Wednesday, June 10, 2015

ಜೂನ್. 5. ವಿಶ್ವ ಪರಿಸರ ದಿನ
ಆಧುನಿಕ ಯುಗದ ಅಭಿವೃದ್ಧಿ ಪಥದ ಬೆಳವಣಿಗೆಯು ಪರಿಸರಕ್ಕೆ ಪೂರಕವಾಗುವಂತಿದ್ದು, ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 5 ರಂದು ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲೂ ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಲು ಹಾಗೂ ಮಕ್ಕಳನ್ನೂ ಪರಿಸರ ಸ್ನೇಹಿಯನ್ನಾಗಿಸಲು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.  ಮಕ್ಕಳು ಇದಕ್ಕೆ ಪೂರಕವಾಗಿ ಪ್ರಬಂಧ  ಮಂಡನೆ ಹಾಗೂ ಹಾಡುಗಳನ್ನು ಪ್ರಸ್ತುತ ಪಡಿಸಿದರು. ನಂತರ ಪ್ರತಿ ತರಗತಿಯಲ್ಲೂ ಮಕ್ಕಳ ಮಟ್ಟಕ್ಕನುಗುಣವಾಗಿ ಪರಿಸರ ನಿರೀಕ್ಷಣೆ, ಚಿತ್ರ ರಚನೆ, ಭಿತ್ತಿಪತ್ರ ತಯಾರಿ, ಘೋಷಣಾ ಫಲಕ ತಯಾರಿ, ಪರಿಸರ ಸಂಚಿಕೆಯನ್ನು ತಯಾರಿಸಲಾಯಿತು. ಅರಣ್ಯ ಇಲಾಖೆಯ ವತಿಯಿಂದ ದೊರೆತ, ಬೇವು, ಅಶ್ವತ್ಥ, ನೆಲ್ಲಿ, ನೇರಳೆ, ಇತ್ಯಾದಿ ನಾನಾ  ಜಾತಿಯ ಮರಗಳ ಸಸಿಯನ್ನು ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಅವರು ’ಈ ಗಿಡವನ್ನು ನೀವು ಹಿರಿಯರ ಸಹಾಯದಿಂದ ನೀವೇ ಸ್ವತಃ ನೆಟ್ಟು ಬೆಳಿಸಿ, ಪೋಷಿಸಬೇಕು’ ಎಂಬ ಸಂದೇಶವನ್ನಿತ್ತರು.   



No comments:

Post a Comment