Thursday, October 2, 2014

ನಾಡ ಹಬ್ಬ ದಸರಾ ಆಚರಣೆ 
ಕನ್ನಡಿಗರ ನಾಡ ಹಬ್ಬ ದಸರಾವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ದೀಪ ಜ್ವಾಲನೆಯ ಮೂಲಕ ಉದ್ಘಾಟಿಸಿ ’ಕನ್ನಡದ ಮಣ್ಣಾದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಕನ್ನಡಿಗರಾಗಿದ್ದು, ಕನ್ನಡಾಭಿಮಾನಿಗಳಾದ ನಾವು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂಬ ಸಂದೇಶವನ್ನು ನೀಡಿದರು. ಶಾಲಾ ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ರವರು ನಾಡಹಬ್ಬ ಆಚರಣೆಯ ಔಚಿತ್ಯವನ್ನು ತಿಳಿಸಿಕೊಟ್ಟರು.
ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಗೀತೆ, ಕಥೆ, ಜಾನಪದ ಹಾಡು, ನಾಡಗೀತೆ, ಹುಲಿವೇಷ ಇತ್ಯಾದಿಗಳನ್ನು ಮಕ್ಕಳು ಪ್ರಸ್ತುತಪಡಿಸಿದರು. ಜ್ಯೋತಿ ಮೆಡಿಕಲ್ಸ್ ಪೆರ್ಲ ಮಾಲಕರಾದ ಡಾ.ಶಂಕರ ನಾರಾಯಣ ಭಟ್ ರವರು ’ಹಬ್ಬಗಳ ಆಚರಣೆಯಿಂದ ಹಬ್ಬದ ಮಹತ್ವವು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಿ ಕಲೆ, ಸಂಸ್ಕೃತಿಯು ಶಾಶ್ವತವಾಗಿ ಉಳಿಯುತ್ತದೆ’ ಎಂದು ನುಡಿದರು. ನಮ್ಮ ಶಾಲಾ ರಕ್ಷಕ ಬಳಗದವರಾದ ಶ್ರೀ ರಾಮಚಂದ್ರ ಮಣಿಯಾಣಿಯವರಿಂದ ಸತ್ಯ ಹರಿಶ್ಚಂದ್ರ ಕಥಾ ಭಾಗದ ಹರಿಕಥೆ ನಡೆಯಿತು. ಕುಮಾರಿ ಪ್ರಣಮ್ಯಾ ಹಾಗೂ ಜೀವಿತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ವಂದನಾರ್ಪಣೆ ಗೈದರು.
 


 


 


No comments:

Post a Comment