Wednesday, October 28, 2015



        ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಜರಗಿತು. ಗಾಂಧೀಜಿಯವರ ರಘುಪತಿ ರಾಘವ ರಾಜಾರಾಂಪ್ರಾರ್ಥನೆಯನ್ನು ಎಲ್ಲರು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳಾದ ಅಬೂಬಕ್ಕರ್ ಸಿದ್ಧಿಕ್ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ವೈ ಸುಭ್ರಹ್ಮಣ್ಯ ಭಟ್‌ರವರು ಗಾಂಧೀ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳೀ ಕೃಷ್ಣ ಹಾಗೂ ವೈಷ್ಣವ್ ವೈ ರವರು ಈ ಮಹಾನ್ ವ್ಯಕ್ತಿಗಳ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಉತ್ತಮ ಹೈನುಗಾರ, ಕೃಷಿಕ, ಉದ್ಯಮಿಯಾಗಿ ಸವ್ಯಸಾಚಿ ಎನಿಸಿಕೊಂಡಿರುವ ಅಬೂಬಕ್ಕರ್ ಸಿದ್ಧಿಕ್ ಪೆರ್ಲರವರು ನಮ್ಮ ಶಾಲೆಗೆ ಸಿ.ಎಫ್.ಎಲ್ ಬಲ್ಬ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಅವರು ಸಿ.ಎಫ್.ಎಲ್ ಬಲ್ಬ್‌ಗಳನ್ನು ಬಳಸಿ, ವಿದ್ಯುತ್ ಉಳಿಸಿ ಎಂಬ ಸಂದೇಶವನ್ನು ನೀಡಿದರು. ಇದು ಮಕ್ಕಳ ಮೂಲಕ ಪ್ರತಿ ಮನೆಗಳಿಗೂ ತಲುಪುವಂತಾಗಲಿ ಎಂದರು. ಶಾಲಾ ವ್ಯವಸ್ಥಾಪಕರು ಅತಿಥಿಗಳಿಗೆ ಸ್ಮರಣೆಯಿತ್ತು ಗೌರವಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರಿಯ ಸರಳಾಯ, ಮಾತ್ರ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್‌ರವರು ಪ್ರಾಸ್ತಾವಿಕದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎ.ಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಗಾಂಧೀಜಿಯವರ ಕನಸಾದ ಸೇವಾದಿನದ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಲು, ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಶಿಕ್ಷಕರ ನೇತೃತ್ವದಲ್ಲಿ ನಡೆಸಲಾಯಿತು. ಲಘು ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು. 





No comments:

Post a Comment