Friday, December 12, 2014



ಬಹುಮುಖ ಪ್ರತಿಭೆ - ಮಂಜರಿ ನವೀನ್,
ಹೆಣ್ಣು ಸಂಸಾರದ ಕಣ್ಣು ಎಂಬಂತೆ ಇಂದು ಹೆಣ್ಣು ಸಮಾಜದ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿರುತ್ತಾಳೆ. ಅಲ್ಲದೆ ಹೆಣ್ಣಿನ ಪ್ರತಿಭೆಯನ್ನು ಇಂದಿನ ಸಮಾಜ ಮುಕ್ತವಾಗಿ ಸ್ವೀಕರಿಸಿದೆ.ಎಲೆ ಮರೆಯ ಕಾಯಿಯಂತೆ ತನ್ನ ಕೌಶಲ್ಯದ ಬಗೆಗೆ ಯಾವುದೇ ಬಿದುವಿನ ವೇಳೆಯಲ್ಲಿ ಹಲವು ರೀತಿಯಕರಕುಶಲ ವಸ್ತುಗಳನ್ನು ಸದ್ದುಗದ್ದಲವಿಲ್ಲದೆ ತಯಾರಿಸುತ್ತಿರುವವರು ಸ್ವರ್ಗದ ಮಂಜರಿನವೀನ್.ಸೌಮ್ಯಸ್ವಭಾವ ಹೊಂದಿದ ಇವರು ಕಸೂತಿ,ಫ್ಯಾಬ್ರಿಕ್ ಪೈಂಟಿಂಗ್, ಕ್ಲೇ ಮಾಡಲಿಂಗ್,ಕಸದಿಂದ ರಸ, ಚಿತ್ರಕಲೆ,ಸಾಹಿತ್ಯಗಳಲ್ಲಿ ತಲ್ಲೀನರು.ನಿರುಪಯುಕ್ತ ವಸ್ತುಗಳಿಂದ ತನ್ನ ಭಾವನೆಗಳನ್ನು ಮೂರ್ತ ರೂಪಕ್ಕೆ ತರುವ ಕಲಾವಿದೆ.ಕವನಗಳ್ನ್ನು ಬರೆಯುವ ಹವ್ಯಾಸ ಹೊಂದಿರುವ ಇಅವರ ಕವನಗಳು ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದಿಂದ ಪ್ರಕಾಶಿಸಿದ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಪ್ರಕಟಗೊಂಡಿವೆ. ಎಸ್.ವಿ.ಎ.ಯು.ಪಿ.ಶಾಲೆ ಸ್ವರ್ಗದ ದಶಮಾನೋತ್ಸವ ಹಾಗೂ ೨೦೧೪ ರಂದು ನವಂಬರ್ ೧೪ ರಂದು ಏರ್ಪಡಿಸಿದ ವಸ್ತು ಪ್ರದರ್ಶನದಲ್ಲಿ ಅವರ ಕೈ ಚಳಕದಿಂದ ಹೊರಬಂದ ವಸ್ತುಗಳನ್ನು ಕಂಡು ಅನೇಕರು ಮೆಚ್ಚಿಕೊಂಡಿದ್ದಾರೆ.
ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಾತೃಸಂಗಮದ ಅಧ್ಯಕ್ಷತೆಯಾಗಿರುವರು ಇವರು ಶಾಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ,ತನ್ನದೇ ಅದ ಸಲಹೆಗಳನ್ನು ಮಕ್ಕಳ ಚಟುವಟಿಕೆಗಳಿಗೆ ನೀಡುತ್ತಾ ಇರುವವರು.ಕಳೆದ ೨-೩ ವರ್ಷಗಳಿಂದ ಶಾಲಾ ವಿಧ್ಯಾರ್ಥಿಗಳಿಗೆ ವೃತಿ ಪರಿಚಯದ ಮೇಳದ ಸ್ವರ್ಧೆಗಳ ವಿವಿಧ ಪ್ರಕಾರಗಳಿಗೆ ನಿರಂತರ ತರಬೇತಿಯನ್ನು ನೀಡುತಿದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉತ್ತಮ ರೀತಿಯಲ್ಲಿ ತರಗತಿಗಳನ್ನು ನಡೆಸಿ ಕೊಡುತ್ತಿದ್ದಾರೆ.ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುವಲ್ ಆರ್ಟ್ಸ್(ಸಿ.ಎ.ವಿ.ಎ)ಕಾಲೇಜಿನಲ್ಲಿ ೨ವರ್ಷಗಳ ಪೌಂಡೇಶನ್ ತರಬೇತಿಯನ್ನು ಮುಗಿಸಿದ್ದು,ಆರ್ಥಿಕ ಅಡಚಣೆಯಿಂದಾಗಿ ಮುಂದಿನ ೩ ವರ್ಷಗಳ ಪದವಿಯನ್ನು ಪೂರೈಸಲು ಸಾಧ್ಯವಾಗದಿದ್ದರೂ ಕಲೆ ಹಾಗೂ ಪುಸ್ತಕಗಳ ಮೇಲಿರುವ ಅವರ ಆಸಕ್ತಿ ಕರಗಲಾರದ್ದು.ಕಲೆಗಳನ್ನು ಕರಗತ ಮಾಡಿಕೊಳ್ಳುವ ಶಕ್ತಿ ಕೆಲವರಿಗಷ್ಟೇ ಬರುತ್ತದೆ. ಆದರೆ ಹಲವು ವಲಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು ಅಪರೂಪಕ್ಕೆ ಒಬ್ಬರು. ಇದಕ್ಕೊಂದು ಸ್ವಷ್ಟ ನಿದರ್ಶನ ಎಂಬಂತೆ ಕರಕುಶಲ ವಸ್ತುಗಳನ್ನು ಹಾಗೂ ಬೀಡ್ಸ್‌ವರ್ಕ್,ಕುಂದನ್‌ವರ್ಕ್,ಫ್ಯಾಬ್ರಿಕ್ ಪೈಂಟ್‌ಗಳನ್ನುಸೀರೆ-ಬ್ಲೌಸ್,ಚೂಡಿದಾರ,ಲಂಗ-ಬ್ಲೌಸ್,ಟೀಶರ್ಟ್,ಬೆಡ್‌ದಿಂಬಿನ ಕವರುಗಳ ಮೇಲೆ ಗ್ರಾಹಕರ ಬೇಡಿಕೆಗನುಸಾರವಾಗಿ ಮಾಡಿಕೊಡುತ್ತಾರೆ. ಆಸಕ್ತರು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ವಿಶೃಂಖಲಾ ಡಿಸೈನರ್ ಫ್ಯಾಬ್ಸ್ -09539200723,08971103498

No comments:

Post a Comment