ಥೆಯ ಬಗ್ಗೆ ಕರೋ, ಓರ್ ಪ್ಯಾರ್ ಕರೋ ನವ ಭಾರತ ನಿರ್ಮಾಣ ಕ್ಕೆ ಮುಂದೆ ಬರಬೇಕು ಎಂದು ಮಕ್ಕಳಿಗೆ ಸಂದೇಶವನಿತ್ತರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮೀಪ್ರಿಯ ಶರಳಾಯರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಉಪಸ್ಥಿತರಾಗಿದ್ದ ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ಕೆ.ಶಿವರಾಮ್ ಭಟ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿದರು.
ನಂತರ ೧ ರಿಂದ ೭ ನೇ ತರಗತಿಯ ಮಕ್ಕಳ ದೇಶಭಕ್ತಿಗಾನ ನಡೆಯಿತು. ಬಳಿಕ ಭಾರತ  ಮಾತೆ ಹಾಗೂ ಗಾಂಧೀಜಿ ವೇಷಧಾರಿಯಾಗಿ ಮಕ್ಕಳು ಮೆರವಣಿಗೆಗೆ ನೇತೃತ್ವ ನೀಡಿದರು. ಧ್ವನಿವರ್ಧಕದ ಸಹಾಯದಿಂದ ದೇಶಭಕ್ತಿಗಾನ ಒಂದೆಡೆಯಾದರೆ, ತ್ರಿವರ್ಣ ದಿಂದ ಕೂಡಿದ ಡಿಸ್‌ಪ್ಲೇ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತು. ಕಾರ್ಯಕ್ರಮದ ಕೊನೆಯಲ್ಲಿ ಪಿ.ಟಿ.ಎ ವತಿಯಿಂದ ಸಿಹಿತಿಂಡಿ ವಿತರಣೆಯಾಯಿತು.