Thursday, October 2, 2014



ಸಾರ್ವಜನಿಕರಿಂದ ದಸರಾ ಹುಲಿವೇಷ ಕುಣಿತ - ಕುತೂಹಲದಿಂದ  ವೀಕ್ಷಿಸುತ್ತಿರುವ ಮಕ್ಕಳು 

ಗಾಂಧೀ , ಶಾಸ್ತ್ರಿ ಜನ್ಮ ದಿನಾಚರಣೆ  

 ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯ ಅಂಗವಾಗಿ ಈ ಇಬ್ಬರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಶಾಲಾ ವಿದ್ಯಾರ್ಥಿ ನಾಯಕ ಸುಕೇಶ್ ಹಾಗೂ ಸಾಂಸ್ಕೃತಿಕ ಮಂತ್ರಿ ಮಧುರಾ.ವೈ ಹೂವಿನ ಹಾರವನ್ನು ಸಮರ್ಪಿಸಿದರು. ನಂತರ ಸುಕೇಶ್ ಹಾಗೂ ಪ್ರಣಮ್ಯಾರವರು ಶಾಸ್ತ್ರಿ ಹಾಗೂ ಗಾಂಧೀಜಿಯವರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಗಾಂಧೀಜಿಯವರ ಪ್ರಾರ್ಥನಾ ಗೀತೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಮಕ್ಕಳಿಗೆ ಹಾಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ಗಾಂಧೀ ಕನಸಾದ ಶುಚಿತ್ವ ಯಜ್ಞಕ್ಕೆ ಚಾಲನೆಯಿತ್ತರು. ಸಹ ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ಶಾಲಾ ವಠಾರದ ಸುತ್ತು ಮುತ್ತಲಿನ ಪರಿಸರವನ್ನು ಮಕ್ಕಳು ಶಿಕ್ಷಕರು ಸೇರಿ ಶುಚಿಗೊಳಿಸಿದರು.

 



ನಾಡ ಹಬ್ಬ ದಸರಾ ಆಚರಣೆ 
ಕನ್ನಡಿಗರ ನಾಡ ಹಬ್ಬ ದಸರಾವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ದೀಪ ಜ್ವಾಲನೆಯ ಮೂಲಕ ಉದ್ಘಾಟಿಸಿ ’ಕನ್ನಡದ ಮಣ್ಣಾದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಕನ್ನಡಿಗರಾಗಿದ್ದು, ಕನ್ನಡಾಭಿಮಾನಿಗಳಾದ ನಾವು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂಬ ಸಂದೇಶವನ್ನು ನೀಡಿದರು. ಶಾಲಾ ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ರವರು ನಾಡಹಬ್ಬ ಆಚರಣೆಯ ಔಚಿತ್ಯವನ್ನು ತಿಳಿಸಿಕೊಟ್ಟರು.
ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಗೀತೆ, ಕಥೆ, ಜಾನಪದ ಹಾಡು, ನಾಡಗೀತೆ, ಹುಲಿವೇಷ ಇತ್ಯಾದಿಗಳನ್ನು ಮಕ್ಕಳು ಪ್ರಸ್ತುತಪಡಿಸಿದರು. ಜ್ಯೋತಿ ಮೆಡಿಕಲ್ಸ್ ಪೆರ್ಲ ಮಾಲಕರಾದ ಡಾ.ಶಂಕರ ನಾರಾಯಣ ಭಟ್ ರವರು ’ಹಬ್ಬಗಳ ಆಚರಣೆಯಿಂದ ಹಬ್ಬದ ಮಹತ್ವವು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಿ ಕಲೆ, ಸಂಸ್ಕೃತಿಯು ಶಾಶ್ವತವಾಗಿ ಉಳಿಯುತ್ತದೆ’ ಎಂದು ನುಡಿದರು. ನಮ್ಮ ಶಾಲಾ ರಕ್ಷಕ ಬಳಗದವರಾದ ಶ್ರೀ ರಾಮಚಂದ್ರ ಮಣಿಯಾಣಿಯವರಿಂದ ಸತ್ಯ ಹರಿಶ್ಚಂದ್ರ ಕಥಾ ಭಾಗದ ಹರಿಕಥೆ ನಡೆಯಿತು. ಕುಮಾರಿ ಪ್ರಣಮ್ಯಾ ಹಾಗೂ ಜೀವಿತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ವಂದನಾರ್ಪಣೆ ಗೈದರು.
 


 


 






ಕೇರಳ ಸರಕಾರ ವಿತರಿಸಿದ ತರಕಾರಿ ಬೀಜಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಮಕ್ಕಳಿಗೆ ವಿತರಿಸಿ, ತಾಜಾ ತರಕಾರಿಗಳನ್ನು ಮನೆಯಲ್ಲಿ ಬೆಳೆಸಿ ಆರೋಗ್ಯ ವೃಧಿಸಿ ಎಂಬ ಸಂದೇಶವನ್ನು ನೀಡಿದರು.


ಯಶಸ್ವಿ ಮಂಗಳ ಯಾನಕ್ಕೆ ಹಾರ್ದಿಕ ಶುಭಾಶಯಗಳು


 

ಶಿಕ್ಷಕ  ವೆಂಕಟ ವಿದ್ಯಾಸಾಗರ್ ರವರು ಸಮಗ್ರ ಮಾಹಿತಿಯನ್ನು ನೀಡಿದರು .