Tuesday, October 11, 2011

ರಕ್ಷಕರ / ಪೋಷಕರ ವಿಶೇಷ ಸಮಾವೇಶ
ಮತ್ತು
ಎಲ್.ಸಿ.ಡಿ.ಪ್ರೊಜೆಕ್ಟರ್ ಹಾಗೂ ಹೊಲಿಗೆಯಂತ್ರ ಸ್ವೀಕರಣ ಸಮಾರಂಭ

     ನಮ್ಮ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ವತಿಯಿಂದ ರಕ್ಷಕರ / ಪೋಷಕರ ವಿಶೇಷ ಸಮಾವೇಶ ಜರಗಿತು. ಮಕ್ಕಳ ಹಕ್ಕುಗಳ ಕುರಿತು ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಹಾಗೂ ಶಾಲಾ ಶಿಕ್ಷಕ ಸಚ್ಚಿದಾನಂದ ಎಸ್.ತರಬೇತಿ ನೀಡಿದರು. ಬಹು ಸಂಖ್ಯೆಯಲ್ಲಿ  ರಕ್ಷಕರು ಈ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದರು.
    









ಇದೇ ಸಂದರ್ಭದಲ್ಲಿ ಮಾಣಿಮೂಲೆ ಶ್ರೀ ಮತ್ತು ಶ್ರೀಮತಿ ವೆಂಕಟ್ರಮಣ ಭಟ್ - ಮಕ್ಕಳು ನಮ್ಮ ಶಾಲೆಗೆ ಕೊಡಮಾಡಿದ ಎಲ್.ಸಿ.ಡಿ.ಪ್ರೋಜೆಕ್ಟರ್ ಹಾಗೂ ಶಾಲಾ ಮಾತೃಸಂಗಮದ ಕೊಡುಗೆ ಹೊಲಿಗೆ ಯಂತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ.ಭಟ್ ಹಾಗೂ ವ್ಯವಸ್ಥಾಪಕ ಹೃಷಿಕೇಶ.ವಿ.ಎಸ್. ಅವರು ಜಂಟಿಯಾಗಿ ಸ್ವೀಕರಿಸಿದರು.
    ಸರಕಾರಿ ಪ್ರೌಢ ಶಾಲೆ ಪಡ್ರೆಯ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕರುಣಾಕರ ಅನಂತಪುರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಾರ್ಡ್ ಮೆಂಬರ್ ಶ್ರೀ ರವಿ.ಕೆ. ಹಾಗೂ ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಶುಭಾಶಂಸನೆ ಗೈದರು. ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶ್ರೀವೆಂಕಟ್ರಮಣ ಭಟ್ ಮಾಣಿಮೂಲೆ, ಶ್ರೀಮತಿ ಸೂರ್ಯಕಾಂತಿ ಮಾಣಿಮೂಲೆ, ಶ್ರೀ ಕೃಷ್ಣಪ್ರಸಾದ್, ಮಾಣಿಮೂಲೆ ಉಪಸ್ಥಿತರಿದ್ದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ. ಬಿ.ಕೆ. ಸ್ವಾಗತಿಸಿ, ಶಾಲಾ ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ವಂದಿಸಿದರು. ಶಾಲಾ ವಿದ್ಯಾರ್ಥಿ ಕುಮಾರಿ ಮಾಲವಿಕ.ಎಸ್. ಕಾರ್ಯಕ್ರಮ ನಿರೂಪಿಸಿದರು.
  ದಾನಿಗಳಿಗೆ ಹಾಗೂ ಅಥಿತಿಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.







Thursday, October 6, 2011















                   ಮಕ್ಕಳ ಬಾನುಲಿ ಕೇಂದ್ರದ ಉದ್ಘಾಟನೆ; ಶಾಸಕರಿಗೆ ಅಭಿನಂದನೆ
   ನಮ್ಮ ಶಾಲೆಯಲ್ಲಿ ಹೊಸದಾಗಿ ವ್ಯವಸ್ಥೆಗೊಳಿಸಲಾದ ಮಕ್ಕಳ ರೇಡಿಯೋ ಕೇಂದ್ರದ ಉದ್ಘಾಟನೆ ಮತ್ತು ಶಾಸಕರಿಗೆ ಅಭಿನಂದನೆ ಆಗಸ್ಟ್ ೨೧ರಂದು ಜರಗಿತು.
    ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವ್ಯವಸ್ಥಾಪಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ಶಾಸಕ ಪಿ.ಬಿ.ಅಬ್ದುಲ್ ರಜಾಕ್ ರೇಡಿಯೋ ಕೇಂದ್ರ ಉದ್ಘಾಟಿಸಿ ಮಾತನಾಡಿ,ಶಾಲೆಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು ಮಕ್ಕಳ ಚಟುವಟಿಕಗಳಿಗೆ ಸ್ಪೂರ್ತಿ ತುಂಬುವುದರೊಂದಿಗೆ ಬೌದ್ಧಿಕ ವಿಕಾಸಕ್ಕೆ ಕಾರಣವಾಗುತ್ತದೆ ಎಂದರು.
    ಎಣ್ಮಕಜೆ ಗ್ರಾಮ ಪಂಚಾಯತಿನ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರನ್ನು ಶಾಲಾ ಆಡಳಿತ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಗ್ರಾಮ ಪಂಚಾಯತಿನ ಉಪಾಧ್ಯಾಕ್ಷೆ ಆಯಿಷಾ.ಎ.ಎ.,ಗ್ರಾಮ ಪಂಚಾಯತಿನ ಸದಸ್ಯ ರವಿ.ಕೆ.,ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಆನಂತಪುರ, ಡಾ.ಮೋಹನ್ ಕುಮಾರ್ ವೈ.ಎಸ್.,ಶಾಲಾ ವ್ಯವಸ್ಥಾಪಕ ಹೃಷಿಕೇಶ, ಮಾತೃ ಸಂಗಮದ
ಅಧ್ಯಕ್ಷೆ ರಾಧಿಕಾ ಉಪಸ್ಥಿತರಿದ್ದರು.
     ಈ ಸಂದರ್ಭ ಸ್ವರ್ಗ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಮನವಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಲಾಯಿತು.ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿವೇಕಾನಂದ.ಬಿ.ಕೆ.ವಂದಿಸಿದರು.ವಿದ್ಯಾರ್ಥಿಗಳಾದ ಕುಮಾರಿ ಮೇಘಾ.ಎಸ್.ಎಮ್. ಹಾಗೂ ಮಾಸ್ಟರ್ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Tuesday, October 4, 2011









                                                     "ಮುತ್ತು ಮಾಲಾ"
    ಪರಿಶಿಷ್ಟಜಾತಿ ಹಾಗು ಪರಿಶಿಷ್ಟವರ್ಗಕ್ಕೆ ಸೇರಿದ ಮಕ್ಕಳಿಗಾಗಿ ಕಲಿಕೆ ಮತ್ತು ಗಳಿಕೆಯ ದೃಷ್ಟಿಕೋನವನ್ನಿಟ್ಟುಕೊಂಡು ಎಸ್.ಎಸ್.ಎ.ಯ ವತಿಯಿಂದ ನಡೆಸಲ್ಪಟ್ಟ ಮುತ್ತು ಮಾಲಾ ಎಂಬ ಎರಡು ದಿನದ ವಿಶೇಷ ಕಾರ್ಯಾಗಾರ ಮಾರ್ಚ್ ತಿಂಗಳ ೧೯,೨೦ ರಂದು ಜರಗಿತು.ಪಂಚಾಯತು ವ್ಯಾಪ್ತಿಗೆ ಸೇರಿದ ವಿವಿಧ ಶಾಲೆಗಳಿಂದ ಒಟ್ಟು ೭೦ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಳೆ ಬಿ.ಆರ್.ಸಿ. ಪ್ರೋಗ್ರಾಂ ಆಫೀಸರ್ ಶ್ರೀ ರವೀಂದ್ರ ಮಾಸ್ಟರ್ ನೆರವೇರಿಸಿದರು.ಮಕ್ಕಳನ್ನು ಗುಂಪುಗಳಾಗಿ ಮಾಡಿ ಪ್ರತಿ ಗುಂಪಿಗೂ ಎಲ್ಲಾ ನಿರ್ಮಾಣ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಸೆಶನ್‌ಗಳಲ್ಲಿ ತರಬೇತಿ ನೀಡಲಾಯಿತು.
    ಪ್ರತಿಯೊಂದು ನಿರ್ಮಾಣ ಚಟುವಟಿಕೆಯ ಹಂತದಲ್ಲೂ ಉತ್ಪನ್ನದ ಉಪಯೋಗ,ಬಳಸಿದ ಸಾಮಾಗಿ, ತಯಾರಿಸುವ ವಿಧಾನಗಳ ಕುರಿತು ಚರ್ಚಿಸಲಾಯಿತು.ಉತ್ಪನ್ನದ ತಯಾರಿಯ ಬಳಿಕ ಉತ್ಪನ್ನದ ಖರ್ಚುವೆಚ್ಚ, ಜಾಹೀರಾತು ಬರಹ,ಮಾರಾಟದ ಕುರಿತು ಚರ್ಚಿಸಿ ಬೆಲೆ ನಿರ್ಧರಿಸುವುದರ ಮೂಲಕ ಗಣಿತದ ಆಶಯವನ್ನು ಪ್ರಸ್ತುತಪಡಿಸಲಾಯಿತು.
ಎರಡು ದಿನದ ನಿರ್ಮಾಣ ಚಟುವಟಿಕೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಪೂರ್ಣಿಮ ಕೊಡುಮಾಡು, ಶ್ರೀಮತಿ ಅರ್ಚನಾ, ಕುಮಾರಿ ಮೋಹಿನಿ, ನೋಸರ್ ಇಂಡಿಯಾ ಸಂಘದ ಸದಸ್ಯೆ ಫೌಸಿಯಾ ಮತ್ತು ಬಳಗದವರು ಸಹಕರಿಸಿದರು.
    ಶಿಬಿರದ ಕೊನೆಯಲ್ಲಿಸಮಾರೋಪ ಸಮಾರಂಭ ಹಾಗು ಮಾರಾಟ ಮೇಳ ಜರಗಿತು.ಮಕ್ಕಳ ಉತ್ಪನ್ನವಾದ ಫಿನೋಯಿಲ್, ಸಾಬೂನು, ಮುತ್ತಿನಹಾರಗಳು ಗ್ರಾಹಕರ ಮನ ಸೆಳೆದು ಬಿರುಸಿನ ವ್ಯಾಪಾರ ನಡೆಯಿತು.