Thursday, December 10, 2015



                                         ಬಯಲು ವೀಕ್ಷಣೆ

ನಮ್ಮ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಗಳು ಪ್ರಕೃತಿ ವೀಕ್ಷಣೆಗಾಗಿ ಸಮೀಪದ ವಾಣೀನಗರ ರಕ್ಷಿತಾರಣ್ಯಕ್ಕೆ ಭೇಟಿಯಿತ್ತರು. ಅರಣ್ಯದ ಹೊರಗೆ ನಾವು ಅನುಭವಿಸುವ ಬಿಸಿ ವಾತಾವರಣ ಮತ್ತು ಕಾಡಿನೊಳಗಿರುವ ತಂಪಿನ ವಾತಾವರಣವು ವಿದ್ಯಾರ್ಥಿಗಳಿಗೆ ಖುಷಿ ತಂದಿತು, ಕಾಡಿನಲ್ಲಿ ನೆಲ್ಲಿಕಾಯಿ, ಮುಳ್ಳುಕಾಯಿಗಳನ್ನು ಸವಿಯುತ್ತಾ, ಒರತೆಯ ನೀರಿನ ತಂಪನ್ನನುಭವಿಸುತ್ತಾ ವಿವಿಧ ಪ್ರಾಣಿ ಪಕ್ಷಿಗಳ ಸ್ವಚ್ಛಂದ ಹಾರಾಟವು ಮನಸ್ಸಿಗೆ ಮುದ ನೀಡಿತು. ಇಂಗ್ಲಿಷ್ ಪಠ್ಯಕ್ಕನುಸರಿಸಿ 'ನೇಚರ್ ವಾಕ್' ಸಂಬಂಧಿಸಿ ಆಯೋಜಿಸಲಾದ ಈ ಬಯಲು ವೀಕ್ಷಣೆಗೆ ಶಿಕ್ಷಕ ಸಚ್ಚಿದಾನಂದ.ಎಸ್ ನೇತೃತ್ವ ನೀಡಿದ್ದರು. ಭವಿಷ್ಯದಲ್ಲಿ ಕಾಡನ್ನು ಉಳಿಸಿ ಬೆಳೆಸುವ ಅಗತ್ಯ ಸಂಕಲ್ಪವನ್ನು ವಿದ್ಯಾರ್ಥಿಗಳು ಮನಗಂಡರು. 







                               ನಮ್ಮ ಶಾಲೆಯ ಕೃಷಿ ಚಟುವಟಿಕೆಗಳು




           ಪ್ರಾಕೃತಿಕ ಕೆರೆಗಳ ಸಂದರ್ಶನ

ನಮ್ಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿಗಳು ಮಲ್ಲತಡ್ಕ-ಮೂಲಸ್ಥಾನ ಸಮೀಪವಿರುವ ಹಲವು ಜೀವಿಗಳ ವಾಸಸ್ಥಾನವಾಗಿರುವ ಕೆರೆಗಳನ್ನು ಸಂದರ್ಶಿಸಿದರು. ಕಾಡು ಮರಗಳಿಂದ ಸುತ್ತುವರಿದು ನಿರಂತರ ಒರತೆಯಿಂದ ತುಂಬಿ ಹರಿಯುತ್ತಿರುವ ಹಲವು ಕೆರೆಗಳು ಈ ಪ್ರದೇಶದಲ್ಲಿದ್ದು ವಿದ್ಯಾರ್ಥಿಗಳ ವಿeನ ಕಲಿಕೆಗೆ ಪೂರಕವಾಗಿದೆ. ಜೀವ ಪರಿಸ್ಥಿತಿವ್ಯೂಹ ಗಳಂತೆ ಕಾರ್ಯವೆಸಗುವ ನೈಸರ್ಗಿಕ ಕೆರೆಗಳನ್ನು ನೋಡಿ ಸಂಭ್ರಮಿಸಿದರು. ಕಪ್ಪೆ, ಮೀನು,ಆಮೆ, ಏಡಿ,ಹಾವು ಮುಂತಾದ ಜಲಚರಗಳಲ್ಲದೇ ಪಕ್ಷಿಗಳು, ಇನ್ನಿತರ ಕೀಟಗಳಿಗೆ ಆಶ್ರಯ ತಾಣವಾಗಿದೆ ಎಂದು ಪ್ರತ್ಯಕ್ಷ ದರ್ಶನದಿಂದ ತಿಳಿದು ಕೊಂಡರು. ಪಿ.ಟಿ.ಎ ಸದಸ್ಯರಾದ ವಿಷ್ಣು ಪ್ರಸಾದ ಕೆ.ವೈ ನೇತೃತ್ವದಲ್ಲಿ ಶಿಕ್ಷಕ ಸಚ್ಚಿದಾನಂದ ಎಸ್  ಬಯಲು ಪ್ರವಾಸವನ್ನು ಆಯೋಜಿಸಿದ್ದರು. 






                                           ಕಾವ್ಯ ಪುರಸ್ಕಾರ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದ ೩೦ ನೇ ವರ್ಷದ ಸಾಹಿತ್ಯೋತ್ಸವದಲ್ಲಿ ರಾಜ್ಯ ಮಟ್ಟದ ವಿಶ್ವ ಕವಿ ಕುವೆಂಪು ನೆನಪಿನ ಕಾವ್ಯ ಪುರಸ್ಕಾರಕ್ಕೆ ಹೊರನಾಡ ಕನ್ನಡಿಗರಾಗಿ ಅರ್ಹತೆ ಪಡೆದ ನಮ್ಮಶಾಲೆಯ ಮಾತೃ ಸಂಘದ ಅಧ್ಯಕ್ಷೆ ಮಂಜರಿ ನವೀನ್ ರವರು ಮೈಸೂರಿನಲ್ಲಿ ಇತ್ತೀಚೆಗೆ ಜರಗಿದ ಶಿವರಾತ್ರಿ ರಾಜೇಂದ್ರ ಕಲಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. 


Thursday, December 3, 2015



                                    ಕಲೋತ್ಸವ ಪ್ರತಿಭೆ 
ಇತ್ತೀಚೆಗೆ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಒಗಟು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು|ಪ್ರಣೀತಾ ಎಮ್.ಎಸ್, ಈಕೆ ನಮ್ಮ ಶಾಲೆಯಲ್ಲಿ ೨ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕಥೆ ಹೇಳುವ ಸ್ಪರ್ಧೆ ಹಾಗೂ ಶಾಸ್ತ್ರೀಯ ಸಂಗೀತಗಳಲ್ಲೂ ಉತ್ತಮ ಗ್ರೇಡನ್ನು ಪಡೆದಿರುವ, ಈಕೆ ಅಧ್ಯಾಪಕ ದಂಪತಿಗಳಾದ ಶ್ರೀ.ಸಚ್ಚಿದಾನಂದ ಎಸ್ ಹಾಗೂ ಶ್ರೀಮತಿ ಸರಸ್ವತಿಯವರ ಪುತ್ರಿಯಾಗಿರುತ್ತಾಳೆ. 


                                           *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಯು.ಪಿ ಸಂಸ್ಕ್ರತ ವಿಭಾಗದಲ್ಲಿ ೭೮ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ಸಂಸ್ಕ್ರತ ವಿದ್ಯಾರ್ಥಿ, ವಿದ್ಯಾರ್ಥಿನಿಯರು.  ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಸಂಸ್ಕ್ರತ ಶಿಕ್ಷಕರಾದ ಕೆ. ಶಿವರಾಮ್ ಭಟ್ ಇವರೊಂದಿಗೆ.




                                                                 *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ೧೪ ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು. ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಶಿಕ್ಷಕರಾದ ಶ್ರೀ ಸಚ್ಚಿದಾನಂದ ಎಸ್ ಇವರೊಂದಿಗೆ.




                                 ***************