Friday, February 19, 2016



ಗಣಿತ ಮೆಟ್ರಿಕ್ ಶಿಬಿರ -ಎಲ್.ಪಿ ತರಗತಿ
ನಮ್ಮ ಶಾಲೆಯಲ್ಲಿ ೩ &೪ ನೇ ತರಗತಿಯ ಮಕ್ಕಳಿಗಾಗಿ ೨ ದಿನದ ಗಣಿತ ಮೆಟ್ರಿಕ್ ಶಿಬಿರವು ಶಾಲಾ ಮಟ್ಟದಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಕಾರ್ಯಕ್ರಮಕ್ಕೆ ಶುಭಕೋರಿದರು. ಮುಖ್ಯೋಪಾಧ್ಯಾಯರೇ ಮಕ್ಕಳು ತಯಾರಿಸಿದ ಬ್ಯಾಡ್ಜು ಮಕ್ಕಳಿಗೆ ವಿತರಿಸಿದರು. ಶಿಬಿರದಲ್ಲಿ ಭಾರ, ಉದ್ದ, ಲೀಟರ್‌ಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕ ಅನುಭವಪಡುವ ಚಟುವಟಿಕೆಗಳು, ಗಣಿತ  ಆಟಗಳು, ನಿರ್ಮಾಣ ಚಟುವಟಿಕೆಗಳಿದ್ದವು. ಶಿಕ್ಷಕಿಯರಾದ ಶ್ರೀಮತಿ ಗೀತಾಂಜಲಿ ಹಾಗೂ ಶ್ರೀಮತಿ ಅಶ್ವಿನಿ ಟೀಚರ್ ರವರು ಶಿಬಿರ  ಚಟುವಟಿಕೆಗಳನ್ನು ನಡೆಸಿಕೊಟ್ಟರು. 





No comments:

Post a Comment