Wednesday, February 10, 2016




ಸಂಭ್ರಮದ ವಾರ್ಷಿಕೋತ್ಸವ ಹಾಗೂ ಹೆತ್ತವರ ದಿನಾಚರಣೆ

ನಮ್ಮಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಹೆತ್ತವರ ದಿನಾಚರಣೆಯು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಇವರು ದ್ವೀಪಜ್ವಾಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಸಭೆಯಲ್ಲಿ ಬದಿಯಡ್ಕ ವಿಶ್ರಾಂತ ಪ್ರಾಂಶುಪಾಲರು ಶ್ರೀ ಬೇ. ಸೀ ಗೋಪಾಲಕೃಷ್ಣ ಇವರು ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಮಾತನಾಡಿದರು. ಅಭ್ಯಾಗತರಾಗಿ ಕುಂಬಳೆ  ಉಪಜಿಲ್ಲೆ ಸಹಾಯಕ ವಿಧ್ಯಾಧಿಕಾರಿಯಾದ ಶ್ರೀ ಕೈಲಾಸಮೂರ್ತಿ ಮಾತನಾಡಿ ಮಕ್ಕಳ ಚಟುವಟಿಕೆಯ ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ಮನವಿ ಮಾಡಿಕೊಟ್ಟರು. ಹಾಗೇಯೇ ಶುಭಾಶಂಸನೆಗಾಗಿ ಬಂದಂತಹ ನಾಲಾಂದಾ  ಮಹಾವಿದ್ಯಾಲಯದ ಪ್ರಾಧ್ಯಾಪಿಕೆ ಪೆರ್ಲ ಹಾಗೂ ಎಣ್ಮಕಜೆ ಗ್ರಾಮಪಂಚಾಯತ್ ವಾರ್ಡ್ ಸದಸ್ಯೆ ಕುಮಾರಿ ಚಂದ್ರಾವತಿ ಇವರು ಶುಭಾಸಂಶನೆ ಗೈದರು.  ಹಲವಾರು ಕ್ಷೇತ್ರದಲ್ಲಿ ಪ್ರತಿಭೆಯುಳ್ಳ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಇವರಿಗೆ ಮತ್ತು ಅಂಗನವಾಡಿ ಉತ್ತಮ ಟೀಚರು ಎಂಬ ಪ್ರಶಸ್ತಿ ಪಡೆದಿರುವ ಎಣ್ಮಕಜೆ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ ಕುಮಾರಿ ಚಂದ್ರಾವತಿ, ಹಾಗೂ ಸೂರಂಬೈಲು ಕಟ್ಟೆ ಆಶಾ ಕಾರ್ಯಕರ್ತೆಯಾದ  ಶ್ರೀಮತಿ  ಚಂದ್ರಾವತಿ ಇವರಿಗೆ ಫಲ ಪುಷ್ಪ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಸ್ವರ್ಗ ಅಂಗನವಾಡಿ, ಶಾಲಾ ಮಕ್ಕಳಿಗೆ, ಹೆತ್ತವರಿಗೆ ನಡೆಸಲಾದ ಹತ್ತು ಹಲವು ವಿಶಿಷ್ಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಪಿ.ಶಿವರಾಮ್ ಭಟ್‌ರವರು ಗತವರ್ಷದ  ಶಾಲಾ ಸಮಗ್ರ ವರದಿಯನ್ನು ಮಂಡಿಸಿದರು. ೭ ನೇ ತರಗತಿಯ ವಿದ್ಯಾರ್ಥಿ ಗಿರೀಶ ವಿವೇಕಾನಂದರ ವೇಷವನ್ನು ಧರಿಸಿ ಸ್ವಾಮೀ ವಿವೇಕಾನಂದರ ಚಿಕಾಗೋ ಭಾಷಣದ ಅವತರಣಿಕೆಯಾಯಿತು. ಶಾಲಾ ವ್ಯವಸ್ಥಾಪಕರಾದ ಹೃಷಿಕೇಶ್ ವಿ.ಎಸ್, ಪಿ.ಟಿ.ಎ ಅಧ್ಯಕ್ಷೆ ಸುಚಿತ್ರ ಮುಂಗ್ಲಿಕಾನ ಇವರು ಉಪಸ್ಥಿತರಿದ್ದರು.
ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಇವರು ಎಲ್ಲರನ್ನು ಸ್ವಾಗತಿಸಿ, ಶಿಕ್ಷಕ ಎಸ್.ಎನ್ ವೆಂಕಟವಿದ್ಯಾಸಾಗರರು ಧನ್ಯವಾದ ಗೈದರು. ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಇದರೊಂದಿಗೆ ಉಪಾಹಾರದ ವ್ಯವಸ್ಥೆ ವಿತರಿಸಿತ್ತು. ನಂತರ ಶಾಲಾ ಮಕ್ಕಳಿಂದ ಹಾಗೂ ಹೆತ್ತವರಿಂದ ವಿವಿಧ ನ್ಯತ್ಯೋತ್ಸವ ಕಾರ್ಯಕ್ರಮ ನಡೆಯಿತು. 
























No comments:

Post a Comment