Monday, October 3, 2011

ಕಾಡಿನಲ್ಲೊಂದು ಹಗಲು" ಮತ್ತು "ಬನ್ನಿ; ಗ್ರಾಮ ಸುತ್ತೋಣ"
ಎಪ್ರಿಲ್ 2
ಬೇಸಗೆ ರಜೆಯಲ್ಲಿ "ಕಾಡಿನಲ್ಲೊಂದು ಹಗಲು" ಮತ್ತು "ಬನ್ನಿ; ಗ್ರಾಮ ಸುತ್ತೋಣ" ಎಂಬಎರಡು ದಿನಗಳ ಅಪರೂಪದ ಕಾರ್ಯಕ್ರಮ ಜರಗಿತು.ಇದರ ಅಂಗವಾಗಿ ವಾಣೀನಗರದಲ್ಲಿ ಕೇಶವ ಆಚಾರ್ಯರ ಶಾರದಾ ಸರ್ಜಿಕಲ್ಸ್,ವಾಣೀನಗರ ಸುಂದರ ಅವರು ಮಕ್ಕಳಿಗೆ ಕಾಡಿನ ವಿವಿಧ ಗಿಡ ಮೂಲಿಕೆಗಳ ಮತ್ತು ಮೋಪಿನ ಮರಗಳ ಪರಿಚಯ ಮಾಡಿದರು.ವನಭೋಜನ, ನಾನಾ ಆಟಗಳು,ಜಾಂಬ್ರಿ ಗುಹೆ ಸಂದರ್ಶನ- ಮಕ್ಕಳಲ್ಲಿ ಹೊಸ ಸಂಚಲನವನ್ನುಂಟು ಮಾಡಿತು.
ಎಪ್ರಿಲ್ 3
ಎರಡನೇ ದಿನ ಉದ್ಯಮಿ ಶ್ರೀ ಸಚ್ಚಿದಾನಂದ ಖಂಡೇರಿಯವರ "ಬೇಕರಿ ಉತ್ಪನ್ನ" ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಆ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಮೊದಲಿನ ಹಲವು ಹಂತಗಳ ಪರಿಚಯ ಮಾಡಿಕೊಳ್ಳಲಾಯಿತು. ಗಣೇಶ್ ಭಟ್ ಸಾಲೆಯವರ ಅಡಿಕೆ ಹಾಳೆತಟ್ಟೆ ನಿರ್ಮಾಣ ಘಟಕವನ್ನು ಸಂದರ್ಶಿಸಲಾಯಿತು.ಮೊಗೇರು ಭಾಸ್ಕರ ನಾಯಕ್ ರವರ ಹೈನುಗಾರಿಕ ಹಲವು ಮಜಲುಗಳನ್ನು ಪರಿಚಯಿಸಿಕೊಳ್ಳಲಾಯಿತು. ಅಡ್ಕಸ್ಥಳ ಹೊಳೆಯ ಈಜಿನಾಟ, ಮೋಜಿನ ಅನುಭವನ್ನಿತ್ತರೆ,  ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಸಿರಿಯ ಅಣೆಕಟ್ಟು ಇವುಗಳ ವೀಕ್ಷಣೆ ಎಲ್ಲ್ರರ "ದಿಲ್ ಖುಶ್ "ಗೆ ಕಾರಣವಾಯಿತು.ಒಟ್ಟಿನಲ್ಲಿ ಈ ಎರಡು ದಿನಗಳು ಮಕ್ಕಳು ಅಧ್ಯಾಪಕರಾದಿಯಾಗಿ ಎಲ್ಲರಿಗೂ ಹೊಸ ಅನುಭವಕ್ಕೆ ಸಾಕ್ಷಿಯಾಯಿತು.ಮಕ್ಕಳ ರಕ್ಷಕರು ನಮ್ಮ ಈ ಪಯಣದಲ್ಲಿ ಜೊತೆಗಾರರಾದುದು ಉಲ್ಲೇಖನೀಯ.

No comments:

Post a Comment