Wednesday, June 29, 2016


      ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜೂನ್-೧೯

ನಮ್ಮ  ಶಾಲೆಯಲ್ಲಿ ದಿನಾಂಕ ೧೯.೦೬.೨೦೧೬ ನೇ ಆದಿತ್ಯವಾರದಂದು ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ೨೦೧೫-೧೬ ನೇ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಕಳೆದ ವರ್ಷದ ಆಯವ್ಯಯ ಲೆಕ್ಕ ಪತ್ರಗಳನ್ನು ಹಾಗೂ ಊಟದ ವ್ಯವಸ್ಥೆ, ವಾಹನದ ವ್ಯವಸ್ಥೆ, ಶಿಕ್ಷಕ ಪದ್ಮನಾಭ ಆರ್ ರವರು ಮಂಡಿಸಿದರು. ವಾಚನಾಲಯದ ಸಂಚಿಕೆ ಹಾಗೂ ಗ್ರಂಥಾಲಯದ "ವರವನ್ನು ಶಿಕ್ಷಕ ಕೆ.ಶಿವರಾಮ್ ಭಟ್ ತಿಳಿಸಿದರು. 'ವಿವೇಕ' ಸಂಚಯ ವ್ಯವಸ್ಥೆಯ ಕುರಿತು ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಇವರು ಮಾಹಿತಿ ನೀಡಿದರು. ಕಂಪ್ಯೂಟರಿನ ಸ್ಥಿತಿಗತಿ ಹಾಗೂ ಈಗಿನ ಕಂಪ್ಯೂಟರಿನ ಸೌಕರ್ಯವನ್ನು ಶಿಕ್ಷಕ ಶ್ರೀ.ವೆಂಕಟ ವಿದ್ಯಾಸಾಗರರು ತಿಳಿಸಿಕೊಟ್ಟರು.  
೨೦೧೬-೧೭ ನೇ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳುವ ವಿದ್ಯಾಭ್ಯಾಸ ಪರ ಹಾಗೂ ಪಿ.ಟಿ.ಎ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಪಿ.ಟಿ.ಎ ಬಳಗದೊಂದಿಗೆ ಮುಕ್ತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾತು. 
ಈ ಸಂದರ್ಭದಲ್ಲಿ ಸ್ವರ್ಗ ಅಂಗನವಾಡಿ ವತಿಯಿಂದ ಶಿಕ್ಷಕಿ ಕುಮಾರಿ ಚಂದ್ರಾವತಿ ಇವರು ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಗ್ಲಾಸನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಹಾಗೆಯೇ ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್‌ರವರ ವತಿಂದ ಮಕ್ಕಳಿಗಾಗಿ ತರಿಸಿದ ಆಟೋಪಕರಣಗಳನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ.ಹೃಷಿಕೇಶ್ ವಿ.ಎಸ್ ಇವರು ಉಪಸ್ಥಿತರಿದ್ದರು. ವಾರ್ಡ್ ಸದಸ್ಯೆ ಕುಮಾರಿ ಚಂದ್ರಾವತಿ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಇವರು ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ಇವರು ಎಲ್ಲರನ್ನು ಸ್ವಾಗತಿಸಿ, ಶಿಕ್ಷಕ ವೆಂಕಟ ವಿದ್ಯಾಸಾಗರರು ವಂದನಾರ್ಪಣೆ ಗೈದರು. ಶಿಕ್ಷಕಿ ಶ್ರೀಮತಿ ಗೀತಾಂಜಲಿ ಇವರು ಪ್ರಾರ್ಥಿಸಿ, ಪದ್ಮನಾಭ್ ಆರ್ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಬಳಗವು ನೆರೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಉಪಹಾರವನ್ನು ಸೇವಿಸಿ ಕಾರ್ಯಕ್ರಮ ಕೊನೆಗೊಂಡಿತು. 





No comments:

Post a Comment