Wednesday, June 29, 2016


             ವಾಚನಾ ಸಪ್ತಾಹ ಉದ್ಘಾಟನೆ

ನಮ್ಮ ಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಸಂಸ್ಕರಣಾ ದಿನ ವಾಚನ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲಾ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಶ್ರೀಧರ ಭಟ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಓದುವಿಕೆ ಪಠ್ಯ ಪುಸ್ತಕಕ್ಕೆ ಸೀಮಿತವಾಗಿರದೇ ಜೀವನಕ್ಕೆ ದಾರಿದೀಪವಾಗುವ ಪತ್ರಿಕೆಗಳನ್ನು ಓದಬೇಕು, ಓದುಗಾರನಿಗೆ ಸಾಕಷ್ಟು ಪುಸ್ತಕ ಆತ್ಮೀಯ ಗೆಳೆಯನಂತಿಹುದು. ಓದು ಎಲ್ಲರ ಬಾಳಲ್ಲೂ ಪ್ರಜ್ವಲಿಸಲಿ ಎಂಬ ಶುಭ ಸಂದೇಶವನ್ನಿತ್ತರು. ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದ ಶಿಕ್ಷಕ ಶ್ರೀ ಕೆ.ಶಿವರಾಮ ಭಟ್ ರವರು ಓದುವಿಕೆಯು ಹೇಗಿರಬೇಕೆಂಬುದನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು ೭೪ ಸಂಚಿಕೆ ಹಾಗೂ ವಿವಿಧ ಪುಸ್ತಕಗಳ ಪ್ರದರ್ಶನ ನಡೆತು. ಶಾಲಾ ಮುಖ್ಯೋಪಾಧ್ಯಾರಾದ ಶ್ರೀ.ಪಿ ಶಿವರಾಮ್ ಭಟ್‌ರವರು ಪ್ರಾಸ್ತಾವಿಕದಲ್ಲಿ ಓದು ಉಸಿರಾಗಿರಬೇಕು,ಓದೋಣ,ಓದಿ ಬೆಳೆಯೋಣ ಎಂಬ ಸಂದೇಶವನ್ನು ನೀಡುವುರೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಶಿಕ್ಷಕ ಶ್ರೀ ಸಚ್ಚಿದಾನಂದ ಎಸ್ ರವರು ವಂದನಾರ್ಪಣೆ ಗೈದರು. ವಿದ್ಯಾರ್ಥಿಗಳಾದ ಮಾಸ್ಟರ್ ಪ್ರಥಮ್ ಹಾಗೂ ವೈಷ್ಣವ್ ವೈ ಕಾರ್ಯಕ್ರಮ ನಿರೂಪಿಸಿದರು.



No comments:

Post a Comment