Monday, June 29, 2015


ವಾಚನ ಸಪ್ತಾಹದ ಉದ್ಘಾಟನೆ
   ಕೇರಳದಾದ್ಯಂತ 6೦೦೦, ಗ್ರಂಥಾಲಯವನ್ನು ಸ್ಥಾಪಿಸುವುದರ ಮೂಲಕ ಓದುವ ಹವ್ಯಾಸವನ್ನು ಪ್ರಚಾರಗೊಳಿಸಿದ ಅಗಾಧ ಸಾಹಿತ್ಯಾಭಿರುಚಿಯುಳ್ಳ ಪಿ.ಎನ್ ಪಣಿಕ್ಕರ್‌ರವರ ಚರಮ ದಿನ ಜೂನ್ 19 ನ್ನು ಓದುವ ದಿನವನ್ನಾಗಿ ಆಚರಿಸಲಾಗುತ್ತದೆ, ಹಾಗೂ ಒಂದು ವಾರಗಳ ಕಾಲ ವಾಚನಾ ಸಪ್ತಾಹವನ್ನು ಆಚರಿಸುವ ಮೂಲಕ ಓದುವ ಅಭ್ಯಾಸವನ್ನು ಬಲಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ವಾಚನ ಸಪ್ತಾಹದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಹಾಗೂ ಬಿ.ಆರ್.ಸಿ ತರಬೇತುದಾರ ಶ್ರೀ ರಾಮಚಂದ್ರ ನಾಯಕ್‌ರವರು ದೀಪ ಜ್ವಾಲನೆಯೊಂದಿಗೆ ನೆರವೇರಿಸಿದರು. ಓದು, ಸೃಜನಶೀಲತೆ, ನೆನಪು ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿಯನ್ನು ಸದಾ ಆನಂದದಾಯಕವಾಗಿರುವಂತೆ ಮಾಡುತ್ತದೆ ಎಂದು ಓದಿನ ಮಹತ್ವ ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರೀಯ ಶರಳಾಯರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮಕ್ಕಳಿಂದ ಹಾಗೂ  ಶಿಕ್ಷಕರಿಂದ ಪುಸ್ತಕ ವಿಮರ್ಶೆ ನಡೆಯಿತು. ಈ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಾಸ, ಜೀವನಾಡಿ, ಸಂಗಾತಿ, ವರ್ಷಿಣಿ, ಬುತ್ತಿ, ಚುಟುಕು, ಬಾಲಮಿತ್ರ, ಗೃಹಶೋಭ, ಸುಧಾ, ವಿವೇಕ ಸಂಪದ, ತರಂಗ, ಮಂಗಳ, ಹೀಗೆ ಸುಮಾರು 75 ಸಂಚಿಕೆಗಳ ಪ್ರದರ್ಶನ ನಡೆಯಿತು. ಪ್ರಾಸ್ತಾವಿಕದೊಂದಿಗೆ ಶಾಲಾ ಮುಖ್ಯೋಪಾಧ್ಯಾಯ ಶ್ರೀ.ಪಿ ಶಿವರಾಮ ಭಟ್ ರವರು ಎಲ್ಲರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಅಭಯ್.ವೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕೆ. ಶಿವರಾಮ್ ಭಟ್‌ರವರು ವಂದನಾರ್ಪಣೆಗೈದರು.








No comments:

Post a Comment