Tuesday, October 4, 2011

                                                     "ಮುತ್ತು ಮಾಲಾ"
    ಪರಿಶಿಷ್ಟಜಾತಿ ಹಾಗು ಪರಿಶಿಷ್ಟವರ್ಗಕ್ಕೆ ಸೇರಿದ ಮಕ್ಕಳಿಗಾಗಿ ಕಲಿಕೆ ಮತ್ತು ಗಳಿಕೆಯ ದೃಷ್ಟಿಕೋನವನ್ನಿಟ್ಟುಕೊಂಡು ಎಸ್.ಎಸ್.ಎ.ಯ ವತಿಯಿಂದ ನಡೆಸಲ್ಪಟ್ಟ ಮುತ್ತು ಮಾಲಾ ಎಂಬ ಎರಡು ದಿನದ ವಿಶೇಷ ಕಾರ್ಯಾಗಾರ ಮಾರ್ಚ್ ತಿಂಗಳ ೧೯,೨೦ ರಂದು ಜರಗಿತು.ಪಂಚಾಯತು ವ್ಯಾಪ್ತಿಗೆ ಸೇರಿದ ವಿವಿಧ ಶಾಲೆಗಳಿಂದ ಒಟ್ಟು ೭೦ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಳೆ ಬಿ.ಆರ್.ಸಿ. ಪ್ರೋಗ್ರಾಂ ಆಫೀಸರ್ ಶ್ರೀ ರವೀಂದ್ರ ಮಾಸ್ಟರ್ ನೆರವೇರಿಸಿದರು.ಮಕ್ಕಳನ್ನು ಗುಂಪುಗಳಾಗಿ ಮಾಡಿ ಪ್ರತಿ ಗುಂಪಿಗೂ ಎಲ್ಲಾ ನಿರ್ಮಾಣ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಸೆಶನ್‌ಗಳಲ್ಲಿ ತರಬೇತಿ ನೀಡಲಾಯಿತು.
    ಪ್ರತಿಯೊಂದು ನಿರ್ಮಾಣ ಚಟುವಟಿಕೆಯ ಹಂತದಲ್ಲೂ ಉತ್ಪನ್ನದ ಉಪಯೋಗ,ಬಳಸಿದ ಸಾಮಾಗಿ, ತಯಾರಿಸುವ ವಿಧಾನಗಳ ಕುರಿತು ಚರ್ಚಿಸಲಾಯಿತು.ಉತ್ಪನ್ನದ ತಯಾರಿಯ ಬಳಿಕ ಉತ್ಪನ್ನದ ಖರ್ಚುವೆಚ್ಚ, ಜಾಹೀರಾತು ಬರಹ,ಮಾರಾಟದ ಕುರಿತು ಚರ್ಚಿಸಿ ಬೆಲೆ ನಿರ್ಧರಿಸುವುದರ ಮೂಲಕ ಗಣಿತದ ಆಶಯವನ್ನು ಪ್ರಸ್ತುತಪಡಿಸಲಾಯಿತು.
ಎರಡು ದಿನದ ನಿರ್ಮಾಣ ಚಟುವಟಿಕೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಪೂರ್ಣಿಮ ಕೊಡುಮಾಡು, ಶ್ರೀಮತಿ ಅರ್ಚನಾ, ಕುಮಾರಿ ಮೋಹಿನಿ, ನೋಸರ್ ಇಂಡಿಯಾ ಸಂಘದ ಸದಸ್ಯೆ ಫೌಸಿಯಾ ಮತ್ತು ಬಳಗದವರು ಸಹಕರಿಸಿದರು.
    ಶಿಬಿರದ ಕೊನೆಯಲ್ಲಿಸಮಾರೋಪ ಸಮಾರಂಭ ಹಾಗು ಮಾರಾಟ ಮೇಳ ಜರಗಿತು.ಮಕ್ಕಳ ಉತ್ಪನ್ನವಾದ ಫಿನೋಯಿಲ್, ಸಾಬೂನು, ಮುತ್ತಿನಹಾರಗಳು ಗ್ರಾಹಕರ ಮನ ಸೆಳೆದು ಬಿರುಸಿನ ವ್ಯಾಪಾರ ನಡೆಯಿತು.










 

No comments:

Post a Comment