Thursday, December 15, 2011

      ನಮ್ಮ ಶಾಲೆಯಲ್ಲಿ ಡಿಸೆಂಬರ್ 8 ನೇ ತಾರೀಕಿನಂದು ಸಾಯಂ ಗಂಟೆ 6.30 ರಿಂದ ಕಾಸರಗೋಡಿನ ಕಿರಣ್‌ರಾಜ್ ಹಾಗೂ ರಾಜೇಶ್ (ವಿದ್ಯಾರ್ಥಿಗಳು) ರವರು ನಿರ್ದೇಶಿಸಿ ಅಭಿನಯಿಸಿದ ಕಿರುಚಿತ್ರ ಕಾವಳ ಪ್ರದರ್ಶನಗೊಂಡಿತು. ನಮ್ಮೀ ಸಂಸ್ಥೆ ಹಾಗೂ ನೆರೆಯ ಮಾತೃಭೂಮಿಸಂಘಟನೆಯವರು ಜಂಟಿಯಾಗಿದ್ದು ಕೊಂಡು ಈ ಕಾರ್ಯಕ್ರಮವನ್ನು ಏರ್ಪಾಡಿಸಲಾಯಿತು.
         ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳು, ಮೊಬೈಲ್ ಫೋನಿನ ದುರುಪಯೋಗ, ಜೀವನವನ್ನೇ ಅಂಧಕಾರ ದತ್ತ ಕೊಂಡೊಯ್ಯುವ ವೇಶ್ಯಾವಾಟಿಕೆ, ಪರಿಣಾಮವಾಗಿ ಅನುಭವಿಸ ಬೇಕಾದ ಏಡ್ಸ್ ನಂತಹ ಮಹಾಮಾರಿ ರೋಗಗಳು ವೀಕ್ಷಕರ ಹೃದಯವನ್ನು ತಟ್ಟಿದವು. ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡಿತು. ಬಹುಸಂಖ್ಯೆಯಲ್ಲಿ ಭಾಗವಹಿಸಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
       ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಚಿತ್ರದ ಬಗ್ಗೆ ಪ್ರಾಸ್ತವಿಕ ನುಡಿಗಳನ್ನಾಡಿ ಸಿನೆಮಾಕ್ಕೆ ಚಾಲನೆಯಿತ್ತರು. ನಿರ್ದೇಶಕ ಕಿರಣ್‌ರಾಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಮಾತೃಭೂಮಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಗ್ರಹವಾದ ರೂಪೈ 2000/- ವನ್ನು ದೇಣಿಗೆಯಾಗಿ ನೀಡಲಾಯಿತು.


No comments:

Post a Comment