Monday, October 3, 2011








                                                            ಶಾಲಾ ಮಕ್ಕಳ ಕೈತೋಟ

               ಶಾಲಾ ಪರಿಸರ ಕ್ಲಬಿನ ಆಶ್ರಯದಲ್ಲಿ,ಮಕ್ಕಳ ಕೈತೋಟದಲ್ಲಿ  ಸಾವಯವ ಗೊಬ್ಬರವನ್ನು ಬಳಸಿ ಹರಿವೆ,ಬಸಳೆ,ತೊಂಡೆ,ಬದನೆ,ಬಾಳೆ,ಅನನಾಸು ಮೊದಲಾದ ಹಲವು ಬೆಳೆಗಳನ್ನು ಬೆಳೆಸಲಾಗಿತ್ತು.ಇದರಿಂದ ಉತ್ತಮ ಫಸಲನ್ನು ಪಡೆದು ,ಮಕ್ಕಳ ಮಧ್ಯಾಹ್ನದ ಊಟಕ್ಕೆ ಉಪಯೋಗಿಸಲಾಗಿತ್ತು.ಮಕ್ಕಳ ಅವಶ್ಯಕತೆಗಳನ್ನು ಮೀರಿ ಉಳಿದ ತರಕಾರಿಗಳನ್ನು ಸ್ಥಳೀಯ ಅಂಗಡಿಗಳಿಗೆ ,ಮುಖ್ಯೋಪಾಧ್ಯಾಯರುಗಳ ವಿದಾಯ ಕೂಟದ ಸಂದರ್ಭದಲ್ಲಿ ಮಾರಾಟ ಮಾಡಲಾಗಿತ್ತು.ಪಂಚಾಯತು ಮಟ್ಟದ 'ಮಿಗವ್" ಕಾರ್ಯಕ್ರಮದಲ್ಲಿ ನಮ್ಮಶಾಲೆಯ ತರಕಾರಿ ಅಂಗಡಿ ಕಾರ್ಯಕ್ರಮಕ್ಕೆ ಉತ್ತಮ ಮೆರುಗನ್ನು ಕೊಟ್ಟಿತ್ತು.ಸುಮಾರು 5 ಕ್ವಿಂಟಾಲ್ ನಷ್ಟು ತೊಂಡೆ,3 ಕ್ವಿಂಟಾಲ್ ನಷ್ಟು ಬಸಳೆ,2 ಕ್ವಿಂಟಾಲ್ ನಷ್ಟು ಬದನೆ.ಗಳು ಮಾರಟಕ್ಕೆ ದೊರೆತಿವೆ. 

 
 

No comments:

Post a Comment