Saturday, January 28, 2017

         ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞ
ನಮ್ಮ  ಶಾಲೆಯಲ್ಲಿ ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞವು ನಡೆತು. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ, ಮಣ್ಣಿನ ಫಲವತ್ತತೆ, ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು. ನೀರನ್ನು ಕಲುತಗೊಳಿಸುವುದರ ಜೊತೆಗೆ ನಾನಾ ರೋಗಗಳಿಗೆ ನಾಂದಿ ಹಾಡುವುದು, ಉರಿಸುವುದರಿಂದ ವಾಯು ಮಾಲಿನ್ಯದ ಜೊತೆಗೆ ಓಝೋನ್ ಪದರಕ್ಕೂ ಹಾನಿ  ಮಾಡುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆಗೆ ಕೊನೆ ಎನ್ನುವುದಿಲ್ಲ. ಆದರೂ ನಾವು ಉಪಯೋಗಿಸುವ ಪ್ಲಾಸ್ಟಿಕ್‌ಗೆ ಮಿತಿಯೇ ಇಲ್ಲ. 'ಪರಿಸರಕ್ಕೆ ಮಾರಕವಾಗಿರುವ  ಪ್ಲಾಸ್ಟಿಕ್  ಬಳಕೆಗೆ ಮಿತಿರಲಿ'.  ಮದ್ಯ ಮಾದಕ  ವಸ್ತುಗಳು,  ಸಮಾಜ ದ್ರೋಹಿ ಚಟುವಟಿಕೆಗಳು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ  ಮೇಲೆ  ಯಾವುದೇ ಪರಿಣಾಮವನ್ನು ಬೀರದಂತೆ ಜಾಗೃತಗೊಳಿಸುವುದು.  ಈ ಸಂದೇಶವನ್ನು ಮಕ್ಕಳಿಗೆ ಮನದಟ್ಟು  ಮಾಡಲು  ಶಾಲಾ  ಎಸ್ಸೆಂಬ್ಲಿಯಲ್ಲಿ  ಶಾಲಾ  ಮುಖ್ಯೋಪಾಧ್ಯಾಯ      ಪಿ ಶಿವರಾಮ್ ಭಟ್ ಇವರು ಪ್ರತಿಜ್ಞೆಯನ್ನು ಮಂಡಿಸಿದರು. ವಿಜ್ಞಾನ ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ಈ ವಿಚಾರವಾಗಿ ಸಾಕಷ್ಟು ಮಾಹಿತಿಯನ್ನು ಮಕ್ಕಳಿಗಿತ್ತರು. ನಂತರ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಪರಿಸರವನ್ನು ಶುಚಿಗೊಳಿಸಿದರು.  
 
ಹಾಗೆಯೇ ನಮ್ಮ  ಶಾಲೆಯಲ್ಲಿ ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞವು ರಕ್ಷಕ ಶಿಕ್ಷಕ ಸಂಘ, ವಿವಿಧ ಕ್ಲಬ್‌ಗಳ ಸಹಕಾರದೊಂದಿಗೆ ನಡೆತು. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ, ಮಣ್ಣಿನ ಫಲವತ್ತತೆ, ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು. ನೀರನ್ನು ಕಲುತಗೊಳಿಸುವುದರ ಜೊತೆಗೆ ನಾನಾ ರೋಗಗಳಿಗೆ ನಾಂದಿ ಹಾಡುವುದು, ಉರಿಸುವುದರಿಂದ ವಾಯು ಮಾಲಿನ್ಯದ ಜೊತೆಗೆ ಓಝೋನ್ ಪದರಕ್ಕೂ ಹಾನಿ  ಮಾಡುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆಗೆ ಕೊನೆ ಎನ್ನುವುದಿಲ್ಲ. ಆದರೂ ನಾವು ಉಪಯೋಗಿಸುವ ಪ್ಲಾಸ್ಟಿಕ್‌ಗೆ ಮಿ ತಿಯೇ ಇಲ್ಲ . 'ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಮಿತಿರಲಿ'. ಮದ್ಯ ಮಾದಕ ವಸ್ತುಗಳು, ಸಮಾಜ ದ್ರೋಹಿ ಚಟುವಟಿಕೆಗಳು , ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೇಲೆ ಯಾವುದೇ ಪರಿಣಾಮವನ್ನು ಬೀರದಂತೆ ಜಾಗೃತಗೊಳಿಸುವುದು. ಕೇರಳದ  ಸಾಮಾಜಿಕ  ಅಭಿವೃದ್ಧಿಗೆ  ಮೈಲುಗಲ್ಲಾಗಿರುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉತ್ತಮ ಗುಣಮಟ್ಟದವುಗಳನ್ನಾಗಿಸುವ ಮಹಾಯಜ್ಞಕ್ಕೆ ಪ್ರತಿಜ್ಞೆಯನ್ನು ಸ್ವೀಕರಿಸಲಾತು.

ಈ ವಿಚಾರದ  ಕುರಿತಾಗಿ  ಮಾಹಿತಿಯನ್ನು ಶಾಲಾ ರಕ್ಷಕ ಶಿಕ್ಷಕರಿಗೆ ಹಾಗೂ ವಿವಿಧ ಕ್ಲಬ್ ಗಳ ಸದಸ್ಯರಿಗೆ ಶಾಲಾ ಶಿಕ್ಷಕ ಶ್ರೀ ಸಚ್ಚಿದಾನಂದ  ಇವರು  ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಲಾತು.
ಹಾಗೇಯೇ ಪಂಚಾಯತ್ ಸದಸ್ಯೆ ಕು| ಚಂದ್ರಾವತಿ ಎಂ, ಪಿ.ಟಿ.ಎ ಅಧ್ಯಕ್ಷೆ ಸುಚಿತ್ರಾ ಮುಂಗ್ಲಿಕಾನ, ಶಾಲಾ ಮುಖ್ಯೋಪಾಧ್ಯಾಯ ಪಿ ಶಿವರಾಮ್ ಭಟ್ ಉಪಸ್ಥಿತರಿದ್ದರು.  ನಂತರ ರಕ್ಷಕ ಶಿಕ್ಷಕ ಸಂಘ,ವಿವಿಧ ಕ್ಲಬ್‌ಗಳು ಶಾಲಾ ಪರಿಸರವನ್ನು ಶುಚಿಗೊಳಿಸಿದರು. 

 
 
                             
                          










No comments:

Post a Comment