Tuesday, September 8, 2015

 ಶಿಕ್ಷಕರ  ದಿನಾಚರಣೆ
ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ರಕ್ಷಕ ಶಿಕ್ಷಕ ಸಂಘ, ಮಾತೃ ಮಂಡಳಿ, ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನೊಳಗೊಂಡು ಈ ಪ್ರದೇಶದ ಹಿರಿಯ ಶಿಕ್ಷಕರಾದ ಖ್ಯಾತ ಶಿಶು ಸಾಹಿತಿ ವಿ.ಮ ಭಟ್ ಅಡ್ಯನಡ್ಕ ಇವರ ಸ್ವಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ’ಜಗದ್ಗುರುವಾಗಿರುವ ಶ್ರೀಕೃಷ್ಣನ ಜನ್ಮ ದಿನಾಚರಣೆಯಂದೇ ಶಿಕ್ಷಕರ ದಿನಾಚರಣೆಯು ಮೇಳೈಸಿದುದು ನಮ್ಮೆಲ್ಲರ ಯೋಗವಾಗಿದೆ’. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮನುಷ್ಯ ಜೀವನದ ನಾನಾ ಮಜಲುಗಳಲ್ಲಿರಬೇಕಾದ ಸ್ಥಿತಿಗತಿಗಳನ್ನು ವಿವರಿಸಿದರೆ, ಶ್ರೀ ರಾಮನು ಸ್ವತಃ ಜೀವನಕ್ಕೆ ಅನುಸರಿಸಲು ಯೋಗ್ಯವಾದುದು. ಯಾರು ಸಮಾಜದಲ್ಲಿ ತನ್ನನ್ನು ಪರರಿಗೊಸ್ಕರವಾಗಿ ಸಮರ್ಪಿಸಿಕೊಳ್ಳುತ್ತಾರೋ ಅವರಲ್ಲಿ ನನ್ನ ಅಂಕ ಅಧಿಕವಾಗಿದೆ ಎಂಬುದಾಗಿ ಶ್ರೀಕೃಷ್ಣನು ವಿಭೂತಿ ಯೋಗ ದಲ್ಲಿ ಉಲ್ಲೇಖಿಸುತ್ತಾನೆ. ಅಂತಹ ವಿಭೂತಿ ಪುರುಷರಾದ ಡಾ|ಎಸ್ ರಾಧಾಕೃಷ್ಣನ್ ರವರ ಬದುಕು ನಮಗೆಲ್ಲರಿಗೂ ಅನುಸರನೀಯವಾಗಲಿ, ಶಿಕ್ಷಕರನ್ನು ಗೌರವಿಸುವುದು ಮುಂದಿನ ತಲೆಮಾರಿಗೆ ನೀಡುವ ಸಂದರ್ಭವಾಗಿದೆ. ಇಬ್ಬರು ರಾಷ್ಟ್ರಾಧ್ಯಾಕ್ಷರುಗಳಾದ ಡಾ|ಎಸ್ ರಾಧಾಕೃಷ್ಣನ್ ಮತ್ತು ಡಾ| ಎ.ಪಿ.ಜೆ ಅಬ್ದುಲ್ ಕಲಾಂರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂತಹ ಕೆಲಸಗಳು ನಿಮ್ಮ ಸಂಸ್ಥೆಯಿಂದ ನಿರಂತರ ನಡೆಯಲಿ, ನಿಮ್ಮೆಲ್ಲರ ಒಗ್ಗಟ್ಟಿನ ಫಲವೇ ಈ ರೀತಿಯ ಕಾರ್ಯಕ್ರಮಗಳ ಯಶಸ್ಸು ಎಂದು ಸಂತಸದಿಂದ ಹಾರೈಸಿದರು. ಹಾಗೆಯೇ ಇನ್ನೋರ್ವ ಹಿರಿಯ ಶಿಕ್ಷಕಿ ಶ್ರೀಮತಿ ಸೀತು ಟೀಚರ್ ಬಜಕೂಡ್ಲು ಇವರ ನಿವಾಸಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ೮೩ ರ ತನ್ನ ಇಳಿವಯಸ್ಸಿನಲ್ಲಿ ಈ ಗೌರವಾರ್ಪಣೆ ಸಮಾಜದ ಮುಖಿ ಚಿಂತನೆಯ ಫಲವಾಗಿ ಎಂದು ಸಂತಸಪಟ್ಟರು. ತಾನು ಸುದೀರ್ಘ ೩೮ ವರುಷಗಳ ಅಧ್ಯಾಪನ ವೃತ್ತಿಯಿಂದ ಬಹಳ ನೆಮ್ಮದಿ ಪಡೆದಿದೆ, ನನ್ನಿಂದ ವಿದ್ಯಾರ್ಜನೆಗೈದ ಸುಶಿಕ್ಷಿತ ಸಮಾಜದ ಕಾರಣ ಕರ್ತರಾದ ಶಿಷ್ಯರು ನನ್ನ ಜೀವನದ ಆಸ್ತಿ ಎಂಬುದಾಗಿ ತನ್ನ ಮನದಾಳದ ಮಾತುಗಳಿಂದ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್, ಪಿ.ಟಿ.ಎ. ಅಧ್ಯಕ್ಷ ಲಕ್ಷ್ಮೀಪ್ರಿಯ ಸರಳಾಯ, ಶಿಕ್ಷಕರಾದ ಕೆ.ಶಿವರಾಮ್ ಭಟ್, ಶ್ರೀಮತಿ ಗೀತಾಕುಮಾರಿ, ಶ್ರೀಮತಿ ಗೀತಾಂಜಲಿ, ಕು|ಜಯಲಕ್ಷ್ಮಿ.ಕೆ, ಶ್ರೀ ಪದ್ಮನಾಭ ಆರ್, ಶ್ರೀ ಮಿಥುನ್ ವಿ.ಆರ್, ಎಸ್.ಎನ್ ವೆಂಕಟ ವಿದ್ಯಾಸಾಗರ, ಶ್ರೀ ಸಚ್ಚಿದಾನಂದ ಎಸ್ ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು. 





No comments:

Post a Comment