Wednesday, August 22, 2012

                     ಶಾಲಾ ಮಟ್ಟದ ಸಹವಾಸ ಶಿಬಿರ 'ಸಂಭ್ರಮ' 
   
         ಸರ್ವಶಿಕ್ಷಾ ಅಭಿಯಾನದ ಆಶ್ರಯದಲ್ಲಿ ಶಾಲಾ ಮಟ್ಟದ ದ್ವಿದಿನ ವಾಸ್ಥವ್ಯ ಶಿಬಿರವು ಸ್ವರ್ಗದ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಮಾರ್ಚ್ 2 ಮತ್ತು 3 ರಂದು ಉತ್ತಮವಾಗಿ ಜರಗಿತು.ಎಣ್ಮಕಜೆ ಗ್ರಾಮ ಪಂಚಾಯತಿನ ಸ್ಥಾಯೀ ಸಮಿತಿ ಸದಸ್ಯರಾದ ಶ್ರೀಯುತ ಬಿ.ಎಸ್.ಗಾಂಬೀರ್ ರವರು ದೀಪ ಜ್ವಾಲನೆಯೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಶೀಲ ಸ್ವರ್ಗ ಅಧ್ಯಕ್ಷತೆ ವಹಿಸಿದ್ದರು.ಸ್ಥಳೀಯ ವಾರ್ಡ್ ಸದಸ್ಯ ರವಿ ಕೆ ಅವರು ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ಟರು ಸ್ವಾಗತಿಸಿ,ಶಿಕ್ಷಕ ಸಚ್ಚಿದಾನಂದರು ವಂದಿಸಿದರು.ವಿದ್ಯಾರ್ಥಿನಿ ಕು/ರಶ್ಮಿ ಎಸ್.ಜಿ.ಕಾರ್ಯಕ್ರಮ ನಿರೂಪಿಸಿದಳು.  
       ಸಂದರ್ಶನ-ವಿವರಸಂಗ್ರಹ-ವರದಿ ತಯಾರಿ-ಎಂಬ ಮುಖ್ಯ ಉದ್ದೇಶವನ್ನಿರಿಸಿ ನಡೆಸಿದ ಈ  ಶಿಬಿರದಲ್ಲಿ ಪೆರ್ಲದ ಅನುಪಮ ಗಂಗಾ ಫಾರ್ಮ್ಸ್ ಎಂಬ ಹೈನುಗಾರಿಕಾ ಘಟಕಕ್ಕೆ ಭೇಟಿ ನೀಡಲು ಅಗತ್ಯವಾದ ಪ್ರಶ್ನೆಗಳನ್ನು ಮಕ್ಕಳು ಗುಂಪಿನಲ್ಲಿ ತಯಾರಿಸಿದರು.ಅಲ್ಲಿನ ಹೈಟೆಕ್ ಹಟ್ಟಿಯಲ್ಲಿರುವ 25 ರಾಸುಗಳು,ನೀರು ಕುಡಿಯುವ ವ್ಯವಸ್ಥೆ,ಹಾಲು ಕರೆಯುವ ಮಿಶನುಗಳನ್ನು ಪ್ರತ್ಯಕ್ಷ ನೋಡಿ ಮಾಹಿತಿ ಸಂಗ್ರಹಿಸಿ,ಪ್ರತಿಯೊಂದು ಗುಂಪಿನಿಂದಲೂ ವರದಿ ಮಂಡಿಸಲಾಯಿತು.
ಶಿಕ್ಷಕ ಪದ್ಮನಾಭರ ನೇತೃತ್ವದಲ್ಲಿ ನಿರ್ಮಾಣಗೊಂಡ ಗಾಳಿಪಟವನ್ನು ಸಮೀಪದ ತೂಂಬಡ್ಕ ದಲ್ಲಿ ಎತ್ತರೆತ್ತರಕ್ಕೆ ಹಾರಿಸಿ  ಮಕ್ಕಳು ಸಂಭ್ರಮಿಸಿದರು.

               ತೆಂಗಿನ ಮರ ಹತ್ತುವುದು,ತಲೆ ಕೆಳಗೆ ಮಾಡಿ ನಿಲ್ಲುವುದು,ಹಗ್ಗದಲ್ಲಿ ಮರ ಏರುವುದು,ಏಣಿ ಏರುವುದು ಮುಂತಾದ ಸಾಹಸ ಪ್ರದರ್ಶನಗಳು ಮಕ್ಕಳಲ್ಲಿ  ಸಾಧಿಸಿದರೆ ಸಬಳವನ್ನೂ ನುಂಗಬಹುದುಎಂಬ ಭಾವನೆಯನ್ನು ಮೂಡಿಸಿದವ .
             ರಾತ್ರಿ ನಡೆದ ಶಿಬಿರಾಗ್ನಿಯ  ಎಂ.ಪಿ.ಟಿ.ಎ. ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆ ಅವರು ಉದ್ಘಾಟಿಸಿದರು.ಅಧ್ಯಾಪಕ ಶ್ರೀ ಸಚ್ಚಿದಾನಂದರು ಶಿಬಿರದ ನೇತೃತ್ವ ವಹಿಸಿದ್ದರು.ಯು.ಪಿ. ವಿಭಾಗದ 66 ಮಂದಿ ಮಕ್ಕಳು ಭಾಗವಹಿಸಿದ ಈ ಶಿಬಿರದಲ್ಲಿ ನಡೆದ ಕ್ರೀಡಾ ಚಟುವಟಿಕೆಗಳು ಮಕ್ಕಳ ಬೌದ್ಧಿಕ ವಿಕಾಸಕ್ಕೆ ಕಾರಣವಾಯಿತು.
                   

No comments:

Post a Comment