Monday, March 23, 2015

7ನೇ ತರಗತಿ ಯ  ಮಕ್ಕಳ -ವಿದಾಯಕೂಟ -ಮ ಮನದಾಳ ದ ಮಾ ತು 
ಶಾಲಾ ಮುಖ್ಯೋಪಾಧ್ಯಾಯ ಪಿ.ಶಿವರಾಮ್.ಭಟ್.
ಸರಳ ಸಜ್ಜನ.ಸಮಯ ನಿಷ್ಠತೆ.ಎಲ್ಲಾ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುವ ವ್ಯಕ್ತಿತ್ವ.
ಇಂಗ್ಲೀಷ್ ಭಾಷೆ ಕಷ್ಟ ಎಂದೆನಿಸುವರಿಗೆ ಇಷ್ಟವಾಗುವ ರೀತಿಯಲ್ಲಿ ಕಲಿಸುವ ಬೋಧನ ರೀತಿ ಎಲ್ಲರ ಮನಸ್ಸನ್ನು ತಣಿಸಿದೆ.
                     ಪ್ರಶಾಂತ.ಕುಮಾರ್.
                      7ನೇತರಗತಿ 
7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ಪದ್ಮನಾಭ .ಆರ್
ಸರಳ ಸಜ್ಜನ. ಸೃಜನಾತ್ಮಕ ಶಿಬಿರಗಳನ್ನು ನಡೆಸುವಲ್ಲಿ ಸಂಪನ್ಮೂಲ ವ್ಯಕ್ತಿ.ಕ್ಲಿಷ್ಟಕರವಾದ ಗಣಿತವನ್ನು ಇಷ್ಟವಾಗುವ ಮೋಜಿನ ರೀತಿಯಲ್ಲಿ ಕಲಿಸುವ ತಂತ್ರಗಾರಿಕೆ,ಮಕ್ಕಳ ಮನಸ್ಸನ್ನು ಗಣಿತದಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿರುವರು.
ಪಾಠಪುಸ್ತಕ ತಯಾರಿಸುವ ಕಾರ್ಯಗಾರದಲ್ಲಿ ಭಾಗವಹಿಸಿರುವರು.
.ಉತ್ತಮ ಕೃಷಿಕ
.ಉತ್ತಮ ಹಾಡುಗಾರ ವಿಶಾಲ ಮನೋಭಾವ
.ಬಹುಮುಖ ಪ್ರತಿಭಾನ್ವಿತ ವಿನೂತನ ಚಿಂತಕ
.ಹವ್ಯಾಸ ಭಜನೆ,ಹಾಡುವುದು
.ಶಾಲಾ ಕರ್ಷಕ, ನೇರ ನಡೆನುಡಿಯ ನಿಷ್ಠ ಕ್ರೀಯಾಶೀಲ ವ್ಯಕ್ತಿತ್ವ
.ಸಮಯೋಜಿತ ಮಾರ್ಗದರ್ಶಕ.
.ಶಾಲಾಮಟ್ಟದ ರಚಾನಾತ್ಮಕ ನಾಟಕ ರಚನೆಗಾರ.

7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ವೆಂಕಟ ವಿದ್ಯಾಸಾಗರ್
ಸರಳ ವ್ಯಕ್ತಿತ್ವ ನಮ್ಮ ಶಾಲೆಯ ಸಂಪನ್ಮೂಲವ್ಯಕ್ತಿ      ವಿಜ್ಜಾನ ಅಧ್ಯಾಪಕ .ಅಜ್ಞಾನವನ್ನು ವಿಜ್ಞಾನದ ಮೂಲಕ ಜ್ಞಾನವನ್ನು ಒದಗಿಸುವ ಉತ್ತಮ ರೀತಿಯ ಬೋಧನ ಕೌಶಲ್ಯವನ್ನು ಹೊಂದಿರುವ ಅಧ್ಯಾಪಕ.ವಿಜ್ಞಾನದಲ್ಲಿ ಬರುವ ಎಲ್ಲಾ ರೀತಿಯ ಸಂಶಯಗಳನ್ನು ಪ್ರಯೋಗದಮೂಲಕ ನೇರವೇರಿಸಿ ಮಕ್ಕಳ ಸೃಜನಾತ್ಮಕ ಅಭಿವೃದ್ಧಿಗೆ ದಾರಿದೀಪವಾಗಿರುವರು.
             ಮಧುರಾ
          7ನೇತರಗತಿ 
7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ಸಚ್ಚಿದಾನಂದ.ಎಸ್.
ನಮ್ಮ ಶಾಲೆಯ ಬೆನ್ನೆಲುಬು ಶಾಲೆಯ ಚಟುವಟಿಕೆಗಳನ್ನು ಅತ್ಯುತ್ತಮವಾಗಿ ಸಂಘಟಿತ ರೀತಿಯಲ್ಲಿ ಯೋಜನಾ ಬದ್ಧವಾಗಿ ಕಾರ್ಯ ನಿರ್ವಹಿಸಿ ,ಮಾದರಿ ಅಧ್ಯಾಪಕ ಎನಿಸಿಕೊಂಡಿರುವರು.ಉತ್ತಮ ಕಾರ್ಯಕ್ರಮ ನಿರ್ವಹಕ,ವಾಗ್ಮಿ ಮಾರ್ಗದರ್ಶಕ,ಸನಾತನ ಸಂಸ್ಕರ-ಸಂಸ್ಕ್ರತಿಯ ಹರಿಕಾರ.

                            ವನಿತ.ಪಿ
                            7ನೇ ತರಗತಿ

7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 

ಮಿಥುನ್ .ವಿ.ಆರ್
ಶಿಸ್ತಿನ ಸಿಪಾಯಿ .ರಾಷ್ಟ್ರಭಾಷಾ ಹಿಂದಿ ಭಾಷೆಯ ಕಲಿಸುವಿಕೆ. ತಮಾಷೆಯ ಮಾತುಗಳಿಂದ ಎಲ್ಲರನ್ನೂ ನಗುವಿನ ಅಲೆಯಲ್ಲಿ ತೇಲಾಡಿಸುವ ಅಪೂರ್ವ ವ್ಯಕ್ತಿತ್ವ ತಮಾಷೆ ರೀತಿಯಲ್ಲಿ ಕಲಿಸುವ ತಂತ್ರಗಾರಿಕೆ.ಈ ತಂತ್ರಗಾರಿಕೆ ಹಿಂದಿಭಾಷೆಯನ್ನು ಸುಲಭ ರೀತಿಯಲ್ಲಿ ಮಕ್ಕಳು ಅರ್ಥೈಯಿಸಲು ಸಾಧ್ಯವಾಗಿದೆ.ಮಕ್ಕಳಿಗೆ ಅಚ್ಚುಮೆಚ್ಚಿನ ಗುರುಗಳಾಗಿ ತಮ್ಮ ಕಾರ್ಯವನ್ನು ಸದ್ದಿಲ್ಲದೇ ನಿಭಾಯಿಸುತ್ತಿದ್ದಾರೆ. ಈ ಅಧ್ಯಾಪಕರು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಇವರನ್ನು ’ಹಿಂದಿ ಪಂಡಿತ’ಎಂದರೂ ತಪ್ಪಿಲ್ಲ.



7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ಶ್ರೀಮತಿ ಗೀತಾಕುಮಾರಿ
ನಮ್ಮ ಶಾಲಾ ’ಹಿರಿಯ ಅಕ್ಕ’ ಯಾಕೆಂದರೆ ಹೆಣ್ಮಕ್ಕಳ ಅಭಿವೃದ್ಧಿಗೆ ಬೇಕಾಗಿ ಹೆಣ್ಮಕ್ಕಳ ಶಿಬಿರಗಳು ಕೌನ್ಸಿಲಿಂಗ್ ತರಗತಿಗಳು,ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು,ಶಾಲೆಯಲ್ಲಿರುವ ಹೊಲಿಗೆಯಂತ್ರ ಇತ್ಯಾದಿ  ಶಾಲಾ ಹೆಣ್ಮಕ್ಕಳ ವೃದ್ಧಿಗೆ ಪೂರಕವಾದ ಹತ್ತುಹಲವು ಯೋಜನೆಗಳನ್ನು ಹುಟ್ಟುಹಾಕುವಲ್ಲಿ ಜಯಶೀಲರಾಗಿರುವರು.ಇವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ 
ಸುಂದರವಾದ ಬರವಣಿಗೆ, ಅಭಿನಯಗೀತೆಗಳು ಕಲಿಸುವ ಬೋಧನ ರೀತಿಗಳು ಮಕ್ಕಳ(ಎಳೆಯ ಚಿಣ್ಣರ ಮನಸ್ಸನ್ನು ಗೆದ್ದಿವೆ.)                             
                                 ಲಿಖಿತಾ.ಕೆ.ಎನ್
                                  7ನೇ ತರಗತಿ


7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
                
                                   ಕೆ.ಶಿವರಾಮ್ ಭಟ್ 
                                    ಸೌರಭ ಮನೆ,
                                    ಇರ್ದೆ ಗ್ರಾಮ,
                                    ಅಂಚೆ:ಬೆಟ್ಟಂಪಾಡಿ,
                                    ಪುತ್ತೊರು ತಾಲೂಕು.೫೭೪೨೫೯
ವಿದ್ಯಾಭ್ಯಾಸ-ಬಿ.ಎ(1981)ಎಂ.ಎ(ಸಂಸ್ಕೃತ)
ಕುಂಬಳೆ ಉಪಜಿಲ್ಲಾ ಸಂಸ್ಕೃತ ಕೌನ್ಸಿಲ್ ಸೆಕ್ರೆಟರಿ ಕಾಸರಗೋಡು ಜಿಲ್ಲಾ ಸಂಸ್ಕೃತಾಧ್ಯಾಪಕ ಫೆಢರೇಶನ್‌ನ ಪದಾಧಿಕಾರ ಕ್ಲಸ್ತರ್ ರಿಸೊರ್ಸ್ ಡಿಸ್ಟ್ರಿಕ್ಟ್ ರಿಸೊರ್ಸ್
ಸ್ಟೇಟ್ ರಿಸೊರ್ಸ್,ಸಂಸ್ಕೃತ ಸಹವಾಸ ಕ್ಯಾಂಪ್ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ವೆಶ್ಚನ್ ಪೇಪರ್ ತಯಾರಿಯಲ್ಲಿ ಸಹಕಾರ
ಸ್ಕಾಲರ್‌ಶಿಪ್ ಪರೀಕ್ಷೆಯ ಪರೀಕ್ಷಕನಾಗ ಸಹಕಾರ.
ಕಸರಗೋಡು,ಮಂಜೇಶ್ವರ ಉಪಜಿಲ್ಲಾ ಸಂಸ್ಕೃತ ಕಲೋತ್ಸವಗಳಲ್ಲಿ ತೀರ್ಮಾನಕಾರಾಗಿ ಸೇವೆ
ಡಯಟ್‌ನಿಂದ ನಿರ್ಮಿತ ಸಂಸ್ಕೃತ ವಾಚನಾ ಮಂಜರಿ ಗೆ ಸಾಹಿತ್ಯ ನಿರ್ಮಾಣ.
ಪಠ್ಯಪುಸ್ತಕ ತಯಾರಿ  ಸಂಸ್ಕೃ-ಕನ್ನಡ ಶಬ್ದಕೋಶ ಭಾಷಾಂತರಕ್ಕೆ ಸಹಕಾರ  
ಕೊಜೀಕೋಡ್ ನಿಂದ ಪ್ರಕಾಶನಗೊಳ್ಳುವ ಸಂಸ್ಕೃತ ಮಾಸಪತ್ರಿಕೆ ರಸನಾದ ಸಲಹಾಮಂಡಳಿ ಸದಸ್ಯತನ
ಸಂಸ್ಕೃತ ಸಂಭಾಷಣ ಸಂದೇಶ, ರಸನಾ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸಗಳು-ಅಂಚೆ ಚೀಟಿ ಸಂಗ್ರಹ.
ಸಂಸ್ಕೃತ ಪ್ರಚಾರಕ್ಕಾಗಿ ವಿವಿಧ ಪರೀಕ್ಷೆಗಳಿಗೆ ಮಕ್ಕಳನ್ನು ತರಬೇತು ಗೊಳಿಸುವುದು.
ಕೆ.ಶಿವರಾಮ್ ಭಟ್
ನಮ್ಮ ಶಾಲೆಯಲ್ಲಿ ಸಾಧಾರಣ ಹತ್ತು ಜನ ಅಧ್ಯಾಪಕರಿದ್ದಾರೆ ಇವರಲ್ಲಿ ಒಬ್ಬರು ಶಿವರಾಮ್ ಮಾಸ್ಟರ್.ಇವರು ಸಂಸ್ಕೃತ ಪಾಠವನ್ನು ರ್ನಿವಹಿಸುತಿದ್ದಾರೆ. ಇವರನ್ನು ನಾವು ಸಂಕ್ರತಪಂಡಿತರು ಎಂದರೂ ತಪ್ಪಗಲಾರದು.
ಇತ್ತೀಚೆಗೆ ಬೆಳ್ಳೂರಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಸಂಸ್ಕ್ರತೋತ್ಸವದಲ್ಲಿ[ಯು.ಪಿ]ಅತೀ ಹೆಚ್ಚು ಅಂಕ ಪಡೆದು ಪ್ರಥಮಸ್ಥಾನ ಪಡೆದಿರುವುದು ಎಲ್ಲರಿಗೂ ತಿಳಿದ ವಿಚಾರ.ಇದರ ಹಿಂದಿರುವ ಪರಿಶ್ರಮ ನಮ್ಮದಲ್ಲ,ಸಂಸ್ಕೃತ ಅಧ್ಯಾಪಕರಾದ ಕೆ.ಶಿವರಾಂ ಮಾಸ್ಟರದ್ದು. ನಾವು ಪ್ರಥಮ ಸ್ಥಾನ ಪಡೆಯಲು ಅಧ್ಯಾಪಕರು ತುಂಬಾ ಶ್ರಮ ಪಟ್ಟಿದ್ದಾರೆ.
ಇನ್ನು ಇವರ ಬಗ್ಗೆ ಹೇಳಬೇಕಾದರೆ ಇವರು ಸಂಸ್ಕೃತದ ನಡೆದಾಡುವ ವಿಶ್ವಕೋಶ ಎಂಬುದಾಗಿ ನಾನು ತಿಳಿಸಬಯಸುತೇನೆ.ಸರಳ ವ್ಯಕ್ತಿತ್ವ,ಸರಳ ಜೀವನ,ಉನ್ನತ ಚಿಂತನೆ ಇದು ಇವರ ಸೊತ್ತುಗಳು.ಇವರು ಶಾಂತಿ ಪ್ರೀಯರು.ಸಮಯವನ್ನು ಹೇಗೆ ಬಳಸಿಕೊಳ್ಳ ಬೇಕೆಂದು ಶ್ರೀಯುತರಿಂದಲೇ ಕಲಿಯಬೇಕು.ಒಂದು ನಿಮಿಷ ಸಮಯ ಸಿಕ್ಕಿದರೂ ಅದನ್ನು ದುರುಪಯೋಗ ಪಡಿಸದೇ ತನ್ನನ್ನು ಸದ್ವಿಚಾರದಲ್ಲಿ ತೊಡಗಿಸಿ ಕೊಳ್ಳುವ ಕ್ರಿಯಾಶೀಲ ವ್ಯಕ್ತಿ. ಆ ಬಾಲ ವೃದ್ಧರಿಗೂ ಪ್ರಿಯರು.ನಮ್ಮ ಸಂಸ್ಥೆಯ ಸಂಚಯಿಕಾ ವ್ಯವಸ್ಥೆಯ ಶಿಲ್ಪವಿದ್ಯಾರ್ಥಿಗಳಲ್ಲಿಬಹಳ ಆತ್ಮೀಯತೆಯಿಂದ ವ್ಯವಹರಿಸುವವರು ಇವರು ನಮ್ಮ ಸಂಸ್ಥೆಯ ಹೆಮ್ಮೆಯ ಶಿಕ್ಷಕರು ಎಂದು ಹೇಳಲು ಹೆಮ್ಮೆ ಪಡುತ್ತಿದ್ದೇನೆ.
                                       ಪ್ರಣಮ್ಯಾ.ಯಂ.ಎಸ್.
                                        7ನೇ ತರಗತೀ                                                           
































Thursday, March 5, 2015

                       ಶಾಲಾ ತರಕಾರಿ ತೋಟ ನಿರೀಕ್ಷಿಸುತ್ತಿರುವ ಕೃಷಿ ಅಧಿಕಾರಿ ತಂಡ 
ಫಸಲಿನ ಮುಂದೆ ಮಕ್ಕಳ ನಗುಮುಖ  





ಪಂಚಾಯತ್  ಮಟ್ಟದಲ್ಲಿ  ಏರ್ಪಡಿಸಿದ'  ಆಹಾರ  ಸ್ವಾವಲಂಬನೆಯ  ಕೈತೋಟವೂ' ಎಂಬ  ವಿಷಯದಲ್ಲಿ  ಮಂಡಿಸಿದ ಸೆಮಿನಾರ್  ಮಂಡನೆಯಲ್ಲಿ  ನಮ್ಮ ಸಲ ವಿದ್ಯಾರ್ಥಿ ಗಳು  ಪ್ರಥಮ  ಸ್ಥಾನ ಪಡೆದಿರುವರು 


ಸಾವಯವ  ಗೊಬ್ಬರ  ಬಳಸಿ  ಬೆಳೆಸಿದ  ತಾಜಾ  ತರಕಾರಿ  ನೋಡ  ಬನ್ನಿ  ಮಕ್ಕಳ  ಕೈತೋಟವ 











ಶ್ರಮಕ್ಕೆ ದೊರೆತ ಪ್ರತಿಫಲ 

ವ್ಯವಹಾರಿಕ  ತಿಳುವಳಿಕೆ ತರಕಾರಿ ಕೃಷಿಯಿಂದ - ಮಕ್ಕಳಿಂದಲೇ ಸ್ವತಃ ತೂಕ ಮಾಡಿ ತರಕಾರಿ  ಮಾರಾಟ