Monday, June 12, 2017

                                     ಸಂಭ್ರಮದ ಶಾಲಾ ಪ್ರಾರಂಭೋತ್ಸವ
ನಮ್ಮ ಶಾಲೆಯಲ್ಲಿ ಬೇಸಗೆಯ ಸುದೀರ್ಘ ರಜಾ ಅನುಭವದ ನಂತರ ೨೦೧೭-೧೮ರ ನೂತನ ಶೈಕ್ಷಣಿಕ ವರ್ಷಕ್ಕೆ ಆಗಮಿಸುವ ಪುಟಾಣಿ ಮಕ್ಕಳನ್ನೂ, ಹಿರಿಯ ಮಕ್ಕಳನ್ನೂ, ಶಿಕ್ಷಕ-ರಕ್ಷಕ ಬಳಗವನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸುವ ಶಾಲಾ ಪ್ರವೇಶೋತ್ಸವವನ್ನು ವೈವಿಧ್ಯಮಯವಾಗಿ ಶಾಲೆಯಲ್ಲಿ ಆಚರಿಸಲಾತು. ಶಾಲಾ ರೇಡಿಯೋ ಕೇಂದ್ರ 'ಸ್ವರ್ಗ ತರಂಗ' ದ ಮೂಲಕ ಪ್ರವೇಶೋತ್ಸವ ಗೀತೆಯನ್ನು ಕೇಳಿಸಲಾತು. ನಂತರ ಭವ್ಯ ಮೆರವಣಿಗೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಂಚಾಯತ್ ಸದಸ್ಯೆ ಕು|ಚಂದ್ರಾವತಿ ಇವರು ಪ್ರವೇಶೋತ್ಸವ ಬ್ಯಾನರನ್ನು ಮಕ್ಕಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸ್ಥಳೀಯ ಶಾಸ್ತಾ ಕ್ಲಬ್‌ನ ಸದಸ್ಯರಿಂದ ನ್ಯಾಸಿಕ್ ಬ್ಯಾಂಡ್ ಕೇರಳೀಯ ಉಡುಪನ್ನು ಧರಿಸಿದ ವಿದ್ಯಾರ್ಥಿನಿಯರು ಪುಗ್ಗೆ, ಡಿಸ್ ಪ್ಲೇ ಕೋಲುಗಳನ್ನು ಹಿಡಿದ ಮಕ್ಕಳ ದಂಡು ವಿಶೇಷವಾದ ಮೆರವಣಿಗೆಗೆ ಮೆರುಗನ್ನು ನೀಡುವುದರ ಮೂಲಕ ಮನೋರಂಜನೆತ್ತರು. ನಂತರ ನವಾಗತ ಮಕ್ಕಳಿಗೆ ಶಾಲಾ ಅಧ್ಯಾಪಿಕೆಯರು ಆರತಿಯನ್ನು ಬೆಳಗಿ ಹಣೆಗೆ ತಿಲಕವನ್ನು ಇಟ್ಟು ಸ್ವಾಗತಿಸಿದರು. ಮಕ್ಕಳು ವಿದ್ಯಾಧಿದೇವತೆಗೆ ಪುಷ್ಪಾರ್ಚನೆಯನ್ನು ಮಾಡಿ ನಮಸ್ಕರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತೃಸಂಘದ ಅಧ್ಯಕ್ಷೆ  ಶ್ರೀಮತಿ ಮಂಜರಿ ನವೀನ್ ರವರು ಮಕ್ಕಳು ಆಟಪಾಠದ ಜೊತೆಗೆ ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮವಾಗಿ ವಿದ್ಯಾರ್ಥಿಜೀವನವನ್ನು ಹೊಂದಬಹುದು ಎಂದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್‌ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ೧ನೇ ತರಗತಿಯ ಮಕ್ಕಳಿಗೆ ಶ್ರೀಮತಿ ಮತ್ತು ಶ್ರೀ ಅರುಣ್ ಕುಮಾರ್ ವಾಲ್ತಾಜೆ ಬೆಂಗಳೂರು ಇವರ ಕೊಡುಗೆಯಾಗಿ ನೀಡಿದ ಸ್ಲೇಟು, ಬ್ಯಾಗ್‌ಗಳನ್ನು ವಿತರಿಸಲಾಯಿತು. ಶಿಕ್ಷಕ ಶ್ರೀ ಸಚ್ಚಿದಾನಂದ ಎಸ್ ರವರು ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾ ಕುಮಾರಿ ಯವರು ಸ್ವಾಗತಿಸಿ, ಶಿಕ್ಷಕ ಎಸ್.ಎನ್ ವೆಂಕಟವಿದ್ಯಾಸಾಗರ ರವರು ವಂದಿಸಿದರು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರೆಲ್ಲರೂ ಕಪ್ಪು ಪಟ್ಟಿಯನ್ನು ಧರಿಸುವುದರ ಮೂಲಕ ಮಲಯಾಳ ಕಡ್ಡಾಯ ಹೇರಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ. ಗೀತಾಕುಮಾರಿ ಯವರು ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಿದರು.







No comments:

Post a Comment