Tuesday, November 18, 2014

 ರಕ್ಷಕರ ವಿಶೇಷ ಸಮ್ಮಿಲನ
ನಮ್ಮ ಶಾಲೆಯಲ್ಲಿ ಸರ್ವಶಿಕ್ಷಾ ಅಭಿಯಾನ ಕೇರಳ, ಹಕ್ಕು ಆಧಾರಿತ, ’ಶಿಶು ಸೌಹಾರ್ದ ಶಾಲೆ’ ಕೇರಳ ಸರಕಾರದ ಧ್ಯೇಯವನ್ನು ರಕ್ಷಕರಿಗೆ ತಲಪಿಸುವ ನಿಟ್ಟಿನಲ್ಲಿ ರಕ್ಷಕರಿಗಾಗಿ  ’ರಕ್ಷಕರ ಸಮ್ಮಿಲನ’ ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಯಿತು. ಶಾಲಾ ರಕ್ಷಕಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಸರಳಾಯರವರು ಔಪಚಾರಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ’ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆ ರಕ್ಷಕರು ಕೈ ಜೋಡಿಸಬೇಕು’ ಎಂದು ನುಡಿದರು.
ನಂತರ ಆಗಮಿಸಿದ ರಕ್ಷಕರನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೂ ಸೌಹಾರ್ದಯುತ ಮನೆ ವಾತಾವರಣ, ಮಗನನ್ನೊ ಮಗಳನ್ನೊ ಹೇಗೆ ಬೆಳೆಸಬೇಕು, ಮಗುವಿಗೆ ಹೇಗೆ ಭಾವನಾತ್ಮಕ ಬೆಂಬಲವನ್ನು ನೀಡುವುದು, ಮಗುವಿನ ಕಲಿಕೆಯನ್ನು ಬೆಂಬಲಿಸಲು ನಾವು ಹೇಗೆ ಸಹಕರಿಸಬಹುದು ಎಂಬೀ ವಿಷಯವನ್ನು ಒಂದೊಂದು ಗುಂಪಿಗೆ ನೀಡಿ ಗುಂಪಿನಲ್ಲಿ ಚರ್ಚಿಸಿ ಮಾಹಿತಿ ಸಂಗ್ರಹಿಸಿ ಮಂಡಿಸಲಾಯಿತು. ಪ್ರತಿ ಗುಂಪುಗಳು ಅವರು ಸಂಗ್ರಹಿಸಿದ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಮಂಡಿಸಿ ಚರ್ಚೆ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಬಳಿಕ ಶಿಕ್ಷಕರಾದ ಸಚ್ಚಿದಾನಂದ ಎಸ್ ರವರು ಕಾರ್ಯಕ್ರಮದ ರುವಾರಿಯಾಗಿದ್ದು ಕ್ರೋಡಿಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ ಭಟ್ ರವರು ಈ ಶೈಕ್ಷಣಿಕ ವರ್ಷದ ಯೋಜನೆ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ವೃದ್ಧಿಸಲು ತರಗತಿಗಳಲ್ಲಿ ’ಓದಿನ ಮೂಲೆ’ ಬಲಪಡಿಸುವುದು ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ಮಧುರಾ.ವೈ, ಹರಿಣಾಕ್ಷಿ, ವನಿತಾ ಪ್ರಾರ್ಥನೆ ಹಾಡಿದರು. ಶಿಕ್ಷಕ ಕೆ. ಶಿವರಾಮ್ ಭಟ್ ರವರು ಸ್ವಾಗತಿಸಿದರು. ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ವಂದನಾರ್ಪಣೆ ಗೈದರು.